ಹಾಸನ

'ವಿದ್ಯಾರ್ಥಿ ಸಂಘದ ಪ್ರಾಮುಖ್ಯತೆ ಹೆಚ್ಚಿದೆ'

Published On :

ಜಾವಗಲ್: ಪ್ರಸ್ತುತ ಸನ್ನಿವೇಶದಲ್ಲಿ ಕಾಲೇಜುಗಳಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ಪ್ರಾಮುಖ್ಯತೆ ಹೆಚ್ಚಾಗಿದೆ ಎಂದು ಹಳೇಬೀಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ದೇವಿರಯ್ಯ ಅಭಿಪ್ರಾಯಪಟ್ಟರು.
ಜಾವಗಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಳೆಯ ವಿದ್ಯಾರ್ಥಿ ಸಂಘ ರಚನೆಯ ಹಿನ್ನೆಲೆಯಲ್ಲಿ ಇತ್ತೀಚೆಗೆ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಮಾನವ ಸಂಘಜೀವಿಯಾಗಿದ್ದು, ತನ್ನ ಸಾಮಾನ್ಯ ಬೇಡಿಕೆಗಳನ್ನು  ಈಡೇರಿಸಿಕೊಳ್ಳಲು ಸಂಘ ಅಗತ್ಯವೆಂದರು.
ಮಾಹಿತಿ: ಪಠ್ಯಕ್ಕಿಂತಲೂ ಪಠ್ಯೇತರ ಚಟು ವಟಿಕೆಗಳು ಅತ್ಯವಶ್ಯಕವಾಗಿದ್ದು, ಚಟುವಟಿಕೆಗಳ ಈಡೇರಿಕೆಗೆ ಸಂಘ ಸಹಕಾರಿಯಾಗಿದೆ ಎಂದು ತಿಳಿಸಿದರು. ಸಂಘದ ಅವಶ್ಯಕತೆ, ರಚನೆ, ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಹಳೇಬೀಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕ ಡಾ. ಈಶ್ವರಪ್ಪ ಮಾತನಾಡಿ, ಸಂಘವು ಉತ್ತಮ ಧ್ಯೇಯೋದ್ದೇಶದಿಂದ ರಚನೆಯಾಗಿ ಸದಾ ಕ್ರಿಯಾಶೀಲವಾಗಿ, ರಚನಾತ್ಮಕವಾಗಿ ಸಮಾಜ ಮುಖಿ ಚಟುವಟಿಕೆಗಳಿಂದ ಕೆಲಸ ಮಾಡಬೇಕು. ಸಂಘವು ಕಾಲೇಜು ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಾರ್ಯ ನಿರ್ವಹಿಸಬೇಕೆಂದರು.
ಪ್ರಯೋಜನವಿದೆ: ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಕೆ. ಭಾಷಾ ಮಾತನಾಡಿ, ಹಳೆಯ ವಿದ್ಯಾರ್ಥಿ ಸಂಘದಿಂದ ಕಾಲೇಜು ಹಾಗೂ ಸಂಘದ ಸದಸ್ಯರ ವೈಯಕ್ತಿಕ ಬೆಳವಣಿಗೆಗೆ ಪ್ರಯೋಜನವಿದೆ ಎಂದರು.
ಸಂಘ ರಚನೆ: ಸ್ಪರ್ಧಾತ್ಮಕ ಯುಗದಲ್ಲಿ ಪೈಪೋಟಿ ಮಾಡಲು ಕೀಳರಿಮೆ ಬಿಟ್ಟು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕು. ಪ್ರಸ್ತುತ ವಿದ್ಯಾರ್ಥಿಗಳ ಬೆಳವಣಿಗೆಯ ಮೇಲೆ ಪ್ರೇರಣೆಯುಂಟುಮಾಡಿ, ಆತ್ಮವಿಶ್ವಾಸ ಹೊಂದಿ ಸ್ವಾವಲಂಬಿ ಬದುಕನ್ನು  ರೂಪಿಸಿಕೊಳ್ಳಲು ಸಂಘ ಪೂರಕ ವಾತಾವರಣ ಕಲ್ಪಿಸಿಕೊಡುತ್ತದೆ. ನ್ಯಾಕ್ ಸೂಚನೆಯಂತೆ ಸಂಘ ರಚಿಸಲಾಗುತ್ತಿದೆ ಎಂದರು.
ಕಾಲೇಜಿನ ಸಹ ಪ್ರಾಧ್ಯಾಪಕರಾದ ಶಂಕರಲಿಂಗೇಗೌಡ, ಶಿವ ಕುಮಾರ್, ಶಿವಶಂಕರಮೂರ್ತಿ, ಹಳೆಯ ವಿದ್ಯಾರ್ಥಿಗಳಾದ ಸಾಫ್ಟ್‌ವೇರ್ ಉದ್ಯೋಗಿ ರವೀಶ್, ಉಪನ್ಯಾಸಕರಾದ ರೇಣುಕಾ ಮೂರ್ತಿ, ಗುರುರಾಜ್, ಓಂಕಾರಮೂರ್ತಿ, ಶೃತಿ, ಗಣೇಶ್, ವಿನುತ, ಜೆ.ಎಸ್. ರವಿಶಂಕರ್ ಮಾತನಾಡಿದರು.
ಸಹಪ್ರಾಧ್ಯಾಪಕ ಸತೀಶ್, ಉಪನ್ಯಾಸಕರಾದ ದಿಲೀಪ್, ದಯಾ ನಂದ್, ಪ್ರದೀಪ್, ಸೌಮ್ಯ, ಪರ್ವಿನ್, ಲೋಕೇಗೌಡ, ದೀಪಿತಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.