ಹಾಸನ

ಚುನಾವಣೆ ಹಿನ್ನೆಲೆಯಲ್ಲಿ 17ರಂದು ಸಂತೆ, ಜಾತ್ರೆ ರದ್ದು

Published On :

 ಹಾಸನ: ಏ.17ರಂದು ಲೋಕಸಭೆ ಚುನಾವಣೆಗೆ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ   ಹೊಳೆನರಸೀಪುರ, ಅರಕಲಗೂಡು, ಚನ್ನರಾಯಪಟ್ಟಣ, ಸಕಲೇಶಪುರ, ಅರಸೀಕೆರೆ ಮತ್ತು ಬೇಲೂರು ತಾಲೂಕುಗಳ ನಾನಾ ಗ್ರಾಮಗಳಲ್ಲಿ ನಡೆಯುವ ಸಂತೆ ಮತ್ತು ಜಾತ್ರೆಯನ್ನು  ರದ್ದುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ತಿಳಿಸಿದ್ದಾರೆ. ಹೊಳೆನರಸೀಪುರ ತಾಲೂಕಿನ ದೊಡ್ಡಹಳ್ಳಿ ಸಂತೆಮೈದಾನ, ಅರಕಲಗೂಡು ಮಲ್ಲಿಪಟ್ಟಣ ಹಾಗೂ ಕೊಣನೂರು ಸಂತೆ, ಚನ್ನರಾಯಪಟ್ಟಣ ತಾಲೂಕಿನ ಕಲ್ಕೆರೆ ಸಂತೆ, ಸಕಲೇಶಪುರ ತಾಲೂಕಿನ ಎಪಿಎಂಸಿ ಆವರಣ, ಹೆತ್ತೂರು, ಬೆಳಗೋಡು, ಬಾಳ್ಳುಪೇಟೆಗಳಲ್ಲಿ ನಡೆಯುವ  ಸಂತೆ, ಅರಸೀಕೆರೆ ಗಂಡಸಿ ಹ್ಯಾಂಡ್‌ಪೋಸ್ಟ್, ಕಿತ್ತನೆಕೆರೆಯಲ್ಲಿ ಹಾಗೂ ಬೇಲೂರಿನ ಹಗರೆಯಲ್ಲಿ ನಡೆಯುವ ಸಂತೆಗಳನ್ನು ರದ್ದುಗೊಳಿಸಲಾಗಿದೆ. ಅಲ್ಲದೆ ಅರಕಸೀರೆ ತಾಲೂಕಿನ ಯಾದಾಪುರದಲ್ಲಿ ನಡೆಯುವ ಜೇನುಕಲ್ಲು ಸಿದ್ದೇಶ್ವರ ಜಾತ್ರೆ ಹಾಗೂ ಬೇಲೂರು ತಾಲೂಕಿನ ನಟ್ಟೇಕೆರೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಅಂತರಗಟ್ಟಮ್ಮ ಗ್ರಾಮ ದೇವತೆಯ ಜಾತ್ರೆಯನ್ನೂ ರದ್ದುಗೊಳಿಸಿ ಆದೇಶ ನೀಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.