ಹಾಸನ

ಅಲೆಮಾರಿ ಜನಾಂಗದ ಗಣತಿ ಕಾರ್ಯ

Published On :

ಹಾರನಹಳ್ಳಿ: ಆರ್ಥಿಕ ಸಾಮಾಜಿಕ ಹಾಗೂ ಜಾತಿ ಹಾಗೂ ವಸತಿರಹಿತರ ಗಣತಿ 2011ರ ಪ್ರಾರಂಭವಾಗಿದ್ದು ತಾಲೂಕಿನಲ್ಲಿ ನೆಲೆಯಿಲ್ಲದ ಅಲೆಮಾರಿ ಜನಾಂಗದವರನ್ನು ಕೈಬಿಟ್ಟು ಹೋಗಬಾರದು ಎಂಬ ಉದ್ದೇಶದಿಂದ ಅರಸೀಕೆರೆ ತಾಲೂಕು  ಆಡಳಿತ ವಿಶೇಷ ತಂಡ ರಚಿಸಿ ಶುಕ್ರವಾರ ರಾತ್ರಿ ಕೆಲವು ಗ್ರಾಮಗಳಿಗೆ ಭೇಟಿ ನೀಡಿ ಕಾರ್ಯಾಚರಣೆ ನಡೆಸಿತು.
ಹಾರನಹಳ್ಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ತಹಶೀಲ್ದಾರ್ ಕೇಶವಮೂರ್ತಿ ಮಾತನಾಡಿ, 2011ರಲ್ಲಿ ಆರ್ಥಿಕ, ಸಾಮಾಜಿಕ ಹಾಗೂ ಜಾತಿ ಗಣತಿ ಹಾಗೂ ವಸತಿ ರಹಿತರನ್ನು ಪಟ್ಟಿಮಾಡುವ ಉದ್ದೇಶದಿಂದ ಕೆಲವು ಅಲೆಮಾರಿ ಜನಾಂಗದವರು ಊರಿನಿಂದ ಊರಿಗೆ ವ್ಯಾಪಾರ ಇತರೆ ಉದ್ದೇಶದಿಂದ ಸೂರು ಇಲ್ಲದೆ ಬಸ್ನಿಲ್ದಾಣ,  ರೇಲ್ವೆ  ನಿಲ್ದಾಣ ಕೆಲವು ತಾಣಗಳಲ್ಲಿ ವಾಸವಿದ್ದು ಅಂತಹವರನ್ನು ಗುರುತಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಸಾರ್ವಜನಿಕರು ಈ ಬಗ್ಗೆ ಖಚಿತ ಮಾಹಿತಿ ನೀಡಬೇಕು. ಅಲ್ಲದೇ ತಾಲೂಕು ಆಡಳಿತ ನಿರ್ಗತಿಕರಿಗೆ ಸೂರು ಒದಗಿಸುವ ಉದ್ದೇಶ ಹಾಗೂ ಜನಗಣತಿ ಜಾತಿಗಣತಿ ಪಟ್ಟಿಗೆ ಸೇರಿಸುವ ಮಹತ್ವಾಕಾಂಕ್ಷಿ ಹೊಂದಿದೆ. ಇಂತಹ  ವ್ಯಕ್ತಿಗಳು ಗ್ರಾಮಗಳಲ್ಲಿ ಕಂಡುಬಂದರೆ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ತಾಲೂಕು ಆಡಳಿತದವರಿಗೆ ತಿಳಿಸಿ ಎಂದು ಮನವಿ ಮಾಡಿದರು.
ತಾಲೂಕು ಆಡಳಿತ ಸಿಬ್ಬಂದಿ ನಂದಿನಿ,  ಮೇಲ್ವಿಚಾರಕ ಮಂಜುನಾಥ್, ಕಸಬಾ ರಾಜಸ್ವ ನಿರೀಕ್ಷಕ ನಂಜುಂಡಪ್ಪ ಇದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.