ಹಾಸನ

ಜಿಲ್ಲೆಯಲ್ಲಿ ಶೇ. 24 ರಷ್ಟು ಅಧಿಕ ಮಳೆ

Published On :

ಕನ್ನಡಪ್ರಭ ವಾರ್ತೆ೤ ಹಾಸನ೤ ಸೆ.12
ಜಿಲ್ಲೆಯಲ್ಲಿ ಈ ವರ್ಷ ಜನವರಿಯಿಂದ ಆಗಸ್ಟ್-31ರವರೆಗೆ ವಾಡಿಕೆಯಂತೆ 734.8 ಮಿ.ಮೀ.ಗೆ 914.5 ಮಿ. ಮೀ. ಮಳೆಯಾಗಿದ್ದು, ಶೇ. 24 ರಷ್ಟು ಹೆಚ್ಚುವರಿ ಮಳೆ ಬಂದಿದೆ.
ಜನವರಿಯಲ್ಲಿ  ಸಾಧಾರಣ ಮಳೆ - 1.77  ಮಿ.ಮೀ,  ವಾಡಿಕೆ - 0..3,  ಶೇ.  82  ರಷ್ಟು ಮಳೆಯಾಗಿದೆ.
ಫೆಬ್ರವರಿಯಲ್ಲಿ  ಸಾಧಾರಣ ಮಳೆ - 2.60 ಮಿ.ಮೀ,  ವಾಡಿಕೆ - 17.4,  ಶೇ. 569  ರಷ್ಟು ಮಳೆಯಾಗಿದೆ.ಮಾರ್ಚ್‌ನಲ್ಲಿ  ಸಾಧಾರಣ ಮಳೆ - 10.8  ಮಿ.ಮೀ,  ವಾಡಿಕೆ - 31.8,  ಶೇ. 194  ರಷ್ಟು ಮಳೆಯಾಗಿದೆ.
 ಏಪ್ರಿಲ್‌ನಲ್ಲಿ ಸಾಧಾರಣ ಮಳೆ - 55.5  ಮಿ.ಮೀ,  ವಾಡಿಕೆ - 29.9,  ಶೇ.  46  ರಷ್ಟು ಮಳೆಯಾಗಿದೆ.
 ಮೇ ತಿಂಗಳಲ್ಲಿ ಸಾಧಾರಣ ಮಳೆ - 104.9 ಮಿ.ಮೀ,  ವಾಡಿಕೆ - 92.3  ಶೇ.-12  ರಷ್ಟು ಮಳೆಯಾಗಿದೆ.
 ಜೂನ್ ತಿಂಗಳಲ್ಲಿ ಸಾಧಾರಣ ಮಳೆ - 152.1ಮಿ.ಮೀ,  ವಾಡಿಕೆ - 217.9  ಶೇ. 43 ರಷ್ಟು ಮಳೆಯಾಗಿದೆ.
 ಜುಲೈನಲ್ಲಿ  ಸಾಧಾರಣ ಮಳೆ - 240.9   ಮಿ.ಮೀ, ವಾಡಿಕೆ - 335.4,  ಶೇ. 39  ರಷ್ಟು ಮಳೆಯಾಗಿದೆ.
 ಆಗಸ್ಟ್‌ನಲ್ಲಿ ಸಾಧಾರಣ ಮಳೆ - 162.9  ಮಿ.ಮೀ, ವಾಡಿಕೆ - 175 ಮಿ.ಮೀ.  ಶೇ.7 ರಷ್ಟು ಮಳೆಯಾಗಿದೆ.
 ಜಿಲ್ಲೆಯಲ್ಲಿ ಇದುವರೆಗೆ ವಾಡಿಕೆಗಿಂತ ಅಧಿಕ ಮಳೆಯಾದರೂ ಅರಸೀಕೆರೆ ತಾಲೂಕಿನ ಕಸಬಾ -5, ಬಾಣಾವರ  -11, ಗಂಡಸಿ -25, ಜಾವಗಲ್ -16, ಕಣಕಟ್ಟೆ -4, ಹಾಗೂ  ಬೇಲೂರು ತಾಲೂಕಿನ ಹಳೇಬೀಡು -39, ಮಾದೀಹಳ್ಳಿ  -10, ಹಾಸನ ತಾಲೂಕಿನ ದುದ್ದ ಹೋಬಳಿಯಲ್ಲಿ -12 ರಷ್ಟು ಮಳೆ ಕೊರತೆಯಾಗಿರುತ್ತದೆ.
 ಜಿಲ್ಲೆಯಲ್ಲಿ 2,55,000 ಹೆಕ್ಟೇರ್‌ನಷ್ಟು ಬಿತ್ತನೆ ಗುರಿಹೊಂದಿದ್ದು, ಇದುವರೆಗೆ 2,22, 463 ಹೆ. (87) ನಲ್ಲಿ ವಿವಿಧ ಬೆಳೆಗಳ ಬಿತ್ತನೆ ಮಾಡಲಾಗಿದೆ. ಇವುಗಳಲ್ಲಿ ಪ್ರಮುಖವಾಗಿ ಏಕದಳ ಧಾನ್ಯ ಬೆಳೆಗಳಾದ ಮುಸುಕಿನ ಜೋಳ, ಹೈ.ಜೋಳ, ಸೇರಿದಂತೆ 1,76, 377 ಹೆ.ನಲ್ಲಿ ಬಿತ್ತನೆಯಾಗಿದೆ.
ಬಿತ್ತನೆ ಬೀಜಕ್ಕೆ ಕೊರತೆಯಿಲ್ಲ:  ದ್ವಿದಳ ಧಾನ್ಯ ಬೆಳೆಗಳಾದ ಹೆಸರು, ಉದ್ದು, ಅಲಸಂದೆ ಸೇರಿದಂತೆ 23284 ಹೆ.ನಲ್ಲಿ ಬಿತ್ತನೆಯಾಗಿದೆ. ಎಣ್ಣೆಕಾಳು ಬೆಳೆಗಳಾದ ಎಳ್ಳು, ನೆಲಗಡಲೆ, ಹರಳು ಸೇರಿದಂತೆ 6286 ಹೆ.ನಲ್ಲಿ ಬಿತ್ತನೆಯಾಗಿದೆ ವಾಣಿಜ್ಯ ಬೆಳೆಗಳು (ತಂಬಾಕು ಸೇರಿದಂತೆ) 16516 ಹೆ. ನಷ್ಟು ನಾಟಿಯಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಶೇ. 87 ರಷ್ಟು ಬಿತ್ತನೆಕಾರ್ಯ ಪೂರ್ಣಗೊಂಡಿದೆ. ಕಳೆದ ವರ್ಷ ಇದೇ ಅವಧಿಗೆ 2,00764 ಹೆ.ನಲ್ಲಿ (79) ಬಿತ್ತನೆಯಾಗಿತ್ತು.
 ಬಿತ್ತನೆ ಬೀಜಗಳಿಗೆ ಸಂಬಂಧಿಸಿದಂತೆ, ಜಿಲ್ಲೆಗೆ ಸುಮಾರು 26333 ಕ್ವಿಂ. ಬಿತ್ತನೆ ಬೀಜದ ಬೇಡಿಕೆ ಇದ್ದು ಇದುವರೆಗೆ 13755 ಕ್ವಿಂ. ಬಿತ್ತನೆ ಬೀಜಗಳನ್ನು 94180 ಮಂದಿ ರೈತರಿಗೆ ವಿತರಿಸಲಾಗಿದೆ. ಹಾಗೂ ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ 1350 ಕ್ವಿಂ. ರಾಜ್ಯ ಬೀಜ ನಿಗಮ, ರಾಷ್ಟ್ರೀಯ ಬೀಜ ನಿಗಮ ಮತ್ತು ಖಾಸಗಿ ಬಿತ್ತನೆ ಮಾರಾಟಗಾರರಲ್ಲಿ ಒಟ್ಟು 3790 ಕ್ವಿಂ. ಬಿತ್ತನೆ ಬೀಜ ಸಂಗ್ರಹಿಸಲಾಗಿದೆ. ಬಿತ್ತನೆ ಬೀಜಕ್ಕೆ ಯಾವುದೇ ಕೊರತೆ ಇರುವುದಿಲ್ಲ.
 ಮುಂಗಾರು ಹಂಗಾಮಿನಲ್ಲಿ ಜಿಲ್ಲೆಗಾಗಿ 111070 ಮೆ.ಟನ್ ರಸಗೊಬ್ಬರ ಹಂಚಿಕೆಯಾಗಿದೆ. ಅದರಲ್ಲಿ ಜಿಲ್ಲೆಗೆ ಈವರೆಗೆ 98329 ಮೆ.ಟನ್ ರಸಗೊಬ್ಬರ ಪೂರೈಕೆಯಾಗಿದ್ದು ರಾಜ್ಯ ಮಾರಾಟ ಮಹಾ ಮಂಡಳದಲ್ಲಿ 11782 ಮೆ.ಟನ್ ಹಾಲಿ ದಾಸ್ತಾನಿದೆ. ರಸಗೊಬ್ಬರಕ್ಕೆ ಯಾವುದೇ ರೀತಿಯ ಕೊರತೆ ಉಂಟಾಗಿರುವುದಿಲ್ಲ.
 ಸಕಲೇಶಪುರ ತಾಲೂಕಿನ ಹಾನುಬಾಳು  ಪ್ರಾಥಮಿಕ ಸಹಕಾರ ಸಂಘ, ಚಂಗಡಿಹಳ್ಳಿಯ ಕೂಚುವಳ್ಳಿ ಟ್ರೇಡರ್ ಖಾಸಗಿ ರಸಗೊಬ್ಬರ ಮಾರಾಟ ಕೇಂದ್ರ ಹಾಗೂ ಬೇಲೂರು ತಾಲೂಕಿನ ಅನುವುಘಟ್ಟ ಮತ್ತು ನಾರ್ವೆ ಪ್ರಾಥಮಿಕ ಸಹಕಾರ ಸಂಘಗಳಲ್ಲಿ ಕಂಡುಬಂದ ಕಳಪೆ ಪೊಟ್ಯಾಷ್ ರಸಗೊಬ್ಬರ ಪ್ರಕರಣಕ್ಕೆ ಸಂಬಂಧಿಸಿದಂತೆ  ಈ ಸಹಕಾರ ಸಂಘಗಳ ಮೂವರು ಕಾರ್ಯದರ್ಶಿ  ಹಾಗೂ ಕೂಚುವಳ್ಳಿ ಟ್ರೇಡರ್ಸ್ ಮಾರಾಟ ಕೇಂದ್ರದ  ಮಾಲಿಕರ ವಿರುದ್ಧ ಒಟ್ಟು 4 ಕ್ರಿಮಿನಲ್ ಮೊಕದ್ದಮೆಗಳನ್ನು  ದಾಖಲಿಸಲಾಗಿದೆ.
 ಈ ಸಂಬಂಧ ಆ ಸಹಕಾರ ಸಂಘಗಳ ಮೂವರು ಕಾರ್ಯದರ್ಶಿಗಳನ್ನು ಅಮಾನತು ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಷಿ ಇಲಾಖೆ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ತಮಿಳುನಾಡಿನಲ್ಲಿ ಮೂಲವನ್ನು ಪತ್ತೆಹಚ್ಚಿದ್ದು ತಮಿಳುನಾಡು ಮೂಲದ ಮೂವರು ಸೇರಿದಂತೆ ಒಟ್ಟು 10 ಜನರನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ.  ಹಾಗೂ ಇಂತಹ ಪ್ರಕರಣಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗಿದೆ.
ತೋಟಗಾರಿಕೆ ಬೆಳೆಗೆ 1777.66 ಲಕ್ಷ ರು. ಅನುದಾನ:   ಪರಿಕರ ಧನ ಸಹಾಯ ಯೋಜನೆಯಡಿ ಜಿಲ್ಲೆಯಲ್ಲಿ ಇದುವರೆವಿಗೂ ಕೃಷಿ ಹಾಗೂ ತೋಟಗಾರಿಕೆ ಬೆಳೆಗೆ 1777.66 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಇದುವರೆವಿಗೂ 1616.27 ಲಕ್ಷ ರು.ಗಳನ್ನು 202442 ಫಲಾನುಭವಿಗಳಿಗೆ  ವಿತರಿಸಲಾಗಿದೆ.
 2013-14 ನೇ  ಸಾಲಿನಲ್ಲಿ ಗುಣ ನಿಯಂತ್ರಣ ಕಾರ್ಯಕ್ರಮದಡಿ  ಸುಮಾರು 281 ಬಿತ್ತನೆ ಬೀಜ ಮಾದರಿ, 329 ರಸಗೊಬ್ಬರ  ಮಾದರಿ, 152 ಕೀಟನಾಶಕ ಮಾದರಿಗಳನ್ನು  ವಿವಿಧ ಪರಿಕರ ಮಾರಾಟ ಮಳಿಗೆಗಳಿಂದ  ತೆಗೆದು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಇದರಲ್ಲಿ ಸುಮಾರು 12 ರಸಗೊಬ್ಬರ ಮಾದರಿಗಳು ಕಳಪೆ ಗುಣಮಟ್ಟದೆಂದು ವರದಿ ಬಂದಿದ್ದು, ಸಂಬಂಧಪಟ್ಟವರ ವಿರುದ್ದ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ.
 ಜಿಲ್ಲೆಯಲ್ಲಿ ಇದುವರೆವಿಗೂ ಭೂಚೇತನ ಯೋಜನೆಯಡಿ 8 ತಾಲೂಕು ಮಟ್ಟ, 30 ಹೋಬಳಿ ಮಟ್ಟ  ಹಾಗೂ 332 ಗುಚ್ಛ ಗ್ರಾಮ ಮಟ್ಟದಲ್ಲಿ ತರಬೇತಿ ಹಮ್ಮಿಕೊಂಡಿದ್ದು ರೈತರಿಗೆ ತಿಳಿವಳಿಕೆ  ನೀಡಲಾಗಿದೆ.
 ಜಿಲ್ಲೆಯಲ್ಲಿ 2013-14 ನೇ ಸಾಲಿನಲ್ಲಿ ಮಳೆ ಕೊರತೆಯಿಂದ  ಅರಸೀಕೆರೆ, ಚನ್ನರಾಯಪಟ್ಟಣ ಹಾಗೂ ಬೇಲೂರು ತಾಲೂಕಿನ ಹಳೇಬೀಡು, ಮಾದಿಹಳ್ಳಿ  ಹೋಬಳಿಗಳಲ್ಲಿ 30403 ಹೆಕ್ಟೇರ್ ಪ್ರದೇಶದ  ಬೆಳೆಗಳು ಶೇ. 50 ಕ್ಕಿಂತ ಹೆಚ್ಚು ಹಾನಿಗೊಳಗಾಗಿರುತ್ತದೆ. ಅದೇ ರೀತಿ ಅತಿಯಾದ ಮಳೆಯಿಂದ ಅರಕಲಗೂಡು ಹಾಗೂ ಆಲೂರು ತಾಲೂಕಿನಲ್ಲಿ 6310 ಹೆಕ್ಟೇರ್‌ಪ್ರದೇಶದ ಬೆಳೆಗಳು ಶೇ. 50 ಕ್ಕಿಂತ ಹೆಚ್ಚು ಹಾನಿಗೊಳಗಾಗಿರುತ್ತದೆ. ಹಾಗೂ ಪ್ರವಾಹದಿಂದ ಸಕಲೇಶಪುರ, ಆಲೂರು, ಬೇಲೂರು ತಾಲೂಕುಗಳಲ್ಲಿ 2500 ಹೆಕ್ಟೇರ್ ಪ್ರದೇಶದ ಬೆಳೆಗಳು ಶೇ. 50 ಕ್ಕಿಂತ ಹೆಚ್ಚು ಹಾನಿಗೊಳಗಾಗಿರುತ್ತದೆ ಎಂದು ಇಲಾಖೆಯ ಜಂಟಿ ನಿರ್ದೇಶಕ ಶಿವರಾಜ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.