ಹಾಸನ

ಸರಾಗ ಸಂಚಾರಕ್ಕಿಲ್ಲಿ ಸಂಚಕಾರ

Published On :

ಕ.ಪ್ರ.ವಾರ್ತೆ  ಬೇಲೂರು  ಏ. 29
ಕೋಗೋಡು- ಅರೇಹಳ್ಳಿ ಸಂಪರ್ಕ ರಸ್ತೆಯ ಬೊಮ್ಮೇನಹಳ್ಳಿ 2 ಕಿ. ಮೀ ಮಾರ್ಗದ ರಸ್ತೆಯಲ್ಲಿ ಚಲಿಸಲು ವಾಹನ ಚಾಲಕರು ಹರಸಾಹಸ ಪಡಬೇಕಾಗಿದ್ದು ಇದಕ್ಕೆ ಕಳಪೆ ಕಾಮಗಾರಿಯೇ ಕಾರಣವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಮರು ಡಾಂಬರೀಕರಣ ಮಾಡುವಂತೆ ಒತ್ತಾಯಿಸಿದ್ದಾರೆ.
ಕೋಗೋಡು ಅರೇಹಳ್ಳಿ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬೊಮ್ಮೇನಹಳ್ಳಿ ಸಮೀಪ 2 ಕಿ.ಮೀ ರಸ್ತೆ ಪೂರ್ಣ ಗುಂಡಿಬಿದ್ದು ವಾಹನ ಚಲಿಸುವುದು ಇರಲಿ, ನಡೆದಾಡಲೂ ಕಷ್ಟವಾಗಿತ್ತು. ಗ್ರಾಮಸ್ಥರು ಮನವಿ ಹಾಗೂ ಪ್ರತಿಭಟನೆ ನಡೆಸಿ ರಸ್ತೆಗೆ ಡಾಂಬರು ಹಾಕುವಂತೆ ಶಾಸಕರನ್ನು ಹಾಗೂ ಅಧಿಕಾರಿಗಳನ್ನು ಒತ್ತಾಯಿಸಿದ್ದರು.
ಕಳಪೆ ಕಾಮಗಾರಿ: ಗ್ರಾಮಸ್ಥರ ಬೇಡಿಕೆ ಮೇರೆಗೆ ಇತ್ತೀಚೆಗೆ ಮರುಡಾಂಬರೀಕರಣ ಮಾಡಲಾಗಿತ್ತು. 1 ಕೋಟಿ ರು. ವೆಚ್ಚದಲ್ಲಿ ರಸ್ತೆದೆ ಡಾಂಬರೀಕರಣ ಮಾಡಿರುವುದಾಗಿ ಶಾಸಕರು ಹಾಗೂ ಗುತ್ತಿಗೆದಾರರು ಗ್ರಾಮಸ್ಥರಿಗೆ ತಿಳಿಸಿದ್ದರು. ಆದರೆ, ಡಾಂಬರು ಹಾಕಿ 2 ತಿಂಗಳು ಕಳೆಯುವುದರೊಳಗೆ ಡಾಂಬರು ಕಿತ್ತು ಬರುತ್ತಿದ್ದು, ಇದಕ್ಕೆ ಕಳಪೆ ಕಾಮಗಾರಿಯೇ ಕಾರಣ ಎಂಬುದು ಗ್ರಾಮಸ್ಥರ ದೂರಾಗಿದೆ.
ಎರಡೂ ಬದಿ ಚರಂಡಿ: ಕಳಪೆ ಡಾಂಬರೀಕರಣದ ಜೊತೆಗೆ ಚರಂಡಿ ನಿರ್ಮಾಣ ಮಾಡುವಾಗ ಅವೈಜ್ಞಾನಿಕ ಮಾನದಂಡ ಉಪಯೋಗಿಸಿ, ಆಳವಾಗಿ ಗುಂಡಿ ತೆಗೆದಿದ್ದು ಇದರಿಂದ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬೀಳುತ್ತಿದೆ. ಅಲ್ಲದೇ, ರಸ್ತೆಗೆ ಡಾಂಬರೀಕರಣ ಮಾಡುವ ಸಂದರ್ಭದಲ್ಲಿ ಗುತ್ತಿಗೆದಾರರು ಕಳಪೆ ಗುಣಮಟ್ಟದ ಡಾಂಬರನ್ನು ಹಾಕಲಾಗಿದ್ದು ಈಗಾಗಲೇ ಕಿತ್ತುಬರುತ್ತಿದೆ. ಇದರ ಜೊತೆಗೆ ಡಾಂಬಕರೀಣ ಸಂದರ್ಭದಲ್ಲಿ ರಸ್ತೆಯ ಎರಡೂ ಬದಿಯಲ್ಲಿ ಆಳವಾಗಿ ಚರಂಡಿ ತೋಡಲಾಗಿದೆ.
ಆದರೆ ಸರಿಯಾಗಿ ಚರಂಡಿ ಕೆಲವನ್ನು ಮಾಡದಿರುವ ಹಿನ್ನೆಲೆಯಲ್ಲಿ ಬೇರೆ ವಾಹನಕ್ಕೆ ಜಾಗ ಕೊಡಲು ಹೋಗಿ ಚರಂಡಿಯೊಳಗೆ  ವಾಹನದ ಚಕ್ರ ಹೂತು ಚಾಲಕರು ಮತ್ತೆ  ಹೊರ ತೆಗೆಯಲು ಹರಸಾಹಸ ಪಡಬೇಕಾಗಿದೆ. ಕೆಲವೊಮ್ಮೆ ರಾತ್ರಿವೇಳೆ ವಾಹನದ ಚಕ್ರ ಹೂತು ಹೊರತೆಗೆಯಲು ಬೇರೆ ದಾರಿ ಕಾಣದೇ ಬೆಳಗಿನವರೆಗೂ ಕಾದು ನಂತರ ಹೊರ ತೆಗೆಯಲಾಗಿದೆ.
ಎಚ್ಚರಿಕೆ: ಮಳೆಗಾಲ ಆರಂಭದಲ್ಲೇ ರಸ್ತೆಯ ಡಾಂಬರು ಕಿತ್ತುಬರುತ್ತಿದ್ದು ಪೂರ್ಣ ಮಳೆಗಾಲದಲ್ಲಿ ಡಾಂಬರು ಕೊಚ್ಚಿ ಹೋಗುತ್ತದೆ. ಕೂಡಲೇ ಮುರು ಡಾಂಬರೀಕರಣ ಹಾಗೂ ಗುಣಮಟ್ಟದ ಕಾಮಗಾರಿ ಮಾಡಬೇಕು ಇಲ್ಲದಿದ್ದರೆ ಲೋಕೋಪಯೋಗಿ ಇಲಾಖೆ ಹಾಗೂ ಶಾಸಕರ ಮನೆಯ ಮುಂದೆ ಧರಣಿ ಕೂರುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಗ್ರಾಮಸ್ಥರಾದ ಸಂತೋಷ್, ಶಿವಪ್ಪಗೌಡ, ಭೂಮಿಕ, ಪ್ರಕಾಶ್, ಸಣ್ಣಯ್ಯ, ಆಶಾ, ಗಂಗಂಧರ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.