ಸುದ್ದಿ ಸಂಕ್ಷೇಪ
ಹೆಚ್ಚುವರಿ ಕೊಬ್ಬರಿ ಖರೀದಿ ಕೇಂದ್ರ
ಜಾವಗಲ್: ಅರಸೀಕೆರೆ ಎಪಿಎಂಸಿ ಪ್ರಾಂಗಣದಲ್ಲಿ ತೆರೆಯಲಾಗಿರುವ ನ್ಯಾಫೆಡ್ ಕೊಬ್ಬರಿ ಕೇಂದ್ರದಲ್ಲಿ ಜನಸಂದಣಿ ಹೆಚ್ಚಾಗಿರುವುದರಿಂದ ರೈತರ ಅನುಕೂಲಕ್ಕಾಗಿ ಇದೇ 10ರಿಂದ 16ರವರೆಗೆ ಹೆಚ್ಚುವರಿಯಾಗಿ 2 ಕೊಬ್ಬರಿ ಮಾರಾಟ ಕೌಂಟರ್ಗಳನ್ನು ತೆರೆಯಲಾಗುತ್ತಿದೆ ಎಂದು ಎಪಿಎಂಸಿ ನಿರ್ದೇಶಕ ಕಲ್ಲಹಳ್ಳಿ ನಾಗರಾಜು ತಿಳಿಸಿದರು.
ಟಾಟಾ ಸುಮೋ ಡಿಕ್ಕಿ: ಮಹಿಳೆ ಸಾವು
ಅರಸೀಕೆರೆ: ಟಾಟಾ ಸುಮೋ ಡಿಕ್ಕಿಯಿಂದ ಪಾದಚಾರಿ ಮಹಿಳೆ ಸಾವನ್ನಪ್ಪಿರುವ ಘಟನೆ ತಾಲೂಕಿನ ಕರಿಕಲ್ಗುಡ್ಡದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಸಂಭವಿಸಿದೆ. ಆಂಧ್ರಪ್ರದೇಶ ರಾಜ್ಯ ಪೆಲಮನೇರು ತಾಲೂಕಿನ ರೊಂಡಗುಂಟಲು ಗ್ರಾಮದ ವಾಸಿ ಲಕ್ಷ್ಮಮ್ಮ (40) ಮೃತಪಟ್ಟ ದುರ್ದೈವಿ.
ಕರಿಕಲ್ಗುಡ್ಡದ ಬಳಿಯ ರಸ್ತೆಯಲ್ಲಿ ಟಿವಿ ಕೇಬಲ್ ವೈರ್ ಅಳವಡಿಸುವ ಕೆಲಸ ಮಾಡುತ್ತಿದ್ದಾಗ ತಿಪಟೂರು ಕಡೆಯಿಂದ ಬಂದ ಟಾಟಾ ಸುಮೋ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ್ದಾನೆ. ಇದರಿಂದ ತೀವ್ರ ಗಾಯಗೊಂಡ ಅವರನ್ನು ಚಿಕಿತ್ಸೆಗಾಗಿ ಅರಸೀಕೆರೆ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂಜು: 6 ಬಂಧನ
ಸಕಲೇಶಪುರ: ತಾಲೂಕಿನ ಜಾನೆಕೆರೆ ಬಸ್ ನಿಲ್ದಾಣ ಒಳಗೆ ಜೂಜಾಡುತ್ತಿದ್ದ 6 ಮಂದಿಯನ್ನು ಪೊಲೀಸರು ಬಂಧಿಸಿರುವ ಘಟನೆ ಶುಕ್ರವಾರ ನಡೆದಿದೆ. ಜಾನೆಕೆರೆ ಗ್ರಾಮದ ಸಂತೋಷ (30), ಲಕ್ಷ್ಮಣ (30), ರುಶಿಕುಮಾರ (32), ಪ್ರಸಾದ್ (25), ಪುಟ್ಟರಾಜು (26), ಮೋಹನ್ಕುಮಾರ (25) ಬಂಧಿತರು. ಪಣಕ್ಕಿಟ್ಟಿದ್ದ 840 ರು. ನಗದು ವಶಪಡಿಸಿಕೊಂಡಿರುವ ಪಟ್ಟಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇಬ್ಬರು ನಾಪತ್ತೆ
ಹಾಸನ: ನಗರ ಹುಣಸಿನಕೆರೆ ಲೇ ಔಟ್ನ ಬಾಬ್ಜಾನ್ ಎಂಬವರ ಪುತ್ರಿ ಪಾರಾನಾ (19) ಮನೆಯಿಂದ ಹೊರಗೆ ಹೋದವಳು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. 5 ಅಡಿ ಎತ್ತರ, ಕನ್ನಡ ಉರ್ದು ಮಾತನಾಡುತ್ತಾರೆ ಎಂದು ತಂದೆ ಬಾಬಾಜಾನ್ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಹೊಳೆನರಸೀಪುರ ತಾಲೂಕಿನ ವಳಂಬಿಗೆ ಗ್ರಾಮದ ದೊಡ್ಡಮ್ಮ (65)ಎಂಬುವರು ಮನೆಯಿಂದ ಹೊರಗೆ ಹೋದವರು ಮನೆಗೆ ಬಂದಿಲ್ಲ. 4.5 ಅಡಿ ಎತ್ತರ, ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಸೀರೆ ಧರಿಸಿದ್ದರು ಎಂದು ಅಳಿಯ ಲಕ್ಷ್ಮಣಶೆಟ್ಟಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ತಾಲೂಕಿನಲ್ಲಿ ನಿರಂತರ ವಿದ್ಯುತ್ ಪೂರೈಕೆಗೆ ಕ್ರಮ: ಬಾಲಕೃಷ್ಣ
ಚನ್ನರಾಯಪಟ್ಟಣ: ತಾಲೂಕಿನಲ್ಲಿ ನಿರಂತರ ವಿದ್ಯುತ್ ಪೂರೈಸುವ ಸಲುವಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು. ಪಟ್ಟಣದ ಎಲೆಕ್ಟ್ರಿಕಲ್
ವೈಂಡಿಂಗ್ ಸಂಘ ಏರ್ಪಡಿಸಿದ್ದ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ನಿರಂತರವಾಗಿ ವಿದ್ಯುತ್ ವ್ಯವಸ್ಥೆ ಕಲ್ಪಿಸಲು ವಿತರಣಾ ಕೇಂದ್ರಗಳಿಗೆ ಸೂಚನೆ ನೀಡಿದ್ದು, ಯಾವುದೇ ಕಾರಣದಿಂದ ರೈತರಿಗೆ ಹಾಗೂ ಗ್ರಾಮೀಣ ಪ್ರದೇಶದ ಜನತೆಗೆ ಅನ್ಯಾಯವಾಗದಂತೆ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಕೋರಲಾಗಿದೆ ಎಂದು ಅವರು ತಿಳಿಸಿದರು.
ವಿದ್ಯುತ್ ಅಡಚಣೆಯಾದ ಸಂದರ್ಭದಲ್ಲಿ ರಿಪೇರಿ ಮಾಡಲು ತಾಲೂಕಿಗೆ ಎಲ್ಲಾ ವ್ಯವಸ್ಥೆಯಿರುವ ಸುಸಜ್ಜಿತ ವಾಹನವನ್ನು ನೀಡಲು ಒಪ್ಪಿಗೆ ನೀಡಿದ್ದು, ದಿನದ 24ಗಂಟೆಯೂ ಕಾರ್ಯನಿರ್ವಹಿಸಲಿದೆ ಎಂದರು.
ಪಟ್ಟಣದಲ್ಲಿ ಸಮಗ್ರ ವಿದ್ಯುತ್ ಪೂರೈಕೆಗಾಗಿ 53 ಟ್ರಾನ್ಸ್ಫಾರ್ಮರ್ ಅಳವಡಿಸಲಾಗಿದ್ದು, ವೋಲ್ಟೇಜ್ ಸಮಸ್ಯೆ ಇಲ್ಲದಾಗಿದೆ. ಗ್ರಾಮೀಣ ಪ್ರದೇಶದಲ್ಲಿ 200 ಬೋರ್ವೆಲ್ ಕೊರೆಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಾಗಿದೆ ಎಂದು ಹೇಳಿದರು. ಪುರಸಭಾಧ್ಯಕ್ಷ ಮಂಜಣ್ಣ, ಉಪಾಧ್ಯಕ್ಷೆ ಗೀತಾ, ನವೋದಯ ವಿದ್ಯಾ ಸಂಸ್ಥೆ ಮಾಜಿ ಅಧ್ಯಕ್ಷ ರಾಮಚಂದ್ರ, ಸಂಘದ ಅಧ್ಯಕ್ಷ ರಮೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

