ಹಾಸನ

ಬೇಲೂರಲ್ಲಿ ಧೂಳೋ ಧೂಳು...

Published On :

ಬೇಲೂರು: ಗುಂಡಿ ಬಿದ್ದ ರಸ್ತೆಗೆ ಡಾಂಬರ್ ಹಾಕದೆ ರಸ್ತೆಯಲ್ಲಿ ಧೂಳು ಎದ್ದು ಸಾರ್ವಜನಿಕ ಸಂಚಾರಕ್ಕೆ ತೊಂದರೆ ಹಾಗೂ ರಸ್ತೆ ಬದಿಯ ಅಂಗಡಿ ವರ್ತಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ನೆಹರು ನಗರದ ವರ್ತಕರು ಇತ್ತೀಚೆಗೆ ಪ್ರತಿಭಟನೆ ನಡೆಸಿದರು.
ಇಲ್ಲಿನ ಮುಖ್ಯ ರಸ್ತೆ ರಾಷ್ಟೀಯ ಹೆದ್ದಾರಿ ನೆಹರು ನಗರದಿಂದ ಜೆ.ಪಿ. ನಗರದವರೆಗೂ ರಸ್ತೆ ಗುಂಡಿ ಬಿದ್ದು ಹಾಳಾಗಿದೆ. ಲೋಕೋಪಯೋಗಿ ಇಲಾಖೆಯಿಂದ ಗುಂಡಿ ಬಿದ್ದ ರಸ್ತೆಯನ್ನು ಡಾಂಬರೀಕರಣಗೊಳಿಸದೆ ಗುಂಡಿಗಳಿಗೆ ಕೇವಲ ಜಲ್ಲಿ ಸುರಿದಿದ್ದು, ಇದರಿಂದ ಪಟ್ಟಣದ ತುಂಬೆಲ್ಲ ಧೂಳಿನಿಂದ ಕೂಡಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಿದೆ ಎಂದು ಅರೋಪಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು . ರಸ್ತೆಗೆ ಜಲ್ಲಿ ಹಾಕಿರುವುದರಿಂದ ವಾಹನಗಳ ಸಂಚಾರದ ವೇಳೆ ಜಲ್ಲಿ ಕಲ್ಲುಗಳು ರಸ್ತೆ ಅಕ್ಕಪಕ್ಕ ಚೆಲ್ಲಪಿಲ್ಲಿಯಾಗುತ್ತಿದ್ದು, ಇದರಿಂದ ಪಾದಚಾರಿಗಳಿಗೆ ತಗಲುವಂತಾಗಿದ್ದು ಇದರಿಂದ ಪ್ರಾಣಹಾನಿ ಸಂಭವಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ವರ್ತಕರು ಆಕ್ರೋಶ ವ್ತಕ್ತಪಡಿಸಿದ್ದಾರೆ. ವರ್ತಕರಾದ ವಿಜಯಕುಮಾರ್, ವೆಂಕಟೇಶ್, ಮಂಜುನಾಥ್, ಬಷೀರ್, ಶ್ರೀನಿವಾಸ್, ಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.