ಸುದ್ದಿ ಸಂಕ್ಷೇಪ
ಡಾ. ದಾಬೋಲ್ಕರ್ ಹತ್ಯೆ ಖಂಡಿಸಿ ಮೆರವಣಿಗೆ
ಹಾಸನ: ಖ್ಯಾತ ವಿಚಾರವಾದಿ ಡಾ.ನರೇಂದ್ರ ದಾಬೋಲ್ಕರ್ ಹತ್ಯೆಯನ್ನು ಖಂಡಿಸಿ ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕ ನೇತೃತ್ವದಲ್ಲಿ ಶುಕ್ರವಾರ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಹೇಮಾವತಿ ಪ್ರತಿಮೆ ಬಳಿಯಿಂದ ಪ್ರತಿಭಟನಾ ಮೆರವಣಿಗೆ ಹೊರಟ ನೂರಾರು ಮಂದಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಮನವಿ ಸಲ್ಲಿಸಿದರು. ದಾಬೋಲ್ಕರ್ ಕೊಲೆಗಡುಕರನ್ನು ಶೀಘ್ರ ಬಂಧಿಸುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಲಾಯಿತು.
ದಾಬೋಲ್ಕರ್ ಅವರು ಅಂಧಶ್ರದ್ಧೆಗಳ ವಿರುದ್ಧ ಹೋರಾಡುವ ಸಲುವಾಗಿ ಮಹಾರಾಷ್ಟ್ರ ಅಂಧಶ್ರದ್ಧೆ ನಿರ್ಮೂಲನಾ ಸಮಿತಿ ಎಂಬ ಸಂಘಟನೆಯನ್ನು ಸ್ಥಾಪಿಸಿ ಅಂಧಶ್ರದ್ಧೆ ನಿರ್ಮೂಲನೆಗಾಗಿ ಮಸೂದೆಯೊಂದನ್ನು ಜಾರಿಗೆ ತರಬೇಕೆಂದು ಕಳೆದ 18 ವರ್ಷಗಳಿಂದ ಅವರು ಹೋರಾಡುತ್ತಿದ್ದರೂ ಅದನ್ನು ಕಡೆಗಣಿಸಿದ್ದ ಮಹಾರಾಷ್ಟ್ರ ಸರ್ಕಾರ ಅವರ ಬಲಿದಾನವಾದ 3 ದಿನದೊಳಗೆ ಆ ಮಸೂದೆಯನ್ನು ಅಂಗೀಕರಿಸದೆ ಎಂದರು.
ಬಿಜಿವಿಎಸ್ ಜಿಲ್ಲಾ ಕಾರ್ಯದರ್ಶಿ ಅಹಮದ್ ಹಗರೆ, ವಿಚಾರವಾದಿ ಜ.ಹೊ. ನಾರಾಯಣಸ್ವಾಮಿ, ಆರ್.ಪಿ. ವೆಂಕಟೇಶಮೂರ್ತಿ, ಜನಪರ ವೇದಿಕೆಯ ಡಾ. ವೀರಭದ್ರಪ್ಪ, ನಟೇಕರ್, ಧರ್ಮೇಶ್ ಡಿವೈಎಫ್ಐ ಮುಖಂಡ ಗಿರೀಶ್, ಮಮತ ಶಿವು, ಎಸ್ಎಫ್ಐನ ಪೃಥ್ವಿ ಮಾತನಾಡಿದರು. ಪ್ರತಿಭಟನಾ ಮೆರವಣಿಗೆಯಲ್ಲಿ ಎಸ್ಎಫ್ಐ, ಡಿವೈಎಫ್ಐ, ಜನಪರ ವೇದಿಕೆ, ಜಿಲ್ಲಾ ಸಾಂಸ್ಕತಿಕ ವೇದಿಕೆ, ನಾನಾ ದಲಿತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಹಾಗೂ ವಿಚಾರವಾದಿಗಳು ಪಾಲ್ಗೊಂಡಿದ್ದರು.
ಇಂದಿನಿಂದ ಮೂರು ದಿನ ವ್ಯಾಸಂಗ ಗೋಷ್ಠಿ
ಹಾಸನ: ಜಿಲ್ಲಾ ಥಿಯಾಸಫಿಕಲ್ ಸೊಸೈಟಿ ಒಕ್ಕೂಟ ಹಾಗೂ ಹಾಸನಾಂಬ ಥಿಯಾಸಫಿಕಲ್ ಸೊಸೈಟಿ ಆಶ್ರಯದಲ್ಲಿ ಸೆ. 14, 15 ಮತ್ತು 16 ರಂದು ವಾರ್ಷಿಕ ವ್ಯಾಸಂಗ ಗೋಷ್ಠಿಯನ್ನು ನಗರದ ಎಸ್ಆರ್ಎಸ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ.
ಸೆ.14 ರಂದು ಸಂಜೆ 5.30ಕ್ಕೆ ಕಾರ್ಯಕ್ರಮ್ನ ಶಾಸಕ ಎಚ್.ಎಸ್.ಪ್ರಕಾಶ್ ಉದ್ಘಾಟಿಸುವರು. ಹಾಸನಾಂಬ ಥಿಯಾಸಫಿಕಲ್ ಸೊಸೈಟಿ ಅಧ್ಯಕ್ಷ ಡಾ.ಎಂ.ಆರ್. ಚಂದ್ರಶೇಖರ್ ಅಧ್ಯಕ್ಷತೆ ವಹಿಸುವರು. ನಗರಸಭೆ ಆಯುಕ್ತ ನಾಗಭೂಷಣ್, ಕಾರ್ಯಪಾಲಕ ಎಂಜಿನಿಯರ್ ನಾಗೇಂದ್ರಯ್ಯ, ರಾಮಕೃಷ್ಣ ವಿದ್ಯಾಲಯದ ಪ್ರಾಂಶುಪಾಲ ಸಿ.ಎಸ್. ಕೃಷ್ಣಸ್ವಾಮಿ, ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಜಿ.ಆರ್. ತಿಮ್ಮಾಚಾರ್ ಭಾಗವಹಿಸುವರು. ಈ ಕಾರ್ಯಕ್ರಮವು ಆಧ್ಯಾತ್ಮಿಕತೆಗೆ ಒಳಗೊಂಡಿದ್ದು, ಸಾರ್ವಜನಿಕರಿಗೆ ಉಪಯುಕ್ತ ವಾಗಿದೆ ಎಂದು ಸೊಸೈಟಿ ಅಧ್ಯಕ್ಷ ಡಾ.ಎಂ.ಆರ್. ಚಂದ್ರಶೇಖರ್ ತಿಳಿಸಿದ್ದಾರೆ.
ಲಲಿತಮ್ಮ ಕಲ್ಯಾಡಿ ಗ್ರಾಪಂ ಅಧ್ಯಕ್ಷೆ
ಜಾವಗಲ್: ಹೋಬಳಿಯ ಕಲ್ಯಾಡಿ ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷೆಯಾಗಿ ಎಚ್.ಎಂ.ಲಲಿತಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷೆ ಉಮಾ ರಾಜಿನಾಮೆಯಿಂದ ಶುಕ್ರವಾರ ಚುನಾವಣೆ ನಡೆದು ಲಲಿತಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನು ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ತಾಪಂ ಇಓ ಮತ್ತು ಚುನಾವಣಾಧಿಕಾರಿ ಟಿ.ಎನ್.ಮೂರ್ತಿ ಘೋಷಿಸಿದರು. ಒಟ್ಟು 10 ಸದಸ್ಯರ ಪೈಕಿ 9 ಸದಸ್ಯರು ಇದ್ದರು.
ರಾಮಚಂದ್ರದೇವ ನಿಧನಕ್ಕೆ ಸಂತಾಪ
ಮೈಸೂರು: ಸಾಹಿತಿ ಡಾ.ರಾಮಚಂದ್ರದೇವ ನಿಧನಕ್ಕೆ ರಂಗಾಯಣ ಬಳಗ ಸಂತಾಪ ಸೂಚಿಸಿದೆ. ರಾಮಚಂದ್ರದೇವ ಪತ್ರಿಕೋದ್ಯಮ, ವಿಮರ್ಶೆ, ಕತೆ, ಕಾವ್ಯ ಸೇರಿದಂತೆ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ಕೊಡುಗೆ ನೀಡಿದ್ದಾರೆ ಎಂದು ಉಪನಿರ್ದೇಶಕ ಎಸ್.ಐ. ಭಾವಿಕಟ್ಟಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

