ಹಾಸನ

'ಶೇಕ್ಸ್‌ಪಿಯರ್ ಬರಹಗಳಿಗೆ ಸಾವಿಲ್ಲ'

Published On :

ಹಾಸನ: ವಿಲಿಯಮ್ ಶೇಕ್ಸ್‌ಪಿಯರ್ ಸಾವು ಅವರ ದೇಹಕ್ಕೆ ಹೊರತು ಅವರ ಬರವಣೆಗೆಗಲ್ಲ ಎಂದು ಎಂ. ಕೃಷ್ಣ ಪಿಯು ಕಾಲೇಜಿನ ಪ್ರಾಂಶುಪಾಲೆ ಪ್ರೊ. ವಿಜಯಲಕ್ಷ್ಮಿ ಭಟ್ ಹೇಳಿದರು.
ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಇಂಗ್ಲೀಷ್ ವಿಭಾಗದ ವತಿಯಿಂದ ಬುಧವಾರ ನಡೆದ ವಿಲಿಯಮ್ ಶೇಕ್ಸ್‌ಪಿಯರ್ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಲ್ಲರೂ ಹುಟ್ಟುತ್ತಾರೆ. ಎಲ್ಲರೂ ಸಾಯುತ್ತಾರೆ.
ಆದರೆ ಕೆಲವರು ಮಹಾನ್ ವ್ಯಕ್ತಿಗಳಾಗಿ ಸಾಯುತ್ತಾರೆ. ಅವರಲ್ಲಿ ವಿಲಿಯಮ್ ಶೇಕ್ಸ್‌ಪಿಯರ್ ಕೂಡ ಒಬ್ಬರು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ರೂಪ್ ರಾಜ್ ಚಂದನ್ ಮಾತನಾಡಿ, ಇಡೀ ಪ್ರಪಂಚದ ನಾಟಕರಂಗ, ಬೌದ್ಧಿಕ, ಸಾಂಸ್ಕೃತಿಕ ರಂಗಕ್ಕೆ  ಶೇಕ್ಸ್‌ಪಿಯರ್ ಹೆಸರು ಚಿರಪರಿಚಿತ ಎಂದರು.
ಕಾರ್ಯಕ್ರಮದಲ್ಲಿ ಹಾಸನದ ಸರ್ಕಾರಿ ವಿಜ್ಞಾನ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥ ಪ್ರೊ. ನಾರಾಯಣ ಪ್ರಸಾದ್, ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಪ್ರೊ. ಕುಸುಮಾ, ಪ್ರಾಧ್ಯಾಪಕರಾದ ಪದ್ಮಿನಿ, ಸುರೇಶ್, ಸುಲೋಚನಾ, ಸಾವಿತ್ರಿ, ಆಶಾ, ಪೂರ್ಣಿಮಾ, ಚಂದ್ರಶೇಖರ್, ರಮೇಶ್ ನಾಯ್ಕ್, ನಾಗೇಂದ್ರನಾಥ ಗಿರಿ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.