ಹಾಸನ

ಬೇಲೂರು- ಹಳೇಬೀಡು ಭಾಗದ 28 ಕೆರೆಗಳಿಗೆ ಯಗಚಿ ನೀರು: ಶಾಸಕ ರುದ್ರೇಶ್ಗೌಡ ಭರವಸೆ

Published On :

ಕ.ಪ್ರ. ವಾರ್ತೆ೤ ಜಾವಗಲ್೤ ಸೆ. 6
ಡಿಸೆಂಬರ್ ಅಂತ್ಯದೊಳಗೆ ಬೇಲೂರು-ಹಳೇಬೀಡು ಭಾಗದ ಸುಮಾರು 28 ಕೆರೆಗಳಿಗೆ ಯಗಚಿ ನೀರು ಹರಿಸಲಾಗುವುದೆಂದು ಶಾಸಕ ವೈ.ಎನ್. ರುದ್ರೇಶಗೌಡ ಭರವಸೆ ನೀಡಿದರು.
ಜಾವಗಲ್ ಹೋಬಳಿ ಕೋಳಗುಂದದಲ್ಲಿ ಗೋಮಾತೆಗೆ ಪೂಜೆ ಸಲ್ಲಿಸಿ ಹುಲ್ಲು ನೀಡುವ ಮೂಲಕ ಗೋಶಾಲೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಹೋಬಳಿಯಲ್ಲಿ ಹಿಂದಿಗಿಂತಲೂ ಮುಂಗಾರು ವಿಫಲವಾಗಿದ್ದು ಅಲ್ಪ ಪ್ರಮಾಣದಲ್ಲಿ ರಾಗಿ ಬಿತ್ತನೆ ಕಾಣಬಹುದಾಗಿದೆ ಎಂದರು.
ತೀವ್ರ ಬರಗಾಲಕ್ಕೆ ತುತ್ತಾಗಿರುವ ಹೋಬಳಿಯ ನೈಜ ಚಿತ್ರಣವನ್ನು ಜಲಸಂಪನ್ಮೂಲ ಸಚಿವರ ಗಮನಕ್ಕೆ ತಂದಿದ್ದು, ಹೋಬಳಿಯ ಕೆರೆ ಕಟ್ಟೆಗಳಿಗೆ ಯಗಚಿ ನೀರು ಹರಿಸುವ ಯೋಜನೆ ತಯಾರಾಗುತ್ತಿದೆ. ಮುಂದಿನ ಮಾರ್ಚ್ ವೇಳೆಗೆ ಹೋಬಳಿಯ ಎಲ್ಲ ಕೆರೆ ಕಟ್ಟೆಗಳಿಗೂ ನೀರು ಹರಿಸುವುದಾಗಿ ಭರವಸೆ ನೀಡಿದರು. ಈ ಭಾಗದ ಜನರ ಬೇಡಿಕೆಯಂತೆ ಗೋಶಾಲೆ ಪ್ರಾರಂಭಿಸಿದ್ದು ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದರು.
ಹಾಸನ ಉಪವಿಭಾಗಾಧಿಕಾರಿ ಜಗದೀಶ್ ಮಾತನಾಡಿ, ನಾಡಿನ ಎಲ್ಲೆಡೆ ಉತ್ತಮ ಮಳೆಯಾಗುತ್ತಿದ್ದರೂ ಜಾವಗಲ್ ಸೇರಿದಂತೆ ಅರಸೀಕೆರೆ ತಾಲೂಕಿನಾದ್ಯಂತ ಮಳೆಯಿಲ್ಲದೆ ಬರಗಾಲ ತಲೆದೋರಿದೆ. ಈ ಸಂಬಂಧ ಈಗಾಗಲೇ ರೈತರಿಗೆ 6 ಕೋಟಿ ರು. ಪರಿಹಾರ ನೀಡಿದ್ದು, ಹೆಚ್ಚುವರಿಯಾಗಿ 8 ಕೋಟಿ ರು. ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಗೋಶಾಲೆಯ ಪ್ರಯೋಜನವನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕೆಂದರು. ತಾಲೂಕು ಪಶುಪಾಲನಾ ಸಹಾಯಕ ನಿರ್ದೇಶಕ ಡಾ. ಮಂಜುನಾಥ್ ಮಾತನಾಡಿ ಈ ಭಾಗದ 24 ಗ್ರಾಮಗಳಿಂದ 1800 ಜಾನುವಾರುಗಳ ನೋಂದಣಿಯಾಗಿದ್ದು, ಯಾವುದೇ ತೊಂದರೆಯಿಲ್ಲದಂತೆ ಗೋಶಾಲೆಗೆ ಎಲ್ಲಾ ವ್ಯವಸ್ಥೆ ಮಾಡುವುದಾಗಿ ಹೇಳಿದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ಮೂರ್ತಿ, ಸಹಾಯಕ ನಿರ್ದೇಶಕ ಡಾ. ರಂಗನಾಥ್, ತಾಪಂ ಮಾಜಿ ಸದಸ್ಯ ಮಹಾಲಿಂಗಪ್ಪ, ನಾಗಭೂಷಣಸ್ವಾಮಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಸಣ್ಣಮ್ಮ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷ ಹಾಲಪ್ಪ, ಸದಸ್ಯ  ಪುಟ್ಟಸ್ವಾಮಿ, ಉಪತಹಶೀಲ್ದಾರ್ ಅಶೋಕ್, ಬಸವರಾಜ್, ಮಂಜುನಾಥ್, ಮೂರ್ತಿಶೆಟ್ಟಿ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.