ನಮ್ಮ ಮಾತು, ಉಡುವ ಬಟ್ಟೆ, ಆಹಾರ ಪದ್ಧತಿಯಷ್ಟೇ ಸಂಸ್ಕೃತಿಯಲ್ಲ
ಕ.ಪ್ರ. ವಾರ್ತೆ ಹೊಳೆನರಸೀಪುರ ಸೆ. 8
ಇಂದಿನ ದಿನಗಳಲ್ಲಿ ಸುಸಂಸ್ಕೃತ ಆಚರಣೆಗಳನ್ನು ಮರೆಯುತ್ತಿದ್ದು, ಕೇವಲ ನಾವಾಡುವ ಮಾತು, ಉಡುವ ಬಟ್ಟೆ ಹಾಗೂ ತಿನ್ನುವ ಆಹಾರ ಪದ್ಧತಿಯಷ್ಟೇ ನಮ್ಮ ಸಂಸ್ಕೃತಿಯಲ್ಲ, ಬದಲಿಗೆ ಸಂಸ್ಕೃತಿ ಎಂಬುದು ನಮ್ಮ ಬದುಕಿನ ಒಟ್ಟು ಮೌಲ್ಯವಾಗಿದೆ ಎಂದು ಮೈಸೂರಿನ ವಿಜಯನಗರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ.ಟಿ.ಬೆಟ್ಟೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕಾಲೇಜಿನ ಸಾಂಸ್ಕೃತಿಕ, ಸ್ಕೌಟ್ಸ್
ಗೈಡ್ಸ್, ರೆಡ್ಕ್ರಾಸ್, ಕ್ರೀಡಾ ಹಾಗೂ ಎನ್ಎಸ್ಎಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಾವುಗಳು ಸಂಸ್ಕೃತಿ ಎಂಬುದನ್ನು ಸೀಮಿತ ಆಚರಣೆಗೆ ಬಳಸುತ್ತಿರುವ ಕಾರಣದಿಂದಾಗಿ ಇಂದು ನಮ್ಮ ಪರಂಪರೆ ಹಾಗೂ ಸಂಸ್ಕೃತಿಗಳ ಉಳಿವು ಅವನತಿಯತ್ತ ಸಾಗುತ್ತಿದೆ ಎಮದು ಆತಂಕ ವ್ಯಕ್ತಪಡಿಸಿದರು.
ಇಂದಿನ ದಿನಗಳಲ್ಲಿ ಹೆಣ್ಣು ಎಷ್ಟು ಸುರಕ್ಷಿತಳಿದ್ದಾಳೆ ಎಂಬ ಆತಂಕ ಎದುರಾಗಿದ್ದು, ನಿತ್ಯವೂ ನಡೆಯುತ್ತಿರುವ ಅನಾಚಾರ, ದುರಾಚಾರಗಳಿಂದಾಗಿ ಇಂದು ಪೋಷಕರಿರಲಿ, ಶಿಕ್ಷಕರಿರಲಿ, ಬಂಧುಗಳೇ ಇದ್ದರೂ ಯಾರನ್ನೂ ಸುಲಭವಾಗಿ ಹೆಣ್ಣು ನಂಬದ ಸ್ಥಿತಿ ಇಂದು ನಿರ್ಮಾಣಗೊಂಡಿರುವುದು ವಿಷಾದನೀಯ ಸಂಗತಿ ಎಂದು ಮಹಿಳೆಯ ಸುರಕ್ಷತೆಯ ಕುರಿತಂತೆ ಆತಂಕ ವ್ಯಕ್ತಪಡಿಸಿದ ಡಾ.ಟಿ.ಬೆಟ್ಟೇಗೌಡ ಅವರು, ಪ್ರಶ್ನಿಸುವ, ವಿಮರ್ಶಿಸಿ ನೋಡುವ ಮತ್ತು ವಿವೇಚನೆಯಿಂದ ಬದುಕುವ ಹವ್ಯಾಸಗಳನ್ನು ಇಂದಿನ ಎಲ್ಲಾ ಹೆಣ್ಣುಮಕ್ಕಳು ರೂಢಿಸಿಕೊಳ್ಳಲೇಬೇಕಾದ ಸ್ಥಿತಿ ಇದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ಟಿ.ಮಲ್ಲೇಶ್ ಎಲ್ಲಾ ಚಟುವಟಿಕೆಗಳ ಆರಂಭಕ್ಕೆ ಶುಭಕೋರಿದರು. ಪ್ರಾಂಶುಪಾಲ ಪ್ರೊ.ಬಸವಣ್ಣ ಅಧ್ಯಕ್ಷತೆ ವಹಿಸಿದ್ದರು. ಜೆ.ಆರ್.ಶಿವೇಗೌಡ, ಕ್ರೀಡಾ ಚಟುವಟಿಕೆಗಳ ಬಗ್ಗೆ ದೈಹಿಕ ಶಿಕ್ಷಣ ನಿರ್ದೇಶಕ ಬಾಬೂಪ್ರಸಾದ್, ಎನ್ಎಸ್ಎಸ್ ಚಟುವಟಿಕೆಗಳ ಕುರಿತಂತೆ ಜಿ.ಜಿ.ರಾಜಶೇಖರ್, ಸ್ಕೌಟ್ಸ್ ಗೈಡ್ ಯುವ ರೆಡ್ಕ್ರಾಸ್ನ ಚಟುವಟಿಕೆಗಳ ಮುಂದಿನ ಹಾದಿಯ ಬಗ್ಗೆ ಪ್ರಾಧ್ಯಾಪಕಿ ಜಿ.ಸುನೀತ ವಿವರ ನೀಡಿದರು.
ಆಯ್ಕೆ: ಇದೇ ಸಂದರ್ಭದಲ್ಲಿ 2013-14ನೇ ಸಾಲಿನಲ್ಲಿ ಕಾಲೇಜಿನ ಕ್ರೀಡಾ ಕಾರ್ಯದರ್ಶಿಯಾಗಿ ವಿದ್ಯಾರ್ಥಿನಿ ಪಿ.ಆರ್.ಸ್ವಾತಿ, ಕಾವೇರಿ ತಂಡದ ನಾಯಕಿಯಾಗಿ ಎಂ.ಆರ್.ಸುಮ, ಹೇಮಾವತಿ ತಂಡದ ನಾಯಕಿಯಾಗಿ ಎಚ್.ಕೆ.ಸಂಧ್ಯ, ಕಪಿಲ ತಂಡದ ನಾಯಕಿಯಾಗಿ ಶ್ವೇತ ಹಾಗೂ ಕೃಷ್ಣೆ ತಂಡದ ನಾಯಕಿಯಾಗಿ ಲಾವಣ್ಯ ಆಯ್ಕೆಗೊಂಡರು. ಅಲ್ಲದೇ 2012-13ನೇ ಸಾಲಿನ ಪ್ರತಿಭಾವಂತ ವಿದ್ಯಾರ್ಥಿನಿ ಕಲಾ ವಿಭಾಗದ ಎಚ್.ಡಿ.ಕಾಂತಮಣಿ, ಎಚ್.ಎಸ್.ಕಾವ್ಯ, ವಿಜ್ಞಾನ ವಿಭಾಗದ ಜಯಲಕ್ಷ್ಮೀ, ಅರ್ಪಿತ ವಾಣಿಜ್ಯ ವಿಭಾಗದಿಂದ ಎಚ್.ಜೆ.ಲಕ್ಷ್ಮೀ, ಕೆ.ಎಸ್.ಅಮಿತ ಹಾಗೂ ಬಿಬಿಎಂ ವಿಭಾಗದಿಂದ ಎಸ್.ಬಿಂದು ಹಾಗೂ ಶೇ.100ರಷ್ಟು ಅಂಕಗಳಿಸಿರುವ ದೀಪ್ತಿಶೆಟ್ಟಿ ಹಾಗೂ ಮೋಕ್ಷಿತ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

