ಹಾಸನ

ರಾಜ್ಯ ಹಣಕಾಸು ಮುಕ್ತ ನಿಧಿ ಯೋಜನೆ ಅವ್ಯವಹಾರ ತನಿಖೆಗೆ ಒಳಪಡಿಸದಿದ್ದರೆ ಪ್ರತಿಭಟನೆ: ಕರವೇ ಎಚ್ಚರಿಕೆ

Published On :

ಕನ್ನಡಪ್ರಭ ವಾರ್ತೆ೤ ಹಾಸನ೤ ಸೆ. 12
ರಾಜ್ಯ ಹಣಕಾಸು ಮುಕ್ತನಿಧಿ ಯೋಜನೆಯಲ್ಲಿ ನಡೆದಿರುವ ಅವ್ಯವಹಾರವನ್ನು ಕೇಂದ್ರ ವಿಚಕ್ಷಣ ದಳದ (ಸಿವಿಸಿ) ತನಿಖೆಗೆ ಒಳಪಡಿಸದಿದ್ದಲ್ಲಿ  ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸಿ.ಡಿ.ಮನುಕುಮಾರ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಪ್ರತಿವರ್ಷ ಬಡವರಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ನಾನಾ ಇಲಾಖೆಯಿಂದ ಆರ್ಥಿಕ ಸಹಾಯ ಮಾಡುತ್ತಾ ಬಂದಿದೆ. ನಗರಸಭೆ ಮುಖಾಂತರ ಬಡ ಹಿಂದುಳಿದ ಹಾಗೂ ಅಲ್ಪಸಂಖ್ಯಾತರಿಗೆ ವೈಯಕ್ತಿಕ ವ್ಯವಹಾರ ಹಾಗೂ ಸಣ್ಣ ಉದ್ದಿಮೆ ಪ್ರಾರಂಭಿಸಲು ಶೇ.50ರಷ್ಟು ಧನ ಸಹಾಯ ನೀಡುತ್ತೆ. ಈ ಯೋಜನೆಯ ಧನ ಸಹಾಯ ಪಡೆಯಲು ನಗರದ ಆಟೋ ಚಾಲಕರು, ಸಣ್ಣ ವ್ಯಾಪಾರಸ್ಥರು ಹಾಗೂ ಹೊಸದಾಗಿ ಸಣ್ಣ ಉದ್ದಿಮೆ ಪ್ರಾರಂಭಿಸಲು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ನಗರದ ಹಲವು ಬ್ಯಾಂಕ್ ಮುಖಾಂತರ ಫಲಾನುಭವಿಗಳಿಗೆ ಸಾಲ ಮತ್ತು ಧನಸಹಾಯ ದೊರೆತಿದೆ. ಇನ್ನು ಕೆಲವು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ನಂತರ ಬ್ಯಾಂಕ್ ಒಪ್ಪಿಗೆ ಪತ್ರ ನಗರಸಭೆಗೆ ಕಳುಹಿಸಿ ಮತ್ತೆ ನಗರಸಭೆಯಿಂದ ಧನಸಹಾಯದ ಚೆಕ್ ಬ್ಯಾಂಕ್‌ಗೆ ತಲುಪಿರುವ ಅರಿವು ನಗರಸಭೆಗೆ ಇಲ್ಲ. ಸುಮಾರು 6ರಿಂದ 10 ತಿಂಗಳು ಕಳೆದರೂ ಇವರಿಗೆ ಇದರ ಜ್ಞಾನವೇ ಇಲ್ಲದಂತಾಗಿದೆ. ಒಂದೇ ಅಭ್ಯರ್ಥಿಗೆ ಎರಡು ಬಾರಿ ಧನ ಸಹಾಯ ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿದರು.
2012-13ನೇ ಸಾಲಿನ ಉಳಿದಿದ್ದ ಸುಮಾರು 48 ಫಲಾನುಭವಿಗಳ ಧನ ಸಹಾಯದ ಚೆಕ್ ಹಾಗೂ ಪಟ್ಟಿ ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ನಗರಸಭೆ ಕಳುಹಿಸಿತ್ತು. ಆದರೆ ಕಳೆದ ವಾರ 48 ಫಲಾನುಭವಿಗಳ ಧನ ಸಹಾಯದ ಚೆಕ್ಮ್‌ತ್ತು ಪಟ್ಟಿಯನ್ನು ನಗರಸಭೆ ಟಪಾಲ್ ಅವರಿಗೆ ನೀಡಿ ಕಾರಣ ನೀಡದೆ ಹಿಂದಿರುಗಿಸಿದ್ದಾರೆ. ಇಲ್ಲಿ ಅವ್ಯವಹಾರ ನಡೆಯಲು ಫಲಾನುಭವಿಗಳಿಗೆ ಬ್ಯಾಂಕ್‌ಗೆ ಸಂಬಂಧಿಸಿದ ದಾಖಲೆಗಳ ಎಟಿಎಂ ಪಾಸ್‌ಬುಕ್ ಬಾಂಡ್‌ಗಳನ್ನು ನೇರವಾಗಿ ನೀಡದಿರುವುದು ಹಾಗೂ ಎಷ್ಟೋ ಅಭ್ಯರ್ಥಿಗಳಿಗೆ ಹಣ ಜಾರಿಯಾದರೂ ಇದರ ಸಾಲ ಅಥವಾ ಧನ ಸಹಾಯದ ಹಣ ದೊರೆಯದಿರುವುದಾಗಿದೆ ಎಂದರು. ಆದ್ದರಿಂದ ಈ ಯೋಜನೆಯಲ್ಲಿ ನಡೆದಿರುವ ಅವ್ಯವಹಾರವನ್ನು ಸಿವಿಸಿ ತನಿಖೆಗೆ ಒಳಪಡಿಸಬೇಕು. ಎಚ್‌ಡಿಎಫ್‌ಸಿ ಬ್ಯಾಂಕ್‌ನವರು 48 ಫಲಾನುಭವಿಗಳ ಚೆಕ್‌ಗಳನ್ನು ವಾಪಸ್ ತರಿಸಿಕೊಂಡು ಫಲಾನುಭವಿಗಳಿಗೆ ನೀಡಬೇಕು ಎಂದು ಆಗ್ರಹಿಸಿದರು.
ಉಪಾಧ್ಯಕ್ಷ ಹರೀಶ್‌ಗೌಡ, ಲೋಕೇಶ್, ನಗರಾಧ್ಯಕ್ಷ ಶಿವುಕುಮಾರ್, ತಾಲೂಕು ಅಧ್ಯಕ್ಷ ಜಗನ್ನಾಥ್, ನಗರ ಪ್ರಧಾನ ಕಾರ್ಯದರ್ಶಿ ಸಮೀರ್ ಅಹಮದ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.