ಹಾಸನ

ಉದ್ಭವ ದುರ್ಗಮ್ಮ ಸಿಡಿ

Published On :

ಬೇಲೂರು: ಬೇಲೂರು ತಾಲೂಕು ನಿಡಗೋಡು ಗ್ರಾಮದಲ್ಲಿ ನೆಲೆಸಿರುವ ಶ್ರೀ ಉದ್ಭವ ದುರ್ಗಮ್ಮ ಸಿಡಿ ಉತ್ಸವ ಸಾವಿರಾರು ಭಕ್ತರ ಮುಂದೆ ಶನಿವಾರ ವಿಜೃಂಭಣೆಯಿಂದ ನಡೆಯಿತು.
ಬೇಲೂರಿನ ಶ್ರೀ ಚನ್ನಕೇಶವ ಸ್ವಾಮಿಯ ರಥೋತ್ಸವ ಮುಗಿದ ಮೇಲೆ ಮೊದಲಿಗೆ ಅಕ್ಕ ತಂಗಿಯರಾದ ದುರ್ಗಮ್ಮ ಮತ್ತು ಅಂತರಘಟ್ಟಮ್ಮ ಉತ್ಸವ ಮುಗಿದ ಮೇಲೆ ನಿಡಗೋಡು ಗ್ರಾಮದಲ್ಲಿ ನೆಲೆಸಿರುವ ಗ್ರಾಮದೇವತೆ ಶ್ರೀ ಉದ್ಭವ ದುರ್ಗಮ್ಮನವರ ಕೆಂಡೋತ್ಸವ ಶುಕ್ರವಾರ ನಡೆಯಿತು.  ಸಂಜೆ 6 ಗಂಟೆಯ ಸಮಯದಲ್ಲಿ ಗ್ರಾಮಕ್ಕೆ ಹೊಂದಿಕೊಂಡಂತೆ 13 ಗ್ರಾಮಸ್ಥರು ಸಿಡಿ ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ, ದೇವರ ಹರಕೆ ತೀರಿಸಲು ಹೊಸದಾಗಿ ಮದುವೆಯಾದ ದಂಪತಿಗಳು ತಾಯಿಗೆ ಮಡಿಲು ತುಂಬಿ ಆಶೀರ್ವಾದ ಪಡೆಯುವುದು ವಾಡಿಕೆ. ಪ್ರತಿ ಸಾರಿಯಂತೆ ಈ ಬಾರಿಯೂ ಸಹ ಸಿಡಿ ಉತ್ಸವ ಮುಗಿದು ಕೆಲವೇ ಸಮಯಗಳಲ್ಲಿ ಮಳೆ ಬರುವುದು ಹಿಂದಿನಿಂದಲೂ ವಾಡಿಕೆ ಎಂದು ಗ್ರಾಮಸ್ಥರು ತಿಳಿಸಿದರು. ಈ ಸಿಡಿ ಹೇರಲು ಬರುವ ಗಣ ಮಕ್ಕಳು 13 ಗ್ರಾಮಸ್ಥರಾಗಿರುತ್ತಾರೆ ಎಂದು ಗ್ರಾಮದ ಹಿರಿಯ ಶಾಂತೇಗೌಡರು ತಿಳಿಸಿದರು.  ಇದೇ ಸಂದರ್ಭದಲ್ಲಿ ದೇವಾಲಯದ ಸಮಿತಿಯಿಂದ ಅನ್ನ ಸಂತರ್ಪಣೆ ಮಾಡಲಾಯಿತು.
ದೇವಾಸ್ಥಾನದ ಕಮಿಟಿಯ ಅಧ್ಯಕ್ಷರಾದ ಮಂಜೇಗೌಡ, ಜಯರಾಮ್, ಪುಟ್ಟಸ್ವಾಮಿ, ಸುರೇಶ್, ರಾಜ್ ಕುಮಾರ್ ಸ್ವಾಮೀಜಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಎ ನಾಗರಾಜ್, ಗ್ರಾಮಸ್ಥರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.