ಸುದ್ದಿ ಸಂಕ್ಷೇಪ
ಸಹಕಾರ ಸಂಘಕ್ಕೆ ರು. 3,30,702 ಲಾಭ
ಅರಸೀಕೆರೆ: ಸದಸ್ಯರ ಅಭಿಮಾನ ಹಾಗೂ ಸಹಕಾರದಿಂದ 2012-13ನೇ ಸಾಲಿನಲ್ಲಿ ಸಂಘವು 3,30,702 ರು. ನಿವ್ವಳ ಲಾಭ ಗಳಿಸಿದೆ ಎಂದು ಪಟ್ಟಣದ ಬಸವೇಶ್ವರ ಸಹಕಾರ ಸಂಘದ ಅಧ್ಯಕ್ಷ ಶಿವಕುಮಾರಸ್ವಾಮಿ ತಿಳಿಸಿದರು. ಪಟ್ಟಣದ ಮುರುಘರಾಜೇಂದ್ರ ಕಲ್ಯಾಣ ಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.ಯಾವುದೇ ಸಹಕಾರ ಸಂಘ ಅಭಿವೃದ್ಧಿಯಾಗಬೇಕಾದರೆ ಸಾಲವನ್ನು ನಿಗದಿತ ಸಮಯದಲ್ಲಿ ಮರುಪಾವತಿ ಮಾಡುವುದು ಅಗತ್ಯ. ಸಂಘದ ಬಹುತೇಕ ಸದಸ್ಯರು ನಿಯಮಿತ ಅವಧಿಯಲ್ಲಿ ಪಾವತಿ ಮಾಡುವ ಮೂಲಕ ಸಂಘವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಹಕಾರ ನೀಡಿದ್ದಾರೆ ಎಂದರು. ಸಂಘದಲ್ಲಿ ಒಟ್ಟು 739 ಸದಸ್ಯರಿದ್ದು ಷೇರು ಬಂಡವಾಳ 7,96,680 ರು. ಠೇವಣಾತಿ 51,62,605 ರು. ಸಂಗ್ರಹಣೆ ಮಾಡುವ ಮೂಲಕ ಗಣನೀಯ ಪ್ರಗತಿ ಹೊಂದಿದ್ದು ತ್ವರಿತ ಹಾಗೂ ವಿನಯಪೂರ್ವಕ ಸೇವೆ ಸದಸ್ಯರು ಹಾಗೂ ಸಾರ್ವಜನಿಕರು ಸಂಘದ ಮೇಲೆ ಇಟ್ಟ ವಿಶ್ವಾಸವೆ ಬೆಳವಣಿಗೆಗೆ ಮೂಲ ಕಾರಣವಾಗಿದೆ ಎಂದು ಹೇಳಿದರು.
ಉಪಾಧ್ಯಕ್ಷೆ ಸಿ.ಪಿ.ಶಿವಲೀಲಾ ಮಾತನಾಡಿ ಸಂಘ 27,25,000 ರು. ಸಾಲವನ್ನು ಸದಸ್ಯರಿಗೆ ನೀಡಿದ್ದು, ಆ ಪೈಕಿ 23,81,097 ರು. ವಸೂಲಾಗಿದೆ. ವರ್ಷಾಂತ್ಯಕ್ಕೆ 61,10,675 ರು. ಬಾಕಿ ಉಳಿದಿರುತ್ತದೆ. ಸದಸ್ಯರು ತಾವು ಪಡೆದ ಸಾಲವನ್ನು ನಿಗದಿತ ಸಮಯದಲ್ಲಿ ಪಾವತಿ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕಾರಿಯಾಗಬೇಕೆಂದು ಮನವಿ ಮಾಡಿದರು.ಸಂಘದ ದುಡಿಯುವ ಬಂಡವಾಳ 87,60,371 ರು. ಇದ್ದು ಈ ವರ್ಷದಲ್ಲಿ 3,30,702 ರು. ನಿವ್ವಳ ಲಾಭ ಗಳಿಸಿದ್ದು ಇದಕ್ಕೆ ಕಾರಣರಾದ ಎಲ್ಲ ಸದಸ್ಯರು, ಠೇವಣಿದಾರರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಕಾಲೇಜಿನಲ್ಲಿ ಪ್ರತಿಭಾ ಅನ್ವೇಷಣಾ ಕಾರ್ಯಕ್ರಮ
ಚನ್ನರಾಯಪಟ್ಟಣ: ಮಕ್ಕಳ ಪ್ರತಿಭೆ ಪೋಷಕರಿಂದ ಮೊದಲ ಹಂತವಾಗಿ ಹೊರಬರುತ್ತದೆ ಎಂದು ಪ್ರೊ. ಬಿ. ಎಚ್. ಹನುಮಂತಯ್ಯ ಹೇಳಿದರು. ಉದಯಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಪ್ರತಿಭಾನ್ವೇಷಣಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಶಾಲಾ ಕಾಲೇಜಿನಲ್ಲಿ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸಿಕೊಟ್ಟಾಗ ಅವರ ಪ್ರತಿಭೆ ಅನಾವರಣವಾಗುತ್ತದೆ. ಪ್ರತಿಭಾನ್ವೇಷಣೆಯಿಂದ ಪ್ರತಿಭೆ, ಸಂಘಟನೆ, ಬುದ್ದಿ ಹೊರಬರುತ್ತದೆ. ಪ್ರತಿಭೆಗೆ ನಾಚಿಕೆ ಸಂಕೋಚ ಇರಬಾರದು ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಪಾಂಶುಪಾಲ ಪ್ರೊ.ಬಿ.ನಂಜುಂಡಸ್ವಾಮಿ ಮಾತನಾಡಿ, ಒಂದು ಉತ್ತಮವಾದ ದೇಶ, ನಾಡು ಗುರುತಿಸಕೊಳ್ಳುವುದು ಪ್ರತಿಭೆಯಿಂದ. ಕತ್ತಿಯನ್ನು ಸಾಣೆ ಹಿಡಿಸುವ ಮೂಲಕ ಉಪಯೋಗವಾಗುವಂತೆ, ಭತ್ತ ಕಳಚಿ ಅಕ್ಕಿ ಬರುವಂತೆ ವಿದ್ಯಾರ್ಥಿ ಪ್ರತಿಭೆ ಹೊರಬರಬೇಕು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

