ಕಾನೂನು ತೊಡಕಿಂದ ಕಾಮಗಾರಿ ವಿಳಂಬ
ಕನ್ನಡಪ್ರಭ ವಾರ್ತೆ ಬೇಲೂರು ಸೆ.16
ಹಳೇಬೀಡು ಮಾದೀಹಳ್ಳಿ ಹೋಬಳಿಗೆ ಕುಡಿಯುವ ನೀರು ಹರಿಸುವ ಏತ ನೀರಾವರಿ ಕಾಮಗಾರಿ ವಿಳಂಬ ಸಂಬಂಧ ಸ್ಥಳಕ್ಕೆ ಪತ್ರಕರ್ತರೊಂದಿಗೆ ತೆರಳಿ ಪರಿಶೀಲನೆ ನಡೆಸಲಾಗುವುದು ಎಂದು ಶಾಸಕ ವೈ.ಎನ್.ರುದ್ರೇಶ್ಗೌಡ ಹೇಳಿದರು.
ಸೋಮವಾರ ಇಲ್ಲಿನ ಯಗಚಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಗಚಿ ಜಲಾಶಯದಿಂದ 2 ಹೋಬಳಿಗೆ ಕುಡಿಯುವ ನೀರು ಹರಿಸಲು ಏತ ನೀರಾವರಿ ಕಾಮಗಾರಿ ಆರಂಭಗೊಂಡಿದೆ. ಆದರೆ ಹೆಬ್ಬಾಳಿನಿಂದ ಮುಂದೆ ಅರಣ್ಯ ಇಲಾಖೆ ಪ್ರದೇಶ ಬರುವುದರಿಂದ ಕೆಲವು ಕಾನೂನು ತೊಡಕಿನಿಂದ ಕಾಮಗಾರಿ ವಿಳಂಬವಾಗುತ್ತಿದೆ ಎಂದರು.
ಅಲ್ಲದೆ ನೀರೆತ್ತುವ ಪಂಪ್ ಕಳಪೆಯಾಗಿದೆ ಎಂದು ರೈತಸಂಘದವರು, ಶಿವಪುರ ಬಸವಾನಂದಸ್ವಾಮೀಜಿ ಆರೋಪಿಸಿದ್ದಾರೆ. ಇನ್ನೂ ಕಾಮಗಾರಿ ಸಂಪೂರ್ಣವಾಗದೆ ಪಂಪ್ ಅಳವಡಿಸುವುದು ಅಸಾಧ್ಯವಾಗಿದೆ. ಏತ ನೀರಾವರಿ ಕಾಮಗಾರಿ ಬಗ್ಗೆ ಸಂಬಂದಪಟ್ಟ ಎಂಜನಿಯರ್ ಮಾಹಿತಿ ನೀಡಿದ್ದು ಈ ಬಗ್ಗೆ ಅರಿಯಲು ಪತ್ರಕರ್ತರೊಂದಿಗೆ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ವೀಕ್ಷಣೆ ಮಾಡಲಾಗುವುದು ಎಂದು ತಿಳಿಸಿದರು.
ತಾಲೂಕಿನ ಮಲೆನಾಡು ಭಾಗದಲ್ಲಿರುವ ಅರೇಹಳ್ಳಿ, ಚೀಕನಹಳ್ಳಿ, ಬಿಕ್ಕೋಡು, ಗೆಂಡೇಹಳ್ಳಿ ಹೋಬಳಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿದೆ.
ಈಗಲೂ ಈ ಹೋಬಳಿಯಲ್ಲಿ 4 ದಿನಕ್ಕೊಮ್ಮೆ ನೀರು ಬಿಡುವ ಸ್ಥಿತಿ ನಿರ್ಮಾಣವಾಗಿದೆ. ಈ ಭಾಗದ ಗ್ರಾಮಗಳಿಗೆ ಯಗಚಿ ಜಲಾಶಯದಿಂದ ಕುಡಿಯುವ ನೀರು ಹರಿಸುವ ಬಗ್ಗೆ ಮಲ್ಟಿ ವಿಲೇಜ್ ಸ್ಕೀಂ ಅಡಿಯಲ್ಲಿ ನೀರು ಹರಿಸುವ ಪ್ರಸ್ತಾವನೆಯನ್ನು ಸರ್ಕಾರ ಮಾಡಿದ್ದು ಶೀಘ್ರದಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ.
ಯಗಚಿ ಅಣೆಕಟ್ಟೆ ತುಂಬಿದ್ದರೂ ಬಾಗಿನ ಅರ್ಪಿಸಲು ತಡವಾಗಿದ್ದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಬರುವ ನಿರೀಕ್ಷೆ ಕಾರಣವಾಗಿತ್ತು. ಆದರೆ ಅವರು 2 ತಿಂಗಳ ನಂತರ ತಮಗೆ 2 ಜಿಲ್ಲೆ ಉಸ್ತುವಾರಿ ಜತೆಗೆ ಲೋಕೋಪಯೋಗಿ ಇಲಾಖೆ ಕೆಲಸದ ಒತ್ತಡವಿದ್ದು ನೀವೇ ಬಾಗಿನ ಅರ್ಪಿಸಿಬಿಡಿ ಎಂದರು. ಹಾಗಾಗಿ ನಾವು ಈ ದಿನ ಬಾಗಿನ ಅರ್ಪಿಸುತ್ತಿದ್ದು ದೇಶದಲ್ಲಿ ರೈತರು ಚೆನ್ನಾಗಿರಬೇಕು ಎಂದು ಪ್ರಾರ್ಥಿಸಿ ಬಾಗೀನ ಅರ್ಪಿಸಿದ್ದೇವೆ.
ಜಿಲ್ಲಾ ಉಸ್ತುವಾರಿ ಸಚಿವರು ತುಂಬಿದ ಅಣೆಕಟ್ಟೆಗೆ ಬಾಗಿನ ಅರ್ಪಿಸಬೇಕು ಎಂಬುದು ಸಂಪ್ರದಾಯ. ಆದರೆ ಸಂಘಟನೆಗಳು ಯಗಚಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದು, ಮತ್ತು ಅವರ ಮೇಲೆ ದೂರು ದಾಖಲಾಗಿರುವುದು ತಮ್ಮ ಗಮನಕ್ಕೆ ಬಂದಿಲ್ಲ ಎಂದರು.
ಬಾಗಿನ ಅರ್ಪಿಸುವ ಸಂದರ್ಭದಲ್ಲಿ ಪುರಸಭೆ ಸದಸ್ಯ ಬಿ.ಎಲ್.ಧರ್ಮೇಗೌಡ, ಮಾಜಿ ಅಧ್ಯಕ್ಷ ಬಿ.ಸಿ.ಮಂಜುನಾಥ್, ಜಿಪಂ ಸದಸ್ಯೆ ಜಿ.ಟಿ.ಇಂದಿರಾ, ಹೇಮಾವತಿ ಮಂಜುನಾಥ್,ಮಾಜಿ ಸದಸ್ಯ ಕೃಷ್ಣಕುಮಾರ್ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಜೆಡಿಎಸ್, ಕಾಂಗ್ರೆಸ್ ಮುಖಂಡರು, ಕಾಂಗ್ರೆಸ್ ಕಾರ್ಯಕರ್ತರು ಮೊದಲಾದವರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

