ಕಾನೂನಿನಿಂದ ಸಮಸ್ಯೆ ಪರಿಹಾರ ಅಸಾಧ್ಯ: ಸಾಹಿತಿ ಬಾನುಮುಷ್ತಾಕ್
ಹಾಸನ: ಕಾನೂನುಗಳು ಎಷ್ಟೇ ಇದ್ದರೂ ಒಂದು ಸಾಮಾಜಿಕ ಬದಲಾವಣೆಯಾಗದೆ ಕೇವಲ ಕಾನೂನುಗಳಿಂದ ಮಾತ್ರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಎಂದು ಎಂದು ಸಾಹಿತಿ ಬಾನುಮುಷ್ತಾಕ್ ಅಭಿಪ್ರಾಯ ಪಟ್ಟರು.
ನಗರದ ಸ್ವಾಭಿಮಾನಿ ಭವನದಲ್ಲಿ ಅಸ್ಪೃಶ್ಯತೆ, ಜತಿ ತಾರತಮ್ಯ, ಪಂಕ್ತಿಭೇದ, ಮಡೆಸ್ನಾನ, ಸಾಮಾಜಿಕ ತಾರತಮ್ಯಗಳ ಕುರಿತು ದಲಿತ ಹಕ್ಕುಗಳ ಸಮಿತಿ ಸಿಪಿಐ(ಎಂ) ನೇತೃತ್ವದಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ ಮಾತನಾಡಿದ ಅವರು, ಇಡೀ ಸಮಾಜವೇ ತಾರತಮ್ಯಗಳ ಮೇಲೆ ನಿಂತಿದ್ದು ಇಂತಹ ಸಮಸ್ಯೆಗಳನ್ನು ಬಗೆಹರಿಸುವುದು ಒಂದು ಸಾಮಾಜಿಕ ಹೊಣೆಗಾರಿಕೆಯಾಗಿದೆ ಎಂದರು.
ಸಾಹಿತಿ ರೂಪ ಹಾಸನ ಮಾತನಾಡಿ, ಸಾಮಾಜಿಕ ತಾರತಮ್ಯಗಳ ವಿರುದ್ದ ಐಕ್ಯ ಕಾರ್ಯಚರಣೆಯ ಅವಶ್ಯಕತೆ ಇದೆ. ಇತ್ತೀಚಿನ ದಿನಗಳಲ್ಲಿ ಸಮೂಹ ಮಾಧ್ಯಮಗಳು ಮೌಡ್ಯದ ವಿರುದ್ದ ಜಾಗೃತಿ ಮೂಡಿಸುವ ಬದಲು ಮೌಡ್ಯ, ಕಂದಾಚಾರಗಳನ್ನು ಯತೇಚವಾಗಿ ಬಿತ್ತುವ ಕೆಲಸವನ್ನು ಮಾಡುತ್ತಿದ್ದು ಇದು ಸಾಮಾಜದ ಸ್ವಾಸ್ಥ್ಯವನ್ನು ಹಾಳುಮಾಡುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ದಲಿತ ಮುಖಂಡ ಕೆ.ಈರಪ್ಪ ಮಾತನಾಡಿ, ನಮ್ಮ ಸುತ್ತಮುತ್ತ ಸಾವಿರಾರು ರೀತಿಯ ಜಾತಿ ತಾರತಮ್ಯಗಳಿದ್ದು ಇವುಗಳನ್ನು ನಿರಂತರವಾಗಿ ಮುಂದುವರೆಸಲು ಪುರೋಹಿತಶಾಹಿ ನಿರಂತರವಾಗಿ ಕೆಲಸ ಮಾಡುತ್ತಿದ್ದು ದಲಿತರ ಮೇಲಿನ ದೌರ್ಜನ್ಯ ದಬ್ಬಾಳಿಕೆಗಳನ್ನು ಹಿಮ್ಮೆಟ್ಟಸಲು ಎಲ್ಲ ಸಂಘಟನೆಗಳು ಒಟ್ಟಿಗೆ ಹೋರಾಟ ನಡೆಸಬೇಕಾದ ಅನಿವಾರ್ಯತೆಯಲ್ಲಿ ನಾವಿದ್ದೇವೆ ಎಂದರು.
ಹಿರಿಯ ಪತ್ರಕರ್ತ ಆರ್.ಪಿ.ವೆಂಕಟೇಶಮೂರ್ತಿ ಮಾತನಾಡಿ, ರಾಜ್ಯ ಮಟ್ಟದ ಪಂಕ್ತಿ ಭೇದ, ಮಡೆಸ್ನಾನದಂತಹ ವಿಚರಗಳಿಗೆ ಪ್ರತಿರೋದವನ್ನು ವ್ಯಕ್ತಪಡಿಸುವುದರ ಜೊತೆಗೆ ಜಿಲ್ಲೆಯ ಸಾಮಾಜಿಕ ತಾರತಮ್ಯದ ವಿಚಾರಗಳನ್ನು ಗುರುತಿಸಿ ಕೈಗೆತ್ತಿಕೊಂಡು ಪ್ರಬಲ ಹೋರಾಟಗಳನ್ನು ರೂಪಿಸಬೇಕಿದೆ ಎಂದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ವಿ.ಸುಕುಮಾರ್ ಮಾತನಾಡಿದರು. ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹೆತ್ತೂರು ನಾಗರಾಜ್ ಮಾತನಾಡಿ, ಜಿಲ್ಲೆಯ ರಾಗಿಮರೂರಿನಲ್ಲಿ ಜೀತ ಪದ್ದತಿ ಇನ್ನೂ ಜೀವಂತವಾಗಿದ್ದು ಈ ಪ್ರಕರಣವನ್ನು ಮುಚ್ಚಿಹಾಕಲು ಜಿಲ್ಲಾಡಳಿತ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ ಎಂದರು. ಸಂಚಾಲಕ ಧರ್ಮೇಶ್ ಅಧ್ಯಕ್ಷತೆ ವಹಿಸಿದ್ದರು. ಕೃಷ್ಣದಾಸ್, ಡಾ. ಕುಶಾಲಬರಗೂರು, ಡಾ. ಜನಾರ್ದನ್, ಜಿವಿಕ ಯೋಗೀಶ್, ವೆಂಕಟೇಶ್, ಕಿಶೋರ್ಕುಮಾರ್, ನವೀನ್ಕುಮಾರ್, ಶ್ರೀನಿವಾಸ್ ಸುರೇಶ್ಗುರೂಜಿ, ವಿಜಯ್ಕುಮಾರ್ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

