ಸಾಹಿತ್ಯ ಗುಣಮಟ್ಟ ಕ್ಷೀಣ
ಬೇಲೂರು: ಇತ್ತೀಚಿನ ದಿನಗಳಲ್ಲಿ ದೃಶ್ಯ ಮಾಧ್ಯಮಗಳ ಹಾವಳಿಯಿಂದ ಕನ್ನಡ ಸಾಹಿತ್ಯ ಕತ್ತರಿಯಲ್ಲಿ ಸಿಕ್ಕಿಕೊಂಡು ಸಾಹಿತ್ಯ ಕ್ಷೀಣಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಂ. ಆನಂದ್ ವಿಷಾದಿಸಿದರು.
ಪಟ್ಟಣದ ಶ್ರೀಚನ್ನಕೇಶವ ಬಯಲುರಂಗ ಮಂದಿರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ಬೆಳಗಾವಿ, ಸ್ವರ ಸುರಭಿ ಸಂಸ್ಥೆ ಬೆಂಗಳೂರು ಇವರ ಆಶ್ರಯದಲ್ಲಿ ನಡೆದ 'ಬನ್ನಿ ನಮ್ಮ ಹಾಡಿಗೆ' ಎಂಬ 9ನೇ ಶಿಬಿರದ ಮುಕ್ತಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದುಸ್ಥಿತಿ ಒದಗಿದೆ: ಕನ್ನಡ ಸಾಹಿತ್ಯ ಬಹು ಪ್ರಾಚೀನ ಇತಿಹಾಸದಿಂದ ಕೂಡಿದೆ. ಆದರೆ, ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ಉಳಿವಿಗೆ ದಿನನಿತ್ಯ ಹೋರಾಟ ಮಾಡಬೇಕಾದ ದುಸ್ಥಿತಿ ಒದಗಿದೆ ಎಂದು ಆನಂದ್ ಹೇಳಿದರು. ಹಾಸನ ಎವಿಕೆ ಕಾಲೇಜು ಉಪನ್ಯಾಷಕ ಡಾ.ಎಚ್.ಎಲ್. ಮಲ್ಲೇಶಗೌಡ ಮಾತನಾಡಿ, ಅಧುನಿಕ ಕನ್ನಡ ಸಾಹಿತ್ಯವನ್ನು ಪ್ರತಿಯೊಂದು ಮನೆ- ಮನಕ್ಕೆ ತೆಗೆದುಕೊಂಡು ಹೋದವರು ಸುಗಮ ಸಂಗೀತ ಗಾಯಕರು ಮತ್ತು ಸಂಗೀತ ನಿರ್ದೇಶಕರು. ಅವರು ನವ್ಯ ಕಾವ್ಯದ ಕವಿತೆಗಳಿಗೆ ಭಾವ ತುಂಬಿ, ಮನ ತುಂಬಿ ಹಾಡಿ ಜನಮನ ಗೆದ್ದಿದ್ದಾರೆ. ಆದರೆ, ಕೆಲ ಸುಗಮ ಸಂಗೀತ ನಿರ್ದೇಶಕರು ಸಂಗೀತ ನಿರ್ದೇಶನ ಮಾಡುವ ಅತುರದಲ್ಲಿ ಸಾಹಿತ್ಯದ ಬಗ್ಗೆ ಜಾಗೃತಿ ವಹಿಸಬೇಕು ಎಂದು ಸಲಹೆ ನೀಡಿದರು.
ಟ್ರಸ್ಟ್ಗೆ ಕೀರ್ತಿ: ಸ್ವರ ಸುರಭಿ ಟ್ರಸ್ಟ್ ಬೆಂಗಳೂರು ಅಧ್ಯಕ್ಷ ಶ್ರೀಧರ ಅಯ್ಯರ್ ಮಾತನಾಡಿ, ಡಾ. ಬೆಟಗೇರಿ ಕೃಷ್ಣಶರ್ಮಾ ಅವರ ಹಲವು ಹತ್ತು ಕವಿತೆಗಳನ್ನು ನಾಡಿನ ಮೂಲೆ- ಮೂಲೆಗೆ ತೆಗದುಕೊಂಡು ಹೋಗುವಲ್ಲಿ ಸ್ಮಾರಕ ಟ್ರಸ್ಟ್ ಶತ ಪ್ರಯತ್ನ ಮಾಡುತ್ತಾ ಬಂದಿದೆ, ಇಂತಹ ಅಪರೂಪ ಶಿಬಿರಕ್ಕೆ ಜೀವ ತುಂಬುತ್ತಿರುವ ಸುಗಮ ಸಂಗೀತ ಶ್ರೇಷ್ಠ ಗಾಯಕ ಮೃತ್ಯುಂಜಯ ದೊಡ್ಡವಾಡ್ ಅವರು ಆನಂದಕಂದ ಅವರ ಬಹುತೇಕ ಗೀತೆಗಳಿಗೆ ಬಾವ ತುಂಬಿ ಹಾಡಿದ್ದಾರೆ. ಈ ದಿಸೆಯಲ್ಲಿ 9 ಶಿಬಿರದಲ್ಲಿ ಸುಮಾರು 1300 ಜನರು ತರಬೇತಿ ಪಡೆದಿದ್ದು, ಬೆಟಗೇರಿ ಸ್ಮಾರಕ ಟ್ರಸ್ಟ್ಗೆ ಕೀರ್ತಿ ತಂದಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ನರಹರಿ ದೀಕ್ಷಿತ್, ಹಾಸನ ಬೆಳ್ಳಿ ಮಂಡಲ ಅಧ್ಯಕ್ಷ ಜಾವಗಲ್ ಪ್ರಸನ್ನಕುಮಾರ್, ಸಂಶೋಧಕ ಹಾಗೂ ಸಾಹಿತಿ ಶ್ರೀವತ್ಸ ಎಸ್. ವಿ.ಟಿ, ಕಸಾಪ ಪದಾಧಿಕಾರಿಗಳಾದ ಕೆ. ಸುದರ್ಶನ್, ಪತ್ರಕರ್ತ ಅನಂತರಾಜೇ ಅರಸು, ಕಾರ್ಯದರ್ಶಿ ಆರ್.ಎಸ್. ಮಹೇಶ್, ಕೋಶಾಧ್ಯಕ್ಷ ಕೆ.ಎಸ್. ಚಂದ್ರಶೇಖರ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

