ಹಾಸನ

ಸುದ್ದಿ ಸಂಕ್ಷೇಪ

Published On :

ಕ್ರೀಡಾಕೂಟ ಇಂದು
ಹಾಸನ: ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಸೆ.15 ರಂದು ಬೆಳಗ್ಗೆ 9ಕ್ಕೆ  ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ. ಪುರುಷರ ಅಥ್ಲೆಟಿಕ್ಸ್ ವಿಭಾಗದಲ್ಲಿ 100 ಮೀ, 200ಮೀ, 400ಮೀ, 800ಮೀ, 1500ಮೀ, ಓಟಗಳು, ಉದ್ಧಜಿಗಿತ ಗುಂಡು ಎಸೆತ, ಟ್ರಿಪಲ್‌ಜಂಪ್, ಜಾವಲಿನ್ ಥ್ರೋ, ಡಿಸ್ಕ್ ಥ್ರೋ, ವಾಲಿಬಾಲ್, ಕಬಡ್ಡಿ, ಖೋಖೋ, ಬಾಲ್‌ಬ್ಯಾಡ್ಮಿಂಟನ್, ಫುಟ್‌ಬಾಲ್. ಮಹಿಳೆಯರಿಗೆ 100ಮೀ,200ಮೀ, 400ಮೀ, 800ಮೀ, 1500ಮೀ, 3000ಮೀ ಓಟಗಳು, ಉದ್ಧಜಿಗಿತ ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್‌ಜಂಪ್, ಜಾವಲಿನ್ ಥ್ರೋ, ಖೋ-ಖೋ, ಬಾಲ್‌ಬ್ಯಾಡ್ಮಿಂಟನ್ ಸ್ಪರ್ಧೆ ನಡೆಸಲಾಗುವುದು. ಹೆಚ್ಚಿನ ಮಾಹಿತಿಗೆ ಮೊ 9663145305 ಸಂಪರ್ಕಿಸಿ.
ಸ್ಪರ್ಧೆ ವಿಜೇತರು  
ಹಾಸನ: ಜಿಲ್ಲಾ ಸಹಕಾರ ಯೂನಿಯನ್ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ನಡೆದ ಚರ್ಚಾ ಸ್ಪರ್ಧೆಯಲ್ಲಿ ವಿಜೇತರಾದವರ ವಿವರ. ಚರ್ಚಾ ಸ್ಪರ್ಧೆ ವಿಷಯದ ಪರವಾಗಿ  ಚನ್ನರಾಯಪಟ್ಟಣ ನವೋದಯ ಪದವಿ ಪೂರ್ವ ಕಾಲೇಜಿನ ವಿ.ಕೆ.ಚೇತನ್, ಪ್ರಥಮ ಸ್ಥಾನ ಮತ್ತು ಸಕಲೇಶಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಚೈತ್ರಾ ಎಸ್.ಎ. ದ್ವಿತೀಯ ಸ್ಥಾನ ಹಾಗೂ ವಿಷಯದ ವಿರೋಧವಾಗಿ ಹಿರೀಸಾವೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಜೆ.ಕೆ. ಅರ್ಪಿತ ಪ್ರಥಮ ಸ್ಥಾನ, ನಗರದ ಎವಿಕೆ ಪದವಿ ಪೂರ್ವ ಕಾಲೇಜಿನ ಎಸ್.ಕೆ.ಹರ್ಷಿತಾ, ದ್ವಿತೀಯ ಬಹುಮಾನ  ಪಡೆದರು. ಜಿಲ್ಲಾ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಎಸ್.ವಿ.ಎಂ. ಇಂಗ್ಲಿಷ್ ಹೈಸ್ಕೂಲ್‌ನ ಕುಮಾರಿ ದೀಬಾ ಹುಸೇನ್, ದ್ವಿತೀಯ ಬಹುಮಾನ ವಿಜಯ ಹೈಸ್ಕೂಲ್‌ನ ದರ್ಶನ್ ಡಿ.ವಿ. ತೃತೀಯ, ಸಿಕೆಎಸ್ ಬಾಲಿಕಾ ಪ್ರೌಢಶಾಲಾ ಆರ್. ನಮಿತಾ ಪಡೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.