ಜಿಲ್ಲೆಗೆ ಕಾಂಗ್ರೆಸ್ ವೀಕ್ಷಕರು: ಜಿಲ್ಲಾಧ್ಯಕ್ಷ ಬಿ. ಶಿವರಾಂ
ಹೊಳೆನರಸೀಪುರ: ಬರುವ ಲೋಕಸಭಾ ಚುನಾವಣೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಸೆ.14 ರಿಂದ ಜಿಲ್ಲೆಯಲ್ಲಿ ಎಐಸಿಸಿ ವೀಕ್ಷಕರು ಪ್ರವಾಸ ಮಾಡಿ ಮುಖಂಡರ ಹಾಗೂ ಕಾರ್ಯಕರ್ತರಿಂದ ಮಾಹಿತಿ ಸಂಗ್ರಹಿಸುವ ಕಾರ್ಯ ಆರಂಭವಾಗಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ. ಶಿವರಾಂ ತಿಳಿಸಿದರು.
ಕಾಂಗ್ರೆಸ್ ಸದಸ್ಯತ್ವ ನೋಂದಣಿಗಾಗಿ ಪಟ್ಟಣಕ್ಕೆ ಆಗಮಿಸಿದ್ದ ಜಿಲ್ಲಾಧ್ಯಕ್ಷರು ಸುದ್ದಿಗಾರರೊಂದಿಗೆ ಮಾತನಾಡಿ, ತಾವು ಜಿಲ್ಲೆಯಲ್ಲಿ ಸದಸ್ಯತ್ವ ನೋಂದಣಿ ಬಗ್ಗೆ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಿಗೂ ಭೇಟಿ ನೀಡಿ ಸದಸ್ಯತ್ವ ಮಾಡಲು ಕಾರ್ಯಕರ್ತರಲ್ಲಿ ನೈತಿಕ ಶಕ್ತಿ ತುಂಬುತ್ತಿರುವುದಾಗಿ ತಿಳಿಸಿದರು.
ಸದಸ್ಯತ್ವ ನೋಂದಣಿಯನ್ನು ಬೂತ್ ಮಟ್ಟದಲ್ಲಿ ಆರಂಭಿಸಲಾಗಿದ್ದು, ಪ್ರತಿ ಬೂತ್ನಲ್ಲಿಯೂ ಕನಿಷ್ಟ ಹದಿನೈದು ಮಂದಿಯನ್ನು ನೋಂದಣಿ ಮಾಡಿಸುವ ಗುರಿ ಹೊಂದಲಾಗಿದೆ ಎಂದ ಅವರು, ಈ ರೀತಿ ಸದಸ್ಯತ್ವ ನೊಂದಣಿ ಮಾಡುವುದರಿಂದ ಪ್ರತಿ ಬೂತ್ನಲ್ಲೂ ಒಬ್ಬ ಅಧ್ಯಕ್ಷನ ಆಯ್ಕೆ ನಡೆಯಲಿದೆ. ಜಿಲ್ಲೆಯಲ್ಲಿ ಸುಮಾರು 1800 ಬೂತ್ಗಳಿದ್ದು, ಕನಿಷ್ಟ 35ರಿಂದ 40 ಸಾವಿರ ಮಂದಿಯನ್ನು ನೋಂದಣಿ ಮಾಡುವ ಯೋಚನೆ ತಮ್ಮದಾಗಿದೆ ಎಂದರು.
ಜಿಲ್ಲೆಯ ಲೋಕಸಭಾ ಸ್ಥಾನವನ್ನು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಶತಾಯಗಥಾಯ ತಮ್ಮ ಟಾರ್ಗೆಟ್ ಎಂಬ ರಾಜ್ಯಾಧ್ಯಕ್ಷರ ಹೇಳಿಕೆ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಬಂದಿದೆ ಎಂದರು. ಆದ್ದರಿಂದ ಮುಂದಿನ ಲೋಕಸಭಾ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಈಗಿನಿಂದಲೇ ಚುನಾವಣೆಗೆ ತಮ್ಮ ಪಕ್ಷ ಪೂರ್ವ ತಯಾರಿ ಆರಂಭಿಸಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮುಂದಿನ ಚುನಾವಣೆಯಲ್ಲಿ ಹಾಸನ ಲೋಕಸಭೆ ಕ್ಷೇತ್ರವನ್ನು ತನ್ನದಾಗಿಸುವ ನಿಟ್ಟಿನಲ್ಲಿ ತಯಾರಿ ಸರಿಯಾಗಿದ್ದರೂ ಇಲ್ಲಿ ಗೆಲ್ಲಲು ಬೇಕಾದ ಸೂಕ್ತ ಅಭ್ಯರ್ಥಿ ಮತ್ತು ಈ ಜಿಲ್ಲೆಗೆ ರಾಜ್ಯ ಸಂಪುಟದಲ್ಲಿ ಸಚಿವ ಸ್ಥಾನವೂ ಇಲ್ಲ, ಜತೆಗೆ ಹೊರಜಿಲ್ಲೆಯ ಬೇರೊಬ್ಬ ಸಚಿವರನ್ನು ಉಸ್ತುವಾರಿ ಸಚಿವರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮತದಾರರು ನಿಮ್ಮ ಕಾಂಗ್ರೆಸ್ ಕಡೆ ಒಲವು ತೋರುವರೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶಿವರಾಂ, ಈ ಬಗ್ಗೆ ವರಿಷ್ಠರು ಒಂದೆರಡು ಸುತ್ತು ಮಾತುಕತೆ ನಡೆಸಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಇಂತಹ ಎಲ್ಲ ಪ್ರಶ್ನೆಗಳಿಗೂ ವರಿಷ್ಠರು ಸೂಕ್ತ ಕ್ರಮಕೈಗೊಳ್ಳಲಿದ್ಧಾರೆ ಎಂದು ಉತ್ತರಿಸಿದರು.
ಸೆ.14 ರಿಂದ ಜಿಲ್ಲಾ ಪ್ರವಾಸ ಕೈಗೊಳ್ಳಲಿರುವ ಕೇಂದ್ರ ವೀಕ್ಷಣಾ ತಂಡದಲ್ಲಿ ಪ್ರೊ.ಚಂದ್ರಶೇಖರ್, ಡಿ.ಕೆ.ತಾರಾದೇವಿ, ಅಮರ್, ಕೆಪಿಸಿಸಿ ಕಾರ್ಯದರ್ಶಿ ರೈ, ಮಲ್ಲಿಗೆವೀರೇಶ್, ಪಕ್ಷದ ಒಬಿಸಿ ವಿಭಾಗದ ಗೋಪಾಲ್ ತಂಡ ಆಗಮಿಸಲಿದ್ದು, ಸೆ.14 ರಂದು ಬೆಳಿಗ್ಗೆ ಚನ್ನರಾಯಪಟ್ಟಣ, ಅರಸೀಕೆರೆ, ಸಂಜೆ ಕಡೂರು ಕ್ಷೇತ್ರದಲ್ಲಿ ತಮ್ಮ ಸಂಚಾರ ನಡೆಸಲಿದ್ದಾರೆ.
15 ರಂದು ಬೆಳಿಗ್ಗೆ ಹೊಳೆನರಸೀಪುರ, ಅರಕಲಗೂಡು ನಂತರ ಹಾಸನದಲ್ಲಿ ಸಂಚಾರ ನಡೆಸಲಿದೆ. 16 ರಂದು ಬೆಳಿಗ್ಗೆ ಆಲೂರು, ಸಕಲೇಶಪುರ, ಬೇಲೂರು ಕ್ಷೇತ್ರಗಳಲ್ಲಿ ಸಂಚರಿಸಿ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಪೂರ್ಣ ಮಾಹಿತಿ ಪಡೆದು ನಂತರ ಹಿಂದಿರುಗಲಿದ್ದಾರೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

