ಅಲಭ್ಯವಾಗಿರುವ ಹೈಟೆಕ್ ಶೌಚಾಲಯ
ಅರಸೀಕೆರೆ: ಪಟ್ಟಣದ ಪುರಸಭೆ ಲಕ್ಷಾಂತ ರು.ಗಳ ವೆಚ್ಚದಲ್ಲಿ ಸಾರ್ವಜನಿಕರ ಸೌಲಭ್ಯಕ್ಕಾಗಿ ನಿರ್ಮಿಸಿರುವ ಸುಲಭ್ ಶೌಚಾಲಯಗಳು ನಿರ್ಮಾಣಗೊಂಡು ವರ್ಷಗಳೇ ಕಳೆದರೂ ಸಾರ್ವಜನಿಕರ ಸೇವೆಗೆ ಸಮರ್ಪಣೆ ಆಗದಿರುವುದು ಪಟ್ಟಣದ ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಪಟ್ಟಣದ ಹೃದಯ ಭಾಗದಲ್ಲಿ ರೇಲ್ವೆ ಜಂಕ್ಷನ್ ಹೊಂದಿದೆ. ನಗರವೂ ದಿನೇ ದಿನೇ ವಿಸ್ತಾರವಾಗಿ ಬೆಳೆಯುತ್ತಿದ್ದು ಜನಸಂಖ್ಯೆಯೂ ದ್ವಿಗುಣಗೊಳ್ಳುತ್ತಿದೆ. ಬೇರೆ ಬೇರೆ ಊರುಗಳಿಂದ ಮತ್ತು ಗ್ರಾಮಾಂತರ ಪ್ರದೇಶಗಳಿಂದ ದಿನನಿತ್ಯ ಬಂದು ಹೋಗುವ ಜನಗಳ ಸಂಖ್ಯೆ ಹೆಚ್ಚಾಗಿದ್ದು, ಇಲ್ಲಿನ ಕೃಷಿ ಮಾರುಕಟ್ಟೆ ಸೇರಿದಂತೆ ಇನ್ನಿತರ ವ್ಯಾಪಾರ, ವಾಣಿಜ್ಯ ಕೇಂದ್ರಗಳ ವಹಿವಾಟು ಕೂಡ ಹೆಚ್ಚಿದೆ.
ನಾನಾ ಸರ್ಕಾರಿ ಕಚೇರಿಗಳ ಕೆಲಸ ಕಾರ್ಯಗಳಿಗೆ ಪಟ್ಟಣಕ್ಕೆ ಬರುವವರ ಜನಸಂಖ್ಯೆಯೂ ಹೆಚ್ಚಿತ್ತಿದೆಯಾದರೂ ಅವರಿಗೆ ಪಟ್ಟಣದಲ್ಲಿ
ದೊರಕಬೇಕಾದ ಮೂಲಭೂತ ಸೌಲಭ್ಯ ಅಷ್ಟಕ್ಕಷ್ಟೇ ಎನ್ನುವುದು ನಾಗರಿಕರ ಅಭಿಪ್ರಾಯ.
್ಡಹಳೆಯ ಅವಶೇಷ: ಸಾರ್ವಜನಿಕರು ತಮ್ಮ ಜಲಬಾಧೆ, ಮಲಬಾಧೆಯನ್ನು ತೀರಿಸಿಕೊಳ್ಳುವ ಸಲುವಾಗಿ ಪಟ್ಟಣದ ಜನನಿಬಿಡ ಪ್ರದೇಶಗಳಲ್ಲಿ ಪುರಸಭೆಯ ಅನುದಾನದಲ್ಲಿ ಶೌಚಾಲಯಗಳನ್ನು ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ನಾಗರಿಕರು ಒತ್ತಡ ಹೇರಿದ್ದರು.
ಇದಕ್ಕೆ ಸ್ಪಂದಿಸಿದ ಸ್ಥಳೀಯ ಜನಪ್ರತಿನಿಧಿಗಳು ಲಕ್ಷಾಂತರ ರು. ವೆಚ್ಚದಲ್ಲಿ ಪಟ್ಟಣದ ಹಳೇ ಪ್ರಾಥಮಿಕಶಾಲೆ ಮುಂಭಾಗ, ಬಾಲಕಿಯರ ಪದವಿ ಪೂರ್ವ ಕಾಲೇಜಿನ ಸಮೀಪ ಹಾಗೂ ಸರ್ಕಾರಿ ಜೆ.ಸಿ ಆಸ್ಪತ್ರೆ ಮುಂಭಾಗದಲ್ಲಿ ಹೈಟೆಕ್ ಸುಲಭ ಶೌಚಾಲಯಗಳನ್ನು ನಿರ್ಮಿಸಿದ್ದರು. ಇದೀಗ, ಈ ಶೌಚಾಲಯಗಳು ನಿರ್ಮಾಣವಾಗಿ ವರ್ಷಗಳೇ ಕಳೆದರೂ ಕಟ್ಟಡಗಳು ತಮ್ಮ ಬಣ್ಣ ಕಳೆದುಕೊಂಡು ಹಳೆಯ ಅವಶೇಷದಂತೆ ಕಾಣಲಾರಂಭಿಸಿದವು.
ಉಪಯೋಗಕ್ಕೆ ಮುಕ್ತ: ಸುಮಾರು ರು. 15 ಲಕ್ಷ ವೆಚ್ಚದಲ್ಲಿ ಗ್ರಂಥಾಲಯ ರಸ್ತೆಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಪಕ್ಕದಲ್ಲಿ, ಬಿ.ಎಚ್.ರಸ್ತೆಯ ಪ್ರವಾಸಿಮಂದಿರದ ಮುಂಭಾಗ ಹಾಗೂ ಸರ್ಕಾರಿ ಜೆ.ಸಿ. ಆಸ್ಪತ್ರೆ ಆವರಣದಲ್ಲಿ ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ಹೈಟೆಕ್ ಸುಲಭ ಶೌಚಾಲಯಗಳನ್ನು ಈಗಾಗಲೇ ನಿರ್ಮಿಸಿರುವ ಪುರಸಭಾ ಆಡಳಿತ ಗ್ರಂಥಾಲಯ ರಸ್ತೆಯಲ್ಲಿನ ಶೌಚಾಲಯವನ್ನು ಸಾರ್ವಜನಿಕರ ಉಪಯೋಗಕ್ಕೆ ಮುಕ್ತಗೊಳಿಸಿದೆ.
ಇನ್ನುಳಿದ ಎರಡು ಶೌಚಾಲಯಗಳ ನಿರ್ಮಾಣಗೊಂಡು ವರ್ಷಗಳೇ ಕಳೆದರೂ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
'ಮುಜುಗರ ಪಡುವಂತಾಗಿದೆ'
ಪುರಸಭೆ ಅವುಗಳನ್ನು ಸಾರ್ವಜನಿಕರಛಉಪಯೋಗಕ್ಕೆ ನೀಡಲು ಮೀನಾಮೇಷ ಎಣಿಸುತ್ತಿರುವುದರಿಂದ ಮೂತ್ರ ವಿಸರ್ಜನೆ ಮಾಡುವವರು ಅನಿವಾರ್ಯವಾಗಿ ರಸ್ತೆ ಬದಿಯನ್ನೇ ಆವಲಂಬಿಸಬೇಕಾಗಿದೆ. ಹೀಗಾಗಿ ಮಹಿಳೆಯರು ಪಟ್ಟಣದ ಕೆಲವು ಭಾಗದ ರಸ್ತೆಗಳಲ್ಲಿ ಓಡಾಡಲು ಮುಜುಗರಪಡುವಂತಾಗಿದೆ.
ಪಿ. ಶಾಂತಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

