ಬಿಜೆಪಿ ಶಿಸ್ತಿನ ಸಿಪಾಯಿಯಾಗಿ ಪಕ್ಷದ ಪರ ಪ್ರಚಾರ ಮಾಡುವೆ
ಹಾಸನ: ನಾನು ಬಿಜೆಪಿ ಪಕ್ಷದ ಸಿಪಾಯಿ. ನನ್ನ ಪಕ್ಷದ ಅಭ್ಯರ್ಥಿ ವಿಜಯಶಂಕರ್ ಯೋಗ್ಯ ಹಾಗೂ ಸಜ್ಜನ. ಅವರಿಗೆ ಮತ ನೀಡಲು ಕೋರುತ್ತಿದ್ದೇನೆ ಎಂದು ಬಿಜೆಪಿ ಹಿರಿಯ ಮುಖಂಡ, ವಿಧಾನಪರಿಷತ್ ಸದಸ್ಯ ಬಿ.ಬಿ. ಶಿವಪ್ಪ ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೂರವಾಣಿ ಮೂಲಕ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ರೊಡನೆ ಮಾತನಾಡಿದ್ದು, ಏ.9 ರಂದು ನಗರಕ್ಕೆ ಬರುತ್ತಿದ್ದೇನೆ, ನೀವು ಬನ್ನಿ ಎಂದು ಹೇಳಿದ್ದಾರೆ. ಹೋಗುವೆ. ಏ.27 ರಂದು ನನ್ನ ಮೊಮ್ಮಗಳ ವಿವಾಹ ಇದೆ. ಈ ನಿಟ್ಟಿನಲ್ಲಿ ಪ್ರಚಾರದತ್ತ ಗಮನಹರಿಸಲು ಸಾಧ್ಯವಾಗುತ್ತಿಲ್ಲ. ನನ್ನನ್ನು ಸಂಪರ್ಕಿಸಿದವರಿಗೆ ಮತ್ತು ನಾನು ಹೋದ ಕಡೆ ಬಿಜೆಪಿಗೆ ಮತ ನೀಡಬೇಕೆಂದು ಹೇಳುತ್ತಿದ್ದೇನೆ ಎಂದು ಶಿವಪ್ಪ ತಿಳಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷನಾಗಿದ್ದವ. ನನ್ನ ಪತ್ನಿ ರಾಜ್ಯ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷರಾಗಿದ್ದರು. ಇಬ್ಬರು ಹಿಂದಿನಿಂದಲೂ ಪಕ್ಷಕ್ಕೆ ದುಡಿದಿದ್ದೇವೆ. ಈಗಲೂ ದುಡಿಯುತ್ತಿದ್ದೇವೆ. ಏನೇ ಇರಲಿ ನಾನೊಬ್ಬ ಪಕ್ಷದ ಸಿಪಾಯಿ. ಈ ನಿಟ್ಟಿನಲ್ಲಿ ಪಕ್ಷಬೆಂಬಲಿಸುವುದಾಗಿ ಶಿವಪ್ಪ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

