ಹಾಸನ

ಪ್ರತ್ಯೇಕ ಅಪಘಾತ: ಮೂವರು ಸಾವು

Published On :

ಕ.ಪ್ರ. ವಾರ್ತೆ೤ ಹಾಸನ೤ ಸೆ. 12
ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ಅಪಘಾತದಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.
ಕ್ಯಾಂಟರ್ ಕೆರೆಗೆ ಪಲ್ಟಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ಹಾಸನ ತಾಲೂಕು ಕಟ್ಟಾಯ ಹೋಬಳಿಯ ಬಳ್ಳಕೆರೆ ಗ್ರಾಮ ಸಮೀಪ ನಡೆದಿದೆ.
ಆಲೂರು ತಾ. ರಾಯರಕೊಪ್ಪಲು ಗ್ರಾಮದ ರವಿ  ಉರುಫ್ ಅಣ್ಣಯ್ಯ  ಹಾಗೂ ಆತನ ಸ್ನೇಹಿತ ವಿನಿ ಉರುಫ್
ವಿನಯ್ ಮೃತಪಟ್ಟ ದುರ್ದೈವಿಗಳು. ಇವರು ಕ್ಯಾಂಟರ್ ಗಾಡಿಯಲ್ಲಿ ಡೈರಿಗೆ ಹಾಲು ಸಾಗಿಸುವ ಕೆಲಸ ಮಾಡಿಕೊಂಡಿದ್ದು, ಎಂದಿನಂತೆ ಹಾಲಿನ ಡೈರಿಗೆ ಹಾಲು ಸಾಗಿಸಲು ಕಟ್ಟಾಯ ಹೋಬಳಿಯ  ಶೆಟ್ಟಿಹಳ್ಳಿ ಕಡೆಯಿಂದ ಹಾಸನಕ್ಕೆ ಹೋಗಲು ಬಳ್ಳಕೆರೆ ಗ್ರಾಮದ ಹತ್ತಿರ ಹೋಗುತ್ತಿದ್ದರು.
 ಆಗ ಕ್ಯಾಂಟರ್ ಚಾಲಕ ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬಳ್ಳಕೆರೆ ಗ್ರಾಮದ ಕೆರೆಯೊಳಗೆ ಕ್ಯಾಂಟರ್ ಮಗುಚಿಕೊಂಡು ಬಿದ್ದ ಪರಿಣಾಮ ಗಾಡಿಯಲ್ಲಿದ್ದ ರವಿ ಹಾಗೂ ವಿನಯ್ ಮೃತಪಟ್ಟಿದ್ದಾರೆ. ಈ ಬಗ್ಗೆ  ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 ಮತ್ತೊಂದು ಪ್ರಕರಣದಲ್ಲಿ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಪಾದಾಚಾರಿ ಮೃತಪಟ್ಟ ಘಟನೆ ಚನ್ನರಾಯಪಟ್ಟಣ ತಾಲೂಕಿನ ಬಳದಾರೆ ಗೇಟ್ ಬಳಿ ನಡೆದಿದೆ. ತಮಿಳುನಾಡಿನ ಕೃಷ್ಣಾಗಿರಿ ತಾ. ವೆಂಕಟಸಮುದ್ರಂ ವಾಸಿ ಜಗನ್ (42) ಮೃತಪಟ್ಟ ದುರ್ದೈವಿ.
ಅವರು ಲಾರಿಯನ್ನು ಚನ್ನರಾಯಪಟ್ಟಣದಿಂದ ಓಡಿಸಿಕೊಂಡು ಬಂದು ಬಳದಾರೆ ಗೇಟ್ ಹತ್ತಿರ ರಸ್ತೆ ಬದಿಯಲ್ಲಿ ನಿಲ್ಲಿಸಿ ನಿಸರ್ಗ ಡಾಬಾಕ್ಕೆ ಹೋಗಿ ಊಟ ಮಾಡಿಕೊಂಡು ವಾಪಸ್ ಲಾರಿಯ ಹತ್ತಿರ ಹೋಗಲು ರಸ್ತೆ ದಾಟುತ್ತಿದ್ದರು. ಆಗ ಹಾಸನ ಕಡೆಯಿಂದ ಬಂದ ಸಾರಿಗೆ ಬಸ್ ಚಾಲಕನ ನಿರ್ಲಕ್ಷ್ಯತೆಯಿಂದ ಡಿಕ್ಕಿ ಮಾಡಿದೆ. ಪರಿಣಾಮ ತೀವ್ರ ಗಾಯಗೊಂಡ ಜಗನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ  ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.