ಉಳುಮೆಯಲ್ಲಿ ರೈತರು
ಹಾಸನ: ಜಿಲ್ಲಾದ್ಯಂತ ವರ್ಷದ ಮೊದಲ ಮಳೆಯಾಗಿದ್ದು, ರೃತರು ಸಂತಸದಿಂದ ಉಳುಮೆ ಕಾರ್ಯ ಆರಂಭಿಸಿದ್ದಾರೆ.
ಯುಗಾದಿಯ ಮೂಲಕ ವರ್ಷಾರಂಭವಾದ ಬೆನ್ನಲ್ಲೇ ಇದು ಮೊದಲ ಮಳೆಯಾಗಿದ್ದು, ಭೂಮಿಯನ್ನು ತಂಪಾಗಿಸಿದೆ. ಇನ್ನೂ ಮುಂದೆ ಬರುವ ಮಳೆಗಳು ಕಾಲಕ್ಕೆ ಸರಿಯಾಗಿ ಬಂದು, ಆ ಮೂಲಕ ವ್ಯವಸಾಯಕ್ಕೆ ಅನುಕೂಲವಾಗಲಿದೆ ಎಂಬ ಕನಸನ್ನು ರೃತರು ಹೊಂದಿದ್ದಾರೆ. ಮೊದಲ ಮಳೆಯಿಂದ ಹರ್ಷಗೊಂಡಿರುವ ರೈತರು ಕೃಷಿ ಕಾರ್ಯಗಳಲ್ಲಿ ಮಗ್ನರಾಗಿದ್ದಾರೆ. ಮಳೆಯಾಗಿರುವುದರಿಂದ ಸಂತಸಗೊಂಡಿರುವ ಅನ್ನದಾತರು ಉಳುಮೆ ಕಾರ್ಯ ಆರಂಭಿಸಿದ್ದಾರೆ.
ಆಲೂ ಬಿತ್ತನೆಗೆ ಸಿದ್ಧತೆ: ಜಿಲ್ಲೆಯ ವಾಣಿಜ್ಯ ಬೆಳೆಯಾಗಿರುವ ಆಲೂಗಡ್ಡೆ ಬಿತ್ತನೆಗೆ ಭೂಮಿಯನ್ನು ಹಸನುಗೊಳಿಸಲಾಗುತ್ತಿದೆ. ಈಗಾಗಲೇ ಬಿತ್ತನೆ ಆಲೂಗಡ್ಡೆ ಶೀಥಲ ಗೃಹಗಳಲ್ಲಿ ಶೇಖರಣೆಯಾಗುತ್ತಿದೆ. ಪಂಜಾಬ್ ಸೇರಿದಂತೆ ನಾನಾ ರಾಜ್ಯಗಳಿಂದ ಬಿತ್ತನೆ ಆಲೂಗಡ್ಡೆಯನ್ನು ವರ್ತಕರು ತರಿಸಿ, ಈಗಾಗಳೇ ದಾಸ್ತಾನು ಮಾಡಿಕೊಳ್ಳುತ್ತಿದ್ದಾರೆ. ಕಳೆದ ಒಂದು ತಿಂಗಳಿಂದಲೂ ಬಿತ್ತನೆ ಬೀಜ ದಾಸ್ತಾನು ಕಾರ್ಯ ಆರಂಭವಾಗಿದ್ದು, ಸಾವಿರಾರು ಟನ್ ಆಲೂಗಡ್ಡೆ ಶೀಥಲ ಗೃಹಗಳಲ್ಲಿದೆ. ಕಳೆದ ವಾರ ಮಳೆಯಾಗಿರುವುದರಿಂದ ರೃತರು ಉಳುಮೆಯಲ್ಲಿ ನಿರತರಾಗಿದ್ದಾರೆ. ಜೂನ್ ವೇಳೆಗೆ ಬಿತ್ತನೆ ಶುರುವಾಗಲಿದೆ.
ಆಲೂ ಸುಖ, ದುಃಖ: ಶೀಥಲ ಗೃಹದಿಂದ ಬಿತ್ತನೆಗೆಂದು ತರುವ ಆಲೂಗಡ್ಡೆಯನ್ನು ರೃತರು 8ರಿಂದ 10 ದಿನಗಳ ಕಾಲ ಗಾಳಿಗೆ ಹರಡಲಾಗುತ್ತದೆ. ನಂತರ ಬಿತ್ತನೆ ಮಾಡಲಾಗುತ್ತದೆ. ಬಿತ್ತನೆ ನಂತರದ 4 ತಿಂಗಳಲ್ಲಿ ಬೆಳೆ ಕೈಗೆ ಬರುತ್ತದೆ. ಆದರೆ ಕಳೆದ ಕೆಲವು ವರ್ಷಗಳಿಂದ ಆಲೂಗಡ್ಡೆ ಬೆಳೆ ಅಂಗಮಾರಿ ರೋಗಕ್ಕೆ ತುತ್ತಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಆಲೂಗಡ್ಡೆ ಬೆಳೆದು ನಷ್ಟ ಅನುಭವಿಸಿದ ಕೆಲ ರೈತರು ಆತ್ಮಹತ್ಯೆಗೆ ಶರಣಾದ ಉದಾಹರಣೆಗಳೂ ಉಂಟು. ಸರ್ಕಾರದಿಂದ ಇಲ್ಲಿಯವರೆಗೆ ಪರಿಹಾರದ ಹಣ ಬಂದಿಲ್ಲ. ಇಷ್ಟಾದರೂ, ರೈತರು ಸಾಂಪ್ರದಾಯಿಕ ಬೆಳೆ ಬೆಳೆಯುವ ಕಾರ್ಯದಿಂದ ಹಿಂದೆ ಸರಿದಿಲ್ಲ.
ಪ್ರಸ್ತುತ, ಮೊದಲ ಮಳೆ ರೈತರ ಮೊಗದಲ್ಲಿ ನಗು ತಂದಿದೆ. ಹೀಗೆಯೇ ನಿರೀಕ್ಷಿತ ಮಳೆಗಳೂ ನಿಗದಿತ ಸಮಯಕ್ಕೆ ಸರಿಯಾಗಿ ಆಗಮಿಸಿದರೆ ಉತ್ತಮ ಇಳುವರಿ ಪಡೆದು ರೈತರ ಬದುಕು ಹಸನಾಗುತ್ತದೆ ಎಂಬುದು ಹಲವರ ಆಶಯ.
ಪಿ. ರವಿಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

