ಹಾಸನ

ಮಡಿವಾಳ ಜನಾಂಗ: ಪ್ರತಿಭಾ ಪುರಸ್ಕಾರ

Published On :

ಹಾಸನ: ಜಿಲ್ಲಾ ಮಡಿವಾಳ ಜನಾಂಗದ ನಿವೃತ್ತ ಹಾಗೂ ಹಾಲಿ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ  ಸೆ. 29 ರಂದು ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಮುದಾಯದ ವಿದ್ಯಾರ್ಥಿಗಳು ಸೆ. 29ರೊಳಗೆ ಅರ್ಜಿ ಸಲ್ಲಿಸಬಹುದು. ಹಾಗೂ  ಸರ್ಕಾರಿ ಮತ್ತು ಇತರೆ ಸಂಸ್ಥೆಗಳಲ್ಲಿ ಕೆಲಸ ಮಾಡಿ ನಿವೃತ್ತರಾಗಿ 65 ವರ್ಷ ಆದವರಿಗೂ ಸನ್ಮಾನ ಏರ್ಪಡಿಸಿದೆ. ಮಾಹಿತಿಗಾಗಿ  ಡಿ.ರಾಮಚಂದ್ರ ಅಧ್ಯಕ್ಷ, ನಂ.135, ಹುಣಸೀನಕೆರೆ  ಬಡಾವಣೆ ಹಾಸನ  ದೂ- 9449006684, 9686400296 ಸಂಪರ್ಕಿಸಿ.
ಹೊಯ್ಸಳ ಸಂಘ; ಪ್ರತಿಭಾ ಪುರಸ್ಕಾರ
ಹಾಸನ: ಹೊಯ್ಸಳ ಕರ್ನಾಟಕ ಸಂಘದ ಜಿಲ್ಲಾ ಘಟಕದಿಂದ ಅತಿ ಹೆಚ್ಚು ಅಂಕ ಪಡೆದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಪುರಸ್ಕಾರ ಕಾರ್ಯಕ್ರಮವನ್ನು ಅ.2 ರಂದು ಹಮ್ಮಿಕೊಳ್ಳಲಾಗಿದೆ. 2012-13ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಅಂತಿಮ ಡಿಪ್ಲೋಮೋ ಹಾಗೂ ಅಂಗೀಕೃತ  ವಿಶ್ವವಿದ್ಯಾಲಯಗಳ ಅಂತಿಮ ವರ್ಷದ ನಾನಾ  ಪದವಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಅ.2 ರಂದು  ನಡೆಯುವ  ಸಂಘದ ವಾರ್ಷಿಕೋತ್ಸವ ಸಂದರ್ಭದಲ್ಲಿ  ಗೌರವಿಸಲಾಗುವುದು. ಆಸಕ್ತ ವಿದ್ಯಾರ್ಥಿಗಳು ಸೆ. 20 ರಂದು ಮುಂಚಿತವಾಗಿ  ಅಂಕಪಟ್ಟಿ  ಭಾವಚಿತ್ರದೊಡನೆ  ಸಂಘಕ್ಕೆ ಸಲ್ಲಿಸುವುದು. ವಿಳಾಸ - ವೆಂಕಟೇಶ್ವರ ನಿಲಯ (ಮಹಡಿ ಮೇಲೆ), ಎ.ಬಿ.ಟಿ. ಪಾರ್ಸಲ್ ಸರ್ವೀಸ್ ಆಫೀಸ್ ಹತ್ತಿರ, ಪಾರ್ಕ್ ರಸ್ತೆ, ಉತ್ತರ ಬಡಾವಣೆ,  ಹಾಸನ. ಮಾಹಿತಿಗಾಗಿ ಮೊ.ಸಂ.  9448256900 ಸಂಪರ್ಕಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.