ಟಿಎಪಿಸಿಎಂಸ್ ಪದಾಧಿಕಾರಿಗಳ ಆಯ್ಕೆ
ಸಕಲೇಶಪುರ: ಪಟ್ಟಣದ ಕೃಷಿ ವ್ಯವಸಾಯೋತ್ಪನ್ನ ಮಾರುಕಟ್ಟೆ ಸಮಿತಿಗೆ ಭಾನುವಾರ ಚುನಾವಣೆ ನಡೆಯಿತು.
6 ಸದಸ್ಯ ಬಲದ ಟಿಎಪಿಸಿಎಂಎಸ್ ಸಮಿತಿಗೆ 573 ಮತದಾರರು ಮತಚಲಾಯಿಸಿದರೆ. 14 ಸಹಕಾರ ಸಂಘದಿಂದ 5 ಐವರು ಆಯ್ಕೆಗೆ ಅವಕಾಶವಿದ್ದು, ಒಬ್ಬ ಮತದಾರರಿಗೆ ಆರು ಮತ ಚಲಾಯಿಸಲು ಹಕ್ಕು ಪಡೆದಿದ್ದಾರೆ. ಒಟ್ಟು 27 ಅಭ್ಯರ್ಥಿಗಳ ಕಣದಲ್ಲಿದ್ದರಿಂದ ಚುನಾವಣೆ ಭಾರೀ ಪೈಪೋಟಿಯಿಂದ ನಡೆದಿತ್ತು.
ಮಧ್ಯಾಹ್ನದವರೆಗೆ ಮತದಾನ: ಚುನಾವಣೆ ಕಣದಲ್ಲಿ ಮಾಜಿ ಶಾಸಕ ಎಚ್.ಎಂ ವಿಶ್ವನಾಥ್, ಜಿಪಂ ಸದಸ್ಯ ಬೈರಮುಡಿ ಚಂದ್ರ ಇಳಿದಿದ್ದು ತಮ್ಮ ಬೆಂಬಲಿಗರನ್ನು ಗೆಲ್ಲಿಸಲು ತಂತ್ರ ಹೆಣೆಯಲು ಮಗ್ನರಾಗಿದ್ದರು. ಮಧ್ಯಾಹ್ನ ಮೂರು ಗಂಟೆಯವರೆಗೆ ಮತದಾನ ನಡೆದಿದ್ದು ಸಂಜೆ ನಾಲ್ಕು ಗಂಟೆಯಿಂದ ಮತ ಏಣಿಕೆ ಕಾರ್ಯ ನಡೆದು ಅಂತಿಮವಾಗಿ ಫಲಿತಾಂಶ ಘೋಷಿಸಲಾಯಿತು. ಚುನಾವಣಾಧಿಕಾರಿಗಳಾಗಿ ಸಹಾಕರ ಸಂಘಗಳ ಲೆಕ್ಕಪರಿಶೋಧನಾ ಸಹಾಯಕ ನಿರ್ದೇಶಕ ಫಿಲೋಮಿನಾರಾಜ್, ಸಹಾಯಕ ಚುನಾವಣಾಧಿಕಾರಿಯಾಗಿ ರಘು ಕಾರ್ಯ ನಿರ್ವಹಿಸಿದರು.
ಆಯ್ಕೆಗೊಂಡವರ ಪಟ್ಟಿ
ಹಾನುಬಾಳ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಕೇಶವಮೂರ್ತಿ, ಕಸಬಾ ಸಹಕಾರ ಸಂಘದಿಂದ ಭಾಸ್ಕರ್ ಶೆಟ್ಟಿ, ದೇವಾಲಕೆರೆ ಸಹಕಾರ ಸಂಘದಿಂದ ರವಿಕುಮಾರ್, ಬೆಳಗೋಡು- ಉಮೇಶ್, ಯಸಳೂರು - ಯೋಗೇಶ್, ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಸಾಮಾನ್ಯ ಕ್ಷೇತ್ರದಿಂದ ದೇವಿಹಳ್ಳಿ ಪ್ರೇಮಕುಮಾರ್, ಕಿರುವಾಲೆ ಶಶಿಕುಮಾರ್, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ದಿಣ್ಣೇಕೆರೆ ಗುರುಲಿಂಗಪ್ಪ, ಹಿಂದುಳಿದ ವರ್ಗ ಮೀಸಲು ಕ್ಷೇತ್ರದಿಂದ ಕಳಲೇ ಗೋವಿಂದೇಗೌಡ,ಮಹಿಳಾ ಮೀಸಲು ಕ್ಷೇತ್ರದಿಂದ ಉದೇವಾರದ ನಿರ್ಮಲಾ ಧರ್ಮರಾಜ್ ಹಾಗೂ ಸುಮ ಶಾಂತರಾಜ್ ಆಯ್ಕೆಯಾಗಿದ್ದಾರೆ.
ಮಕ್ಕಳ ಚಿತ್ರಗಳಿಗೂ ಉತ್ತೇಜನ ನೀಡಿ
ಹಾಸನ: ಕನ್ನಡ ಉಳಿಸುವ ನಿಟ್ಟಿನಲ್ಲಿ ಮಕ್ಕಳ ಚಿತ್ರಗಳಿಗೂ ಸರ್ಕಾರ ಉತ್ತೇಜನ ನೀಡಬೇಕಾದ ಅವಶ್ಯಕತೆ ಇದೆ ಎಂದು ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅಭಿಪ್ರಾಯಿಸಿದರು.
ನಗರದ ಸುಜಲ ಪದವಿ ಪೂರ್ವ ಕಾಲೇಜಿನಲ್ಲಿ ಬೆಂಗಳೂರಿನ ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್ ನಿರ್ಮಿಸುತ್ತಿರುವ ಕಾಡ ಹಾದಿಯ ಹೂಗಳು ಚಲನಚಿತ್ರಕ್ಕೆ ಕಲಾವಿದರ ತರಬೇತಿ ಹಾಗೂ ಆಯ್ಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮೌಲ್ಯ ತಿಳಿಸಬೇಕಿದೆ: ಸರ್ಕಾರ ಮಕ್ಕಳ ಇಂತಹ ಚಿತ್ರಗಳನ್ನು ನಿರ್ಮಿಸಲು ಉತ್ತೇಜನ ನೀಡಿದಲ್ಲಿ ಅವು ಗಳನ್ನು ಶಾಲಾ- ಕಾಲೇಜು ಮಕ್ಕಳಿಗೆ ಪ್ರದರ್ಶಿಸುವ ಮೂಲಕ ಉತ್ತಮ ಮೌಲ್ಯಗಳನ್ನು ತಿಳಿಸಿ ಕೊಡುವ ಅವಕಾಶವಿದೆ ಎಂದರು.
ಉತ್ತೇಜನ ಅತ್ಯಗತ್ಯ: ಸಿನಿಮಾದಿಂದ ಸಾಕಷ್ಟು ವಿಚಾರಗಳನ್ನು ಅರ್ಥಮಾಡಿಕೊಳ್ಳಬಹುದು. ಆದ್ದರಿಂದ ಮಕ್ಕಳ ಚಿತ್ರಗಳ ನಿರ್ಮಾಣಕ್ಕೆ ಉತ್ತೇಜನ ನೀಡಬೇಕಾದುದು ಅತ್ಯಗತ್ಯ ಎಂದರು.
ಶಿಬಿರದ ನಿರ್ದೇಶಕ ಎಲ್. ಎನ್. ಮುಕುಂದರಾಜ್ ಮಾತನಾಡಿ, ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಬೇಕೆಂಬ ಉದ್ದೇಶದಿಂದ ಹಾಸನದಂತಹ ಜಿಲ್ಲಾ ಕೇಂದ್ರದಲ್ಲಿ ಶಿಬಿರ ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸುಜಲ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಸುಬ್ಬೇಗೌಡ, ಶ್ರೀಗಂಧ ಸೇವಾ ಸಂಸ್ಥೆಯ ಅಧ್ಯಕ್ಷ ಎಸ್.ಡಿ.ರಂಗಸ್ವಾಮಿ, ಗೌರವಾಧ್ಯಕ್ಷ ಹರೀಶ್ ಕೋಟೆ ಹಾಗೂ ಹರೀಶ್ಕ್ಟ್ಟೆ ಬೆಳಗುಲಿ, ಕ್ರಾಂತಿ ಸೇನೆ ರಾಜ್ಯಾಧ್ಯಕ್ಷ ಅಣ್ಣಾ ಪರಮೇಶ್ವರ್ ಹಿರಿಯೂರ್ಕರ್, ಶ್ರೀಗಂಧ ಸೇವಾಸಂಸ್ಥೆಯ ರಾಜು, ಗಜೇಂದ್ರ, ಕುಶಾಲ್, ವರದರಾಜು, ಯೋಗೇಶ್, ಎಸ್.ಎಸ್. ರಂಗಸ್ವಾಮಿ, ರಾಜೇಶ್ ಹಾಗೂ ಇತರರು ಇದ್ದರು.
ಬಿಜೆಪಿ ಗೆಲವು ನಿಶ್ಚಿತ: ವಿಜಯಶಂಕರ್ ವಿಶ್ವಾಸ
ಹಾಸನ: ಬಿಜೆಪಿ ಪರ ಜಿಲ್ಲೆಯ ಜನತೆ ಒಲವು ತೋರಿ ಮತ ಹಾಕಿದ್ದು, ಗೆಲುವು ನಮ್ಮದೆ ಆನ್ನೋ ಆತ್ಮವಿಶ್ವಾಸವಿದೆ ಎಂದು ಬಿಜೆಪಿ ಅಭ್ಯರ್ಥಿ ವಿಜಯ ಶಂಕರ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮತನಾಡಿದ ಅವರು, ಮತದಾರರು ಹೋದ ಕಡೆಗಳಲ್ಲಿ ವಿಶ್ವಾಸದಿಂದ ಬರ ಮಾಡಿಕೊಂಡಿದ್ದಾರೆ. ಜನರ ಸ್ಪಂದನೆ ಕೂಡ ಸಿಕ್ಕಿದ್ದು, ಮತದಾರರು ಬಿಜೆಪಿಗೆ ಪೂರಕವಾಗಿ ನಡೆದುಕೊಂಡಿದ್ದಾರೆ. ಅಲ್ಲದೆ ಜಿಲ್ಲಾ ಬಿಜೆಪಿ ಕಾರ್ಯಕರ್ತರ ಒಗ್ಗಟ್ಟು ಸಹ ನನ್ನ ಪರ ಚೆನ್ನಾಗಿ ಕೆಲಸ ಮಾಡಿದೆ. ಆದಕ್ಕಾಗಿ ಜಿಲ್ಲೆಯ ಜನತೆ, ಮತದಾರರಿಗೆ ಅಭಿನಂದಿಸುವುದಾಗಿ ಹೇಳಿದರು.
ಬಿಜೆಪಿ ಪರ ಮತ: ಈ ಬಾರಿ ಮತದಾನದ ಪ್ರಮಾಣವು ಕಳೆದ ಬಾರಿಗಿಂತ ಹೆಚ್ಚಾಗಿರುವುದರಿಂದ ಬಿಜೆಪಿಗೆ ಅನುಕೂಲವಾಗಿದೆ. ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳು ಎಲ್ಲೆಲ್ಲಿ ಗೆಲ್ಲುತ್ತಾರೆ ಎಂಬ ಪಕ್ಷದ ಪಟ್ಟಿಯಲ್ಲಿ ಹಾಸನವು ಸೇರಿದೆ. ಮತದಾರರು ಹೃದಯಪೂರ್ವಕವಾಗಿ ಸ್ಪಂದಿಸಿದ್ದಾರೆ ಎಂದ ವಿಜಯ್ ಶಂಕರ್, ಜಿಲ್ಲೆಯ ಜನತೆ ಬದಲಾವಣೆ ಬಯಸಿ ಬಿಜೆಪಿಯ ಪರ ಮತ ಹಾಕಿದ್ದಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಸೂಕ್ತವಾಗಿ ಸ್ಪಂದಿಸಿಲ್ಲ: ಅರಸೀಕೆರೆ, ಅರಕಲಗೂಡು, ಸಕಲೇಶಪುರ, ಬೇಲೂರು ಮತ್ತು ಕಡೂರಿನಲ್ಲಿ ಬಿಜೆಪಿಯ ಪರ ಮತಗಳು ಹೆಚ್ಚಾಗಿ ಪಡೆಯಲಿದ್ದು, ಹೊಳೆನರಸೀಪುರ, ಹಾಸನದಲ್ಲಿಯೂ ಸಹ ಉತ್ತಮವಾದ ಮತಗಳು ಬರಲಿದೆ ಎಂದ ಅವರು, ನಾನು ಹೋದ ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಇತರೆ ಸಮಸ್ಯೆಗಳು ಅರಿವಾಗಿದ್ದು, ಜನರ ಸಮಸ್ಯೆಗೆ ಜನಪ್ರತಿನಿಧಿಗಳು ಸೂಕ್ತವಾಗಿ ಸ್ಪಂದಿಸಿಲ್ಲದಿರುವುದು ಗೋಚರವಾಯಿತು ಎಂದರು.
ಒಟ್ಟಿನಲ್ಲಿ ದೇಶದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ಈಸಂದರ್ಭದಲ್ಲಿ ಮಾಜಿ ಶಾಸಕ ಬಿ.ಆರ್. ಗುರುದೇವ್, ಜಿಲ್ಲಾಧ್ಯಕ್ಷ ರೇಣುಕುಮಾರ್, ಮುಖಂಡರಾದ ನವಿಲೆ ಅಣ್ಣಪ್ಪ, ಪ್ರಸನ್ನಕುಮಾರ್, ಕೃಷ್ಣೇಗೌಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

