ಹಾಸನ

ಅಂಬೇಡ್ಕರ್ ನಿಯಮದಿಂದ ಸಮಾನತೆ

Published On :

ಹೊಳೆನರಸೀಪುರ: ವಿದ್ಯಾರ್ಥಿಗಳು ಸಮಾಜದಲ್ಲಿನ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಡಾ.ಬಿ.ಆರ್. ಅಂಬೇಡ್ಕರ್ ಅವರ ನೀತಿ ನಿಯಮಗಳನ್ನು ಸಮಾಜದಲ್ಲಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಒತ್ತಾಸೆ ನೀಡುವುದರಿಂದ ಅಸಮಾನತೆಯನ್ನು ಹೋಗಲಾಡಿಸಲು ಸಾದ್ಯವಿದೆ ಎಂದು ಪಟ್ಟಣದ ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಕೆ.ಎಲ್. ರಮೇಶ್ ನುಡಿದರು.
ಪಟ್ಟಣದ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ಡಾ. ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ದೇಶದಂತಹ ರಾಷ್ಟ್ರಕ್ಕೆ ಅತ್ಯುನ್ನತವಾದ ಸಂವಿಧಾನವನ್ನು ನೀಡಿದ ಅಂಬೇಡ್ಕರ್ ಅವರು ವಿಶ್ವದ ಅತ್ಯುತ್ತಮ ಸಂವಿಧಾನ ಕರ್ತವ್ಯವಾಗಿ ಖ್ಯಾತಿ ಗಳಿಸಿದ ಏಕೈಕ ಮಹಾನ್ ವ್ಯಕ್ತಿ. ಬಹು ಧರ್ಮೀಯರ ನಾಡಾದ ಭಾರತದಂತಹ ಪ್ರಜಾಪ್ರಭುತ್ವ ದೇಶದಲ್ಲಿನ ಅಸಮಾನತೆ ಹೋಗಲಾಡಿಸಲು ದುಡಿದ ಧೀಮಂತ ಪುರುಷ ಎಂದು ಪ್ರಶಂಶಿಸಿದರು.
ಸ್ಥಾನಮಾನ ದೊರೆಯಿತು: ಸರ್ಕಾರಿ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಕುದರಿಹಾಳ್ ನಿಂಗಪ್ಪ ಮಾತನಾಡಿ, ಅಂಬೇಡ್ಕರ್ ಅವರಲ್ಲಿ ಸಮಾಜದಲ್ಲಿನ ಹಿಂದುಳಿದ ವರ್ಗವನ್ನು ಸಮಾಜಮುಖಿಯಾಗಿ ಕರೆದೊಯ್ಯಲು ಬೇಕಾದ ಸಂವಿಧಾನವನ್ನು ರಚಿಸಿ ನೀಡಿದ್ದರ ಫಲದಿಂದ ಇಂದು ಹಿಂದುಳಿದ ಮತ್ತು ದಲಿತ ವರ್ಗಕ್ಕೆ ಸಮಾಜದ ಎಲ್ಲಾ ಹಂತಗಳಲ್ಲಿಯೂ ಸ್ಥಾನಮಾನ ದೊರೆಯಲು ಕಾರಣವಾಯಿತೆಂದರು.
ಮರೆಯುವ ಹಾಗಿಲ್ಲ: ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಲಲಿತಾಬಾಯಿ ಮಾತನಾಡಿ, ಸಮಾಜದಲ್ಲಿ ತುಳಿತಕ್ಕೊಳಾಗಿದ್ದ ನಿಮ್ನ ವರ್ಗದ ಜನರಿಗೆ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಮೂಲಭೂತ ಹಕ್ಕುಗಳನ್ನು ದೊರಕಿಸಿಕೊಡುವಲ್ಲಿ ಅಂಬೇಡ್ಕರ್ ಅವರ ಸಂವಿಧಾನದಿಂದ ಎಂಬುದನ್ನು ಮರೆಯುವ ಹಾಗಿಲ್ಲ ಎಂದರು.
ಅಂಬೇಡ್ಕರ್ ಅವರ ನೀತಿಯಂತೆ ಸಮಾಜದಲ್ಲಿನ ಎಲ್ಲಾ ವರ್ಗದವರಿಗೆ ಸಮಬಾಳು ಸಮಪಾಲು ಎಂಬ ನೀತಿ ಎಲ್ಲರಿಗೂ ದೊರೆತು ದೀನ ದಲಿತರಿಗೂ ಸಮಾಜದ ಎಲ್ಲ ಹಂತಗಳಲ್ಲಿಯೂ ಮೀಸಲಾತಿ ದೊರೆತು ಸಮಾಜ ಮುಖಿಯಾಗಿ ಇರಲು ಕಾರಣವಾಯಿತೆಂದರು. ಕಾರ್ಯಕ್ರಮದಲ್ಲಿ ಪಲ್ಲವಿ ಪ್ರಾರ್ಥಿಸಿದರು. ಪ್ರವೀಣ್ ಸ್ವಾಗತಿಸಿದರು. ಚೈತ್ರಾ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.