ಭಾರತದಲ್ಲಿ ಮಾತ್ರ ಹೆಣ್ಣನ್ನು ತಾಯಿ ಸ್ವರೂಪದಲ್ಲಿ ಕಾಣಲು ಸಾಧ್ಯ: ಶಿವಯೋಗಿ ಸ್ವಾಮೀಜಿ
ಅರಕಲಗೂಡು: ಪ್ರಪಂಚದ ಇತರೆ ದೇಶಗಳಲ್ಲಿ ಹೆಣ್ಣನ್ನು ಭೋಗದ ರೂಪದಲ್ಲಿ ಕಂಡರೆ, ಭಾರತದಲ್ಲಿ ಮಾತ್ರ ಹೆಣ್ಣನ್ನು ತಾಯಿ ರೂಪದಲ್ಲಿ ಕಾಣುತ್ತೇವೆ ಎಂದು ಕೆ.ಅರ್. ಪೇಟೆ ಕಾಪನಹಳ್ಳಿ ಗವಿಮಠದ ಸ್ವತಂತ್ರ ಬಸವಲಿಂಗ ಶಿವಯೋಗಿ ಸ್ವಾಮೀಜಿ ಹೇಳಿದರು.
ಕೊಣನೂರು ಪಟ್ಟಣದ ವೈ.ಎಸ್.ಅರ್. ಕಲ್ಯಾಣ ಮಂಟಪದಲ್ಲಿ ನಡೆದ ವಿವೇಕ ಜಾಗೃತ ಬಳಗ ಹಾಗೂ ಸಾಲಿಗ್ರಾಮದ ಅಂಗ ಸಂಸ್ಥೆಯಿಂದ ವಿವೇಕ ಸಂಪದ ಓದುಗರ ಸಮಾವೇಶ ಹಾಗೂ ಆಧ್ಯಾತ್ಮಿಕ ಸಮ್ಮಿಲನದ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಭೂಮಿ, ನೀರು, ಪ್ರಕೃತಿ ತಾಯಿ ಸಮಾನ ಎಂದರು.
ಸ್ವಾಮಿ ವಿವೇಕಾನಂದರ ಜೀವನ ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶನವಾಗಬೇಕು. ಯುವ ಜನತೆ ಉನ್ನತ ಧ್ಯೆಯ ಗುರಿಯನ್ನಿರಿಸಿಕೊಂಡು ಮುನ್ನುಗ್ಗಿದಾಗ ಜಯ ದೂರವಿಲ್ಲ. ಯುವ ಜನತೆ ನಿರಾಶರಾಗಬೇಕಾದ ಅತಗತ್ಯವಿಲ್ಲ. ಇಂದು ಎಲ್ಲಾ ರಂಗಗಳಲ್ಲೂ ಯುವಕರಿಗೆ ಅವಕಾಶಗಳು ಕೈಬೀಸಿ ಕರೆಯುತ್ತಿವೆ. ಅದರೆ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಕೆಲಸವನ್ನು ಯುವ ಜನತೆ ಮಾಡಬೇಕು ಮನುಷ್ಯ ಎಷ್ಟು ಸಮಯ ಬದುಕಿದನು ಎನ್ನುವುದು ಮುಖ್ಯವಲ್ಲ. ಹೇಗೆ ಬದುಕಿದನು ಎನ್ನುವುದು ಮುಖ್ಯ ಎಂದ ಅವರು ಇರುವಷ್ಟು ಕಾಲ ಒಳ್ಳೆಯ ವ್ಯಕ್ತಿತ್ವದವರಾಗಿ ಬಾಳೋಣ ಎಂದರು.
ಪ್ರಧಾನ ಚಿಂತಕ ಸುದೇಶ್ರಾವ್, ದ. ವಲಯ ಅಧಿಕಾರಿ ಪ್ರೇಮಕಲ ದಾಮೋದರ, ಜಾಗೃತ ಬಳಗ ಅಧ್ಯಕ್ಷ ಡಾ. ನಟರಾಜ್, ಹಾಸನ ವಿವೇಕ ಜಾಗೃತ ಬಳಗ ಅಧ್ಯಕ್ಷೆ ಪ್ರೇಮಕುಮಾರಿ, ಹೊಳೆನರಸಿಪುರ ಅಧ್ಯಕ್ಷ ರಾಘವೇಂದ್ರ, ಅರಸೀಕೆರೆ ಅಧ್ಯಕ್ಷ ಸುಬ್ಯಹ್ಮಣ್ಯ, ಚನ್ನರಾಯಪಟ್ಟಣ ಅಧ್ಯಕ್ಷ ರಾಮು, ತಾಲೂಕು ಕನ್ನಡ ಸಾಹಿತ್ತ ಪರಿಷತ್ ಪ್ರಧಾನ ಕಾರ್ಯದರ್ಶಿ ಕೊಣನೂರು ಹೊಯ್ಸಳ ಇತರರು ಮಾತನಾಡಿದರು.
ಮುಖಂಡ ನಾಗಣ್ಣ, ಕಾಂತರಾಜ್, ಪಾವನಸತೀಶ್, ಶೈಲಶ್ರೀ ಪಾರ್ವತಮ್ಮ ಇತರರು ಇದ್ದರು. ವಿಜಯಕೃಷ್ಣ ಹೊಯ್ಸಳ ನಿರೂಪಿಸಿದರು. ಹೇಮಾವತಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

