ವಿಜೃಂಭಣೆಯ ಗಿರಿಜಾ ಕಲ್ಯಾಣ
ಹೊಳೆನರಸೀಪುರ: ಇಲ್ಲಿನ ಏಕಾಂತ ರಾಮೇಶ್ವರ ದೇವಾಲಯದಲ್ಲಿ ನಾಲ್ಕು ದಿನಗಳ ಕಾಲ ನಡೆದ ಸತ್ಸಂಗ, ಭಜನೆ, ಗಿರಿಜಾ ಕಲ್ಯಾಣೋತ್ಸವ ಹಾಗೂ ಹರಿಕಥಾ ಕಾರ್ಯಕ್ರಮಗಳು ಹೊಸದುರ್ಗದ ವೈರಾಗ್ಯ ಕುಟೀರದ ಶ್ರೀಕಾಂತನಂದ ಸರಸ್ವತಿ ಮಹಾರಾಜ್ ಅವರ ದಿವ್ಯ ಸಾನ್ನಿಧ್ಯದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಈ ಧಾರ್ಮಿಕ ಸಮಾರಂಭದಲ್ಲಿ ಉಚ್ಚಂಗಿಯ ಪ್ರಸನ್ನ ಗುರೂಜಿಯವರು ಹಾಗೂ ಅವಧೂತರಾದ ಮಲ್ಲಪ್ಪನಹಳ್ಳಿ ಪ್ರವೀಣ್ ಗುರೂಜಿಯವರು ಉಪಸ್ಥಿತರಿದ್ದರು. ಕಾಂತಾನಂದ ಸರಸ್ವತಿ ಮಹರಾಜ್ ಅವರು ಭಕ್ತಾದಿಗಳು ಶ್ರದ್ಧಾ ಭಕ್ತಿಯಿಂದ ಈ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡು ಪುನೀತರಾಗಿದ್ದೀರಿ. ನೀವೆಲ್ಲರೂ ಮುಂದೆಯೂ ಇಂತಹ ಸತ್ಸಂಗಳಲ್ಲಿ ಭಾಗಿಗಳಾಗಬೇಕು ಎಂದು ಆಶೀರ್ವಚನ ನೀಡಿದರು.
ಹರಿಕಥೆ: ಮೈಸೂರಿನ ವೇ.ಬ್ರ. ಶ್ರೀ ರಘುನಾಥ ದೀಕ್ಷೀತ್ ಅವರು ಹಾಗೂ ಐಚನಹಳ್ಳಿ ಐ.ಎ. ರಂಗಣ್ಣ ದೀಕ್ಷಿತ್ ಅವರು ವೆಂಕಟೇಶ್ ದೀಕ್ಷಿತ್ ಅವರ ಆಚಾರ್ಯತ್ವದಲ್ಲಿ ಗಿರಿಜಾ ಕಲ್ಯಾಣದ ಪೂಜಾ ವಿಧಿ ವಿಧಾನ ನಡೆಸಿಕೊಟ್ಟರು. ಕವಿತ ಮತ್ತು ವಿಶ್ವನಾಥ್ ಅವರು ಗಿರಿಜಾ ಕಲ್ಯಾಣದಲ್ಲಿ ಭಾಗಿಯಾಗಿದ್ದರು. ರಾತ್ರಿ ಹರಿಕಥಾ ವಿದ್ವಾನ್ ಶಿವಕುಮಾರಾಚಾರ್ ತಂಡದವರಿಂದ ಗಿರಿಜಾ ಕಲ್ಯಾಣ ಹರಿಕಥೆ ನಡೆಸಿಕೊಟ್ಟರು. ಸಮಾರೋಪ ಸಮಾರಂಭದಲ್ಲಿ ದೇವಸ್ಥಾನದ ಭಕ್ತಮಂಡಳಿ ಅಧ್ಯಕ್ಷ ಎಂ.ಎಲ್. ರಾಮಚಂದ್ರಶೆಟ್ಟಿ, ಎಸ್. ಸೋಮಶೇಖರ್, ಎಚ್.ವಿ.ಭಗವಾನ್, ಶ್ಯಾಮಲಾ ಭಗವಾನ್, ಬಿ.ಜಿ. ಮಂಜುನಾಥ ರಾವ್, ಡಾ. ವಿಶ್ವನಾಥ್ ಇದ್ದರು. ಪುರಸಭೆ ಮಾಜಿ ಸದಸ್ಯ ಬಾ.ರಾ. ಸುಬ್ಬರಾಯ ಕಾರ್ಯಕ್ರಮ ನಿರೂಪಿಸಿದರು ಮತ್ತು ವಂದಿಸಿದರು. ಜಿಲ್ಲಾ ಸಹಕಾರಿ ಬ್ಯಾಂಕ್ ಮ್ಯಾನೇಜರ್ ಎನ್.ನಾಗೇಂದ್ರ ಕುಮಾರ್ ಅವರು ಗುರುಗಳ ಮಹಿಮಾ ಪ್ರಸಂಗಗಳು ಮತ್ತು ಗುರು ಮಹಿಮೆ ಕುರಿತು ಉಪನ್ಯಾಸ ನಡೆಸಿಕೊಟ್ಟರು. ಎನ್. ಪಟ್ಟಾಭಿರಾಮ್ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

