ಮಣಚನಹಳ್ಳಿ:ಶಿಕ್ಷಕರ ದಿನಾಚರಣೆ
ಹಾಸನ: ತಾಲೂಕಿನ ಮಣಚನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್ಡಿಎಂಸಿ, ಪೋಷಕ ವರ್ಗದವರು ಹಾಗೂ ವಿದ್ಯಾರ್ಥಿಗಳು ಸೇರಿ ಶಿಕ್ಷಕರ ದಿನಾಚರಣ ಆಚರಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಗೌರವಿಸಿ ಕಿರುಕಾಣಿಕೆ ನೀಡಲಾಯಿತು. ಎಸ್ಡಿಎಂಸಿ ಅಧ್ಯಕ್ಷ ಮಂಜೇಗೌಡ, ಸದಸ್ಯ ಎಸ್. ರಾಜೇಗೌಡ, ಲಕ್ಷ್ಮಣ್, ಲೋಕೇಶ, ಚಂದ್ರಿಕ, ಮಂಜುಳ ಇತರರು ಇದ್ದರು. ಎಸ್ಡಿಎಂಸಿ ಮಾಜಿ ಸದಸ್ಯ ಲಕ್ಷ್ಮಣ್ ಶಾಲೆಯ ಅಕ್ಷರ ದಾಸೋಹ, ಆಡಳಿತ ಹಾಗೂ ಶಿಕ್ಷಣದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖ್ಯ ಶಿಕ್ಷಕ ತಿಮ್ಮರಾಯಶೆಟ್ಟಿ ಶಿಕ್ಷಕರ ದಿನಾಚರಣೆ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಹಾಸನಾಂಬ ಲಯನ್ಸ್ ಕ್ಲಬ್ನಿಂದ ಶಿಕ್ಷಕರಿಗೆ ಗೌರವ ಸಲ್ಲಿಸಲಾಯಿತು.
'ವಿದ್ಯೆಯ ಜತೆಗೆ ವ್ಯಕ್ತಿತ್ವ ಬಹುಮುಖ್ಯ'
ಹಾಸನ: ವಿದ್ಯಾರ್ಥಿಗಳಿಗೆ ವಿದ್ಯೆಯ ಜತೆಗೆ ವ್ಯಕ್ತಿತ್ವ ಬಹುಮುಖ್ಯ. ವ್ಯಕ್ತಿತ್ವ ಮನುಷ್ಯನ ಜೀವನ ರೂಪಿಸುತ್ತದೆ. ಪ್ರತಿಯೊಬ್ಬ ಮನುಷ್ಯನಿಗೂ ತನ್ನದೇ ಆದ ವ್ಯಕ್ತಿತ್ವವಿರುತ್ತದೆ. ಆದರೆ ಆ ವ್ಯಕ್ತಿತ್ವ ಸರಿಯಾದ ಮಾರ್ಗದಲ್ಲಿ ವಿಕಸನ ಮಾಡಿಕೊಂಡಾಗ ಮಾತ್ರ ಕಲಿತ ವಿದ್ಯೆ ಹೆಚ್ಚಿನ ಮಹತ್ವ ಪಡೆಯುತ್ತದೆ ಎಂದು ಸಂವರ್ಧನ ಕೋಚಿಂಗ್ ಸೆಂಟರ್ ನಿರ್ದೇಶಕ ಕೆ.ವಿ. ಮಂಜುನಾಥ್ ತಿಳಿಸಿದರು.
ನಗರದ ಸಂವರ್ಧನ ಕೋಚಿಂಗ್ ಸೆಂಟರ್ನಲ್ಲಿ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಊಟ ಬಲ್ಲವನಿಗೆ ರೋಗವಿಲ್ಲ, ಮಾತುಬಲ್ಲವನಿಗೆ ಜಗಳ ವಿಲ್ಲ ಎಂಬ ನಾಣ್ಣುಡಿಯಂತೆ ವ್ಯಕ್ತಿತ್ವ ರೂಪಿಸಿಕೊಂಡ ಪದವೀಧರನಿಗೆ ಎಲ್ಲೆಲ್ಲೂ ನೌಕರಿ,ಹೋದಲೆಲ್ಲಾ ಬೇಡಿಕೆ.
ಇಂದಿನ ಐಟಿ, ಬಿಟಿ ಕಂಪನಿಗಳಲ್ಲೂ ಸಹ ಕೆಲಸಕ್ಕೆ ನೇಮಕಗೊಂಡ ತಕ್ಷಣ ವ್ಯಕ್ತಿತ್ವ ವಿಕಸನದ ತರಬೇತಿಯನ್ನು ಕಡ್ಡಾಯವಾಗಿ ನೀಡಲಾಗುತ್ತಿದೆ. ಪಾಶ್ಚಿಮಾತ್ಯ ಜೀವನ ಶೈಲಿಯ ಅಳವಡಿಕೆಯಿಂದ ಇಂದಿನ ವಿದ್ಯಾರ್ಥಿ ಗಳು ತಮ್ಮ ವ್ಯಕ್ತಿತ್ವದ ಬಗ್ಗೆ ಹೆಚ್ಚಿನ ಒತ್ತನ್ನು ನೀಡುತ್ತಿಲ್ಲ. ವ್ಯಕ್ತಿತ್ವ ಇಲ್ಲದ ಪದವಿ ಲಗಾಮಿಲ್ಲದ ಕುದುರೆ ಯಂತಾ ಗುತ್ತದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

