ಶ್ರೀಗಂಧ ಸಾಗಣೆ: ನಾಲ್ವರ ಬಂಧನ
ಸಕಲೇಶಪುರ: ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ನಾಲ್ವರನ್ನು ಬಂಧಿಸಿ, 7,500 ರು. ಬೆಲೆಯ ಶ್ರೀಗಂಧ ತುಂಡುಗಳನ್ನು ಪೊಲೀಸರು ಶುಕ್ರವಾರ ಶ್ರೀನಿವಾಸ್ ಹೋಟೆಲ್ ಮುಂಭಾಗ ವಶಪಡಿಸಿ ಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಇಬ್ರಾಹಿಂ (45), ಕಾಸರಗೋಡು ವಿದ್ಯಾನಗರದ ಅಬ್ದುಲ್ ಖಾದರ್ (55), ಬೇಲೂರು ತಾ. ಅರೇಹಳ್ಳಿಯ ಈದ್ಗಾ ರಸ್ತೆಯ ಬಾಬು ಅಲಿಯಾಸ್ ಕುಡುಕ ಬಾಬು (42), ಬಿಕ್ಕೋಡು ಗ್ರಾಮದ ಕುವೆಂಪುನಗರದ ಪುತ್ತು ಅಲಿಯಾಸ್ ಅಬ್ದುಲ್ (34) ಬಂಧಿತ ಆರೋಪಿಗಳು.
ಶುಕ್ರವಾರ ಮ. 3-30ರಲ್ಲಿ ಸಕಲೇಶಪುರ ಪಟ್ಟಣ, ಬಿ.ಎಂ ರಸ್ತೆ ಶ್ರೀನಿವಾಸ ಹೋಟೆಲ್ ಮುಂಭಾಗ ಆರೋಪಿಗಳು ಗಂಧದ ತುಂಡುಗಳನ್ನು ಕಳ್ಳತನದಿಂದ ಸಾಗಿಸಲು ಕೈ ಚೀಲದಲ್ಲಿ ಹಿಡಿದುಕೊಂಡಿದ್ದರು. ಈ ಸಂದರ್ಭದಲ್ಲಿ ಪಿಎಸ್‌ಐ ಜೀವನ್ ಅವರಿಗೆ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋದಾಗ ಆರೋಪಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು.
ಅವರನ್ನು ಹಿಡಿದು ವಿಚಾರಿಸಿದಾಗ ಶ್ರೀಗಂಧದ ತುಂಡುಗಳನ್ನು ಬೇರೆ ರಾಜ್ಯದ ಇಬ್ರಾಹಿಂ ಹಾಗೂ ಅಬ್ದುಲ್‌ಖಾದರ್ ಕೊಡಲು ಹೋಗುತ್ತಿದ್ದಾಗಿ ತಿಳಿಸಿದ್ದರ ಮೇರೆಗೆ ಅವರನ್ನು ಬಂಧಿಸಲಾಗಿದೆ. ಕೈಯಲ್ಲಿದ್ದ 7500 ರು. ಬೆಲೆಯ 3 ಕೆಜಿ 700 ಗ್ರಾಂ ತೂಕದ 17 ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಂಡಿರುವ ಪಟ್ಟಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದು, ನಾಲ್ಕು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

