ಸುದ್ದಿ ಸಂಕ್ಷೇಪ
ನಿಯಂತ್ರಣ ತಪ್ಪಿ ಕಾರು ಪಲ್ಟಿ
ಆಲೂರು: ಪಟ್ಟಣದ ಕೊನೇ ಪೇಟೆಯಲ್ಲಿ ಸ್ವಿಫ್ ಕಾರೊಂದು ಪಲ್ಟಿಯಾದ ಘಟನೆ ಭಾನುವಾರ ನಡೆದಿದೆ. ಬೆಳಗ್ಗೆ ಮಿಂಚು ಹರೀಶ್ ಎಂಬುವವರು ತಮ್ಮ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಬೈರಾಪುರದಿಂದ ಆಲೂರಿಗೆ ಬರುತ್ತಿದ್ದರು. ಕಾರು ಆಲೂರು-ಬಿಕ್ಕೋಡು ಕೂಡಿಗೆಯ ಬಳಿ ಬಂದಾಗ ಆಟೋವೊಂದು ದಿಢೀರ್ ಅಡ್ಡ ಬಂದ ಪರಿಣಾಮ ಅಪಘಾತ ತಪ್ಪಿಸಲು ಹೋಗಿ ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಅದೃಷ್ಟವಶಾತ್ ಯಾವುದೇ ಹಾನಿಯಾಗಿಲ್ಲ. ಒಂದು ವೇಳೆ ಲೈಟ್ ಕಂಬಕ್ಕೇನಾದರೂ ಡಿಕ್ಕಿ ಹೊಡೆದಿದ್ದರೆ ಕಾರು ಹಾಗೂ ಕಾರಿನಲ್ಲಿದ್ದವರಿಗೆ ತೀವ್ರ ಪೆಟ್ಟಾಗುವ ಸಂಭವವಿತ್ತು. ಭಾನುವಾರವಾದ್ದರಿಂದ ಸಾಮಾನ್ಯವಾಗಿ ಮಕ್ಕಳು ಮನೆಯ ಹೊರಗೆ ಆಟವಾಡುತ್ತಿರುತ್ತಾರೆ. ಆದರೆ ಆ ಸಮಯದಲ್ಲಿ ಅದೃಷ್ಟವೆಂಬಂತೆ ಅಲ್ಲಿ ಯಾರೂ ಇರಲಿಲ್ಲ. ಕಾರಿನ ಮೇಲ್ಭಾಗ ಜಖಂಗೊಂಡಿದೆ. ಇದಕ್ಕೆ ಕಾರಣ ತೀರಾ ಇಕ್ಕಟ್ಟಾದ ಪಟ್ಟಣದ ರಸ್ತೆ, ರಸ್ತೆಗೆ ಹೊಂದಿಕೊಂಡಂತಿರುವ ಲೈಟ್ ಕಂಬಗಳು. ಪಟ್ಟಣದ ಹೃದಯ ಭಾಗದಲ್ಲಿಯೂ ಇದೇ ರೀತಿಯ ಸಮಸ್ಯೆಗಳು ಆಗಾಗ ತಲೆದೋರುತ್ತಿದ್ದು, ಪಪಂ ಹಾಗೂ ಹಾಸನ ಎಸ್ಪಿ ರವಿ ಚನ್ನಣ್ಣನವರ್ ಆದೇಶ ಮೇರೆಗೆ ರಸ್ತೆ ಬದಿ ಅಂಗಡಿಗಳ ತೆರವು ಸೇರಿದಂತೆ ಟೆಂಪೋ ನಿಲುಗಡೆಯನ್ನು ಸ್ಥಳಾಂತರಿಸಿದೆ ವಾಹನಗಳ ಸಂಚಾರಕ್ಕೆ ಅನುಕೂಲ ವಾಗುತ್ತದೆ.
ನೋಂದಣಿಗೆ ಸೂಚನೆ
ಹಾಸನ: ಯಶಸ್ವಿನಿ ಸಹಕಾರಿ ರೈತರ ಆರೋಗ್ಯ ರಕ್ಷಣಾ ಯೋಜನೆ 2003 ನೇ ಜೂನ್ 1 ರಿಂದ ಪ್ರಾರಂಭವಾಗಿ 11 ನೇ ವರ್ಷಕ್ಕೆ ಕಾಲಿಟ್ಟಿದೆ. ಗ್ರಾಮೀಣ ಸಹಕಾರಿ ರೈತ ಸದಸ್ಯರ ಆರೋಗ್ಯ ರಕ್ಷಣೆಯಲ್ಲಿ ಕ್ರಾಂತಿಕಾರಕ ಸಾಧನೆಯನ್ನು ಮಾಡಿ ಎಲ್ಲರ ಗಮನ ಸೆಳೆದಿದೆ. ಈ ಯೋಜನೆಯಡಿ 2013-14 ನೇ ಸಾಲಿನಲ್ಲಿ ಸದಸ್ಯರ ನೋಂದಣಿಯು ಅ.15ಕ್ಕೆ ಕೊನೆಗೊಳ್ಳಲಿದೆ. ಸರ್ಕಾರ ಆದೇಶ ಹೊರಡಿಸಿ 2013-14 ನೇ ಸಾಲಿಗೆ ವಿಶೇಷವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸದಸ್ಯರ ವಾರ್ಷಿಕ ವಂತಿಗೆ ಮೊತ್ತ 200 ರು. ಸರ್ಕಾರವೇ ಭರಿಸುತ್ತದೆ ಎಂದು ತಿಳಿಸಿದ್ದಾರೆ. ಆದ್ದರಿಂದ ಜಿಲ್ಲೆಯಲ್ಲಿ ನಾನಾ ಸಹಕಾರ ಸಂಘಗಳಲ್ಲಿ ಸದಸ್ಯರಾಗಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸದಸ್ಯರು ಕೂಡಲೇ ಯಶಸ್ವಿನಿ ಯೋಜನೆಯಡಿ ನೊಂದಣಿ ಮಾಡಿಸಲು ಸಂಬಂಧಿಸಿದ ಸಹಕಾರ ಸಂಘದ ಕಾರ್ಯದರ್ಶಿಗಳನ್ನು ಭೇಟಿ ಮಾಡಲು ಸೂಚಿಸಲಾಗಿದೆ.
ಈ ಯೋಜನೆಯಡಿ ಸದಸ್ಯರಾಗಿ ನೋಂದಣಿಯಾಗಲು ಅ.15 ಕೊನೆ ದಿನವಾಗಿದ್ದು ಸಹಕಾರ ಸಂಘಗಳ ಎಲ್ಲಾ ಅರ್ಹ ಸದಸ್ಯರು ಈ ಯೋಜನೆಯಡಿ ನಿಗದಿತ ಅವಧಿಯೊಳಗೆ ನೋಂದಾಯಿಸಿಕೊಳ್ಳುವಂತೆ ಸಹಕಾರ ಸಂಘಗಳ ಉಪ ನಿಬಂಧಕ ಇಲ್ಯಾಸ್ ಉಲ್ಲಾ ಷರೀಫ್ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

