ಸುದ್ದಿ ಸಂಕ್ಷೇಪ
ಇಂದು ಸಾಕ್ಷರತಾ ದಿನಾಚರಣೆ
ಹಾಸನ: ಜಿಲ್ಲಾ ಪಂಚಾಯ್ತಿ, ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ, ಜಿಲ್ಲಾ ಸಾಕ್ಷರತಾ ಸಮಿತಿ, ತಾಲೂಕು ಸಾಕ್ಷರತಾ ಸಮಿತಿ, ತಾಪಂ, ಅರಸೀಕೆರೆ ಮತ್ತು ವಾರ್ತಾ ಇಲಾಖೆ, ಕ್ಷೇತ್ರ ಪ್ರಚಾರ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ತಾಲೂಕು ನವ ಸಾಕ್ಷರರ ಅಭಿವೃದ್ಧಿ ಸಂಸ್ಥೆ ಹಾಗೂ ಅರಸೀಕೆರೆ ತಾಲೂಕು ನಾಗರಿಕರು ಎಲ್ಲಾ ಸಂಘಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯನ್ನು ಸೆ. 14ರಂದು ಬೆಳಿಗ್ಗೆ 11ಕ್ಕೆ ಅರಸೀಕೆರೆ ಬಸವರಾಜೇಂದ್ರ ಪ್ರೌಢಶಾಲೆ ಆವರಣದಲ್ಲಿ ನಡೆಯಲಿದೆ. ಶಾಸಕ ಕೆ.ಎಂ. ಶಿವಲಿಂಗೇಗೌಡ ಉದ್ಘಾಟಿಸುವರು. ಶಾಸಕ ವೈ.ಎನ್.ರುದ್ರೇಶ್‌ಗೌಡರು ಧ್ವಜಾರೋಹಣ ನೆರವೇರಿಸುವರು. ತಾಪಂ ಅಧ್ಯಕ್ಷ ಎಚ್.ಟಿ.ಶಿವಮೂರ್ತಿ ಅಧ್ಯಕ್ಷತೆ ವಹಿಸುವರು. ಜಿಪಂ ಉಪಾಧ್ಯಕ್ಷ ಬಿಳಿಚೌಡಯ್ಯ, ಸದಸ್ಯ ಹುಚ್ಚೇಗೌಡ, ಕೃಷ್ಣನಾಯ್ಕ, ಈಶ್ವರಳ್ಳಿ ಲಕ್ಷ್ಮಣ್, ಪಾರ್ವತಮ್ಮ, ಸಿ.ಎನ್.ರತ್ನಮ್ಮ ಗೋಪಾಲಸ್ವಾಮಿ, ವಿ.ಪಿ.ಜ್ಯೋತಿ ಗಂಗಾಧರ್, ಉಪಾಧ್ಯಕ್ಷೆ ವಸಂತ ಹೊನ್ನಪ್ಪ, ಪ್ರೇಮಮ್ಮ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಹೇಮಾವತಿ: 3199 ಕ್ಯುಸೆಕ್ ಒಳ ಹರಿವು
ಹಾಸನ: ಹೇಮಾವತಿ ಜಲಾಶಯಕ್ಕೆ ಶುಕ್ರವಾರ 3139 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 4300 ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ನೀರಿನ ಗರಿಷ್ಠ ಮಟ್ಟ 2922 ಅಡಿ, ಇಂದಿನ ನೀರಿನ ಮಟ್ಟ 2921.08 ಅಡಿಯಾಗಿದ್ದು, 36.213 ಟಿಎಂಸಿ ನೀರು ಸಂಗ್ರಹವಾಗಿದೆ.
ಹೋಬಳಿವಾರು ಮಳೆ ವಿವರ: ಆಲೂರು 12, ಪಾಳ್ಯ 10.2, ಕುಂದೂರು 7, ಅರಕಲಗೂಡು 4.1, ಮಲ್ಲಿಪಟ್ಟಣ 7, ರಾಮನಾಥಪುರ 47.8, ಬಸವಾಪಟ್ಟಣ 42, ಕೊಣನೂರು 33.4, ದೊಡ್ಡಮಗ್ಗೆ 6.2, ದೊಡ್ಡಬೆಮ್ಮತ್ತಿ 5.2, ಅರಸೀಕೆರೆ 44, ಬಾಣಾವರ 24.2., ಗಂಡಸಿ 75.2, ಕಣಕಟ್ಟೆ 35.2, ಯಳವಾರೆ 96.4, ಜಾವಗಲ್ 39, ಬೇಲೂರು 19.4, ಹಳೇಬೀಡು 44.8, ಹಗರೆ 44.2, ಬಿಕ್ಕೋಡು 15.4, ಗೆಂಡೆಹಳ್ಳಿ 13.2, ಅರೇಹಳ್ಳಿ 10.4. ಚನ್ನರಾಯಪಟ್ಟಣ 64.2, ಉದಯಪುರ 32.8, ಬಾಗೂರು 46.2, ನುಗ್ಗೇಹಳ್ಳಿ 47.8, ಹಿರಿಸಾವೆ 14.2, ಶ್ರವಣಬೆಳಗೊಳ 72.8, ಹಾಸನ 15.6, ಕಟ್ಟಾಯ 7.2, ಶಾಂತಿಗ್ರಾಮ 20, ದುದ್ದ 43.4, ಗೊರೂರು 7.2, ಹೊಳೆನರಸೀಪುರ 8.8, ಹಳ್ಳಿಮೈಸೂರು 64.8, ಹಳೇಕೋಟೆ 6.2, ಸಕಲೇಶಪುರ 9.2, ಬಾಳ್ಳುಪೇಟೆ 10, ಯಸಳೂರು 5, ಶುಕ್ರವಾರಸಂತೆ 11.2, ಮಾರೇನಹಳ್ಳಿ 13.4, ಹೊಸೂರು 6, ಹಾನುಬಾಳು 12.8 ಮತ್ತು ಹೆತ್ತೂರು 7.6 ಮಿ ಮೀ. ಮಳೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

