ಹಾಸನ

ಎಲ್ಲ ವರ್ಗದ ಸಮುದಾಯ ಭವನಗಳಿಗೆ ಅನುದಾನ: ಶಾಸಕ ಬಾಲಕೃಷ್ಣ ಭರವಸೆ

Published On :

ಕ.ಪ್ರ.ವಾರ್ತೆ   ಚನ್ನರಾಯಪಟ್ಟಣ   ಸೆ.2
ಪಟ್ಟಣದ ಎಲ್ಲಾ ವರ್ಗದ ಸಮುದಾಯ ಭವನಗಳಿಗೆ ಅನುದಾನ ನೀಡಲಾಗುವುದು.  ಆಯಾಯ ಸಮಾಜದ ಹಾಗೂ ಪಟ್ಟಣ ವಾಸಿಗಳ ಚಟುವಟಿಕೆಗಳಿಗೆ ಅನುವು ಮಾಡಲು ಸ್ವಂದಿಸಲಾಗುವುದು ಎಂದು ಶಾಸಕ ಸಿ. ಎನ್. ಬಾಲಕೃಷ್ಣ ಹೇಳಿದರು.
ಅವರು ಪಟ್ಟಣದ ಕೋಟೆಯಲ್ಲಿನ ನೇಕಾರ ಕುರುಹಿನಶೆಟ್ಟಿ ಸಮುದಾಯ ಭವನ ಕಟ್ಟಡ ಪುನರ್ ಪ್ರಾರಂಭ ಸಂಬಂಧ ನಡೆದ ಸಮಾರಂಭದಲ್ಲಿ ಮಾತನಾಡಿದರು.  ನಗರ ಸ್ವಚ್ಛತೆ ಹಾಗೂ ನೈರ್ಮಲ್ಯತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬರುವ ಸವಲತ್ತುಗಳನ್ನು ತರುವ ಮೂಲಕ ಪಟ್ಟಣವನ್ನು ಸ್ವಚ್ಚತಾ ನಗರವಾಗಿಸಲು ಹೆಚ್ಚು ಆದ್ಯತೆ ಕೊಡಬೇಕಾಗಿದೆ. ಇದಕ್ಕೆ ನಾಗರಿಕರ ಸಹಕಾರ ಅಗತ್ಯ ಎಂದು ಹೇಳಿದರು.
ಕಸ ವಿಲೇವಾರಿಗೆ ಇನ್ನು ಹೆಚ್ಚಿನ ವಾಹನಗಳನ್ನು ತರಿಸಿ ಸ್ವಚ್ಛತೆ ಕಾಪಾಡುವಲ್ಲಿ ಮುಂದಾಗಿದ್ದು ಮಲೇರಿಯಾ, ಡೆಂಘೀ ಇತ್ಯಾದಿ ಕಾಯಿಲೆಗಳಿಂದ ಮುಕ್ತರಾಗಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಗಮನಹರಿಸ ಬೇಕಾಗಿದೆ. ಪಟ್ಟಣದ ಕಸವನ್ನು ನಲ್ಲೂರಿನ ಬಳಿ ಸುಮಾರು 18 ಎಕರೆ ಪ್ರದೇಶಕ್ಕೆ ರವಾನಿಸಲಾಗುತ್ತಿದೆ. ಪಟ್ಟಣದ ಅಕ್ಕಪಕ್ಕದಲ್ಲೇ ಕಸ ಹಾಕಿ ವಾತಾವರಣ ಕೆಡಿಸುವುದನ್ನು ಕಡಿಮೆ ಮಾಡಲಾಗಿದೆ ಎಂದು ಹೇಳಿದರು.
ಸಂಘದ ಅಧ್ಯಕ್ಷ ಪುಟ್ಟಣ್ಣ ಮಾತನಾಡಿ, ಹಿಂದುಳಿದ ವರ್ಗದ ಪ್ರಗತಿ ಕಾಣುವಲ್ಲಿ ಸಣ್ಣಪುಟ್ಟ ದೋಷಗಳಿಂದ ಕೆಲವು ವೇಳೆ ಕುಂಠಿತವಾಗುತ್ತದೆ. ಅದನ್ನೇ ಪ್ರಾಧಾನ್ಯತೆ ಮಾಡದೆ ಎಲ್ಲರೂ ಸಹಕರಿಸಿದಲ್ಲಿ ಉತ್ತಮ ಬೆಳವಣಿಕೆಯಾಗುತ್ತದೆ. ಈ ಕಟ್ಟಡ ನಿರ್ಮಾಣಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.
ಗೌರವಾಧ್ಯಕ್ಷ ತಿಮ್ಮಶೆಟ್ಟಿ, ಜಿಪಂ ಸದಸ್ಯ ಶಿವಶಂಕರ್ಕುಂಠೆ, ಪುರಸಭೆ ಸದಸ್ಯ ಸಿ. ಜೆ. ನಟರಾಜ್, ಕಲ್ಪನಾ ಸುರೇಶ್, ಮಾಜಿ ಸದಸ್ಯ ರವಿಶೆಟ್ಟಿ ನಳಿನಿ, ಮೆಡಿಕಲ್ ವೆಂಕಟೇಶ್, ಗಿರೀಶ್, ಪ್ರಸಾದ್, ಶಿವಣ್ಣ, ಗೋಪಿ, ವೇಣು, ಉಮಾಶಂಕರ್, ಮಹಿಳಾ ಸಂಘದ ಅಧ್ಯಕ್ಷೆ ಮಮತಾ, ವಿಜಯಲಕ್ಷ್ಮಿ, ರಂಜಿನಿ, ಸರಸ್ವತಿ, ಸುಷ್ಮ ಇತರರು ಇದ್ದರು. ತೀರ್ಥೇಶ್ ಸ್ವಾಗತಿಸಿದರು. ಹೇಮ ನಿರೂಪಿಸಿದರು. ಜಯಶ್ರೀ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.