ಬಸ್ ಸಂಚಾರ ಪುನರಾರಂಭಕ್ಕೆ ಆಗ್ರಹ
ರಾಮನಾಥಪುರ: ಕೊಣನೂರು ಗ್ರಾಮದಿಂದ ಮುಂಡ ಗೋಡು ಗ್ರಾಮಕ್ಕೆ ಕಳೆದ 20 ವರ್ಷ ಗಳಿಂದಲೂ ಚಲಿಸುತ್ತಿದ್ದ ಸಾರಿಗೆ ಬಸ್ ಸ್ಥಗಿತಗೊಳಿಸಿರುವುದನ್ನು ವಿರೋಧಿಸಿ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಮುಂಡ ಗೋಡು ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಗುರುವಾರ ರಾಮನಾಥಪುರ ಸಾರಿಗೆ ಬಸ್ ಘಟಕ ವ್ಯವಸ್ಥಾಪಕಿರಗೆ ಇತ್ತೀಚೆಗೆ ಮನವಿ ಸಲ್ಲಿಸಿದರು.
ಮಲ್ಲಿಪಟ್ಟಣದಿಂದ ಕೊಣನೂರಿಗೆ ಈ ಹಿಂದೆ ಪ್ರತಿ ದಿನ ಬೆಳಗ್ಗೆ 8.30ಕ್ಕೆ ಸಾರಿಗೆ ಬಸ್ ಸಂಚರಿಸುತ್ತಿತ್ತು. ಆದರೆ ಕಳೆದ ಒಂದೂವರೆ ತಿಂಗಳಿಂದ ಬಸ್ ಸಂಚಾರ ಸ್ಥಗಿತಗೊಳಿಸ ಲಾಗಿದೆ. ಹೊಳಲಗೋಡು ಗ್ರಾಮದ ಬಳಿ ಬಸ್ ನಿಲುಗಡೆಗೆ ಸಂಬಂಧಿಸಿದಂತೆ ಪ್ರಯಾಣಿಕರು ಹಾಗೂ ಬಸ್ ಚಾಲಕ ಮತ್ತು ನಿರ್ವಾಹಕರ ನಡುವೆ ಸಣ್ಣ ಮಟ್ಟದ ಗಲಾಟೆ ಉಂಟಾದ ಪರಿಣಾಮ ಏಕಾಏಕಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಇದರಿಂದ ಈ ಭಾಗದಲ್ಲಿ ಪ್ರತಿನಿತ್ಯ ಸಂಚರಿಸುವ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ ಎಂದು ಆರೋಪಿಸಿದರು.
ಕೊಣನೂರು ಮತ್ತು ಮಲ್ಲಿಪಟ್ಟಣ ನಡುವೆ ಸಾರಿಗೆ ಬಸ್ ಸೇರಿದಂತೆ ಖಾಸಗಿ ವಾಹನಗಳು ಸಂಚರಿಸುತ್ತಿದ್ದು, ಮುಂಡಗೋಡು ಮಾರ್ಗವಾಗಿ ಯಾವುದೇ ರೀತಿಯ ಸಾರಿಗೆ ಬಸ್ ಅಥವಾ ಖಾಸಗಿ ವಾಹನಗಳ ಸಂಚಾರ ವಿರುವುದಿಲ್ಲ. ಕೂಡಲೇ ಈಗಾಗಲೇ ಸ್ಥಗಿತಗೊಂಡಿರುವ ಬಸ್ ಸಂಚಾರವನ್ನು ಕೂಡಲೇ ಆರಂಭಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ರಮೇಶ್, ಸೋಮಶೇಖರ್, ವಿದ್ಯಾರ್ಥಿಗಳಾದ ನವೀನ್, ಸುನೀಲ್ ಹಾಗೂ ಇತರರು ಇದ್ದರು.
ಅಧಿಕಾರಿಯ ಉದ್ಧಟತನ
ಮುಂಡಗೋಡು ಗ್ರಾಮದ ಕೆಲವು ಮಂದಿ ಹಾಗೂ ವಿದ್ಯಾರ್ಥಿಗಳು ಬಸ್ ಸಂಚಾರವನ್ನು ಆರಂಭಿಸುವ ಕುರಿತು ಘಟಕ ವ್ಯವಸ್ಥಾಪಕರ ಬಳಿ ತಮ್ಮ ಸಮಸ್ಯೆ ಹೇಳಿಕೊಳ್ಳುವ ಕುರಿತು ಗುರುವಾರ ಮಧ್ಯಾಹ್ನ ರಾಮನಾಥ ಪುರ ಬಸ್ ಘಟಕದ ಬಳಿ ಹೋದಾಗ ಪ್ರತಿಭಟನಾ ನಿರತರನ್ನು ಒಳ ಬಿಡದಂತೆ ಘಟಕ ವ್ಯವಸ್ಥಾಪಕರು ಸಿಬ್ಬಂದಿಗೆ ಸೂಚಿಸಿದ ಪರಿಣಾಮ ನಾವು ಅವರ ಬಳಿ ಏನನ್ನೂ ಹೇಳಿಕೊಳ್ಳಲು ಸಾಧ್ಯವಾಗಲಿಲ್ಲ. ಇದನ್ನು ಮನಗಂಡ ರಕ್ಷಣಾ ವೇದಿಕೆ ಯುವ ಘಟಕದ ಅಧ್ಯಕ್ಷ ಸೋಮಶೇಖರ್ ಒಬ್ಬರನ್ನೇ ಮಾತ್ರ ಒಳಬರುವಂತೆ ಆಹ್ವಾನಿಸಿ ಮನವಿ ಸ್ವೀಕರಿಸಿದ್ದಾರೆ ಎಂದು ಆರೋಪಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಘಟಕ ವ್ಯವಸ್ಥಾಪಕ ರಘು, ಯಾವುದೇ ಬಸ್ ಸಂಚಾರವನ್ನು ಉದ್ದೇಶ ಪೂರ್ವಕವಾಗಿ ಸ್ಥಗಿತಗೊಳಿಸುವುದು ಸಂಸ್ಥೆಯ ನಿಯಮವಿಲ್ಲ. ಪ್ರಯಾಣಿಕರು ನಮ್ಮ ಸಿಬ್ಬಂದಿ ಮೇಲೆ ಕೈಮಾಡಿದರು ಎಂಬ ಆರೋಪದಿಂದ ಕೆಲವು ದಿನಗಳ ತನಕ ಬಸ್ ಸಂಚಾರ ತಡೆ ಹಿಡಿಯಲಾಗಿತ್ತು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

