ಕಸ ತೆಗೀದಿದ್ರೆ ಬೀಗ ಹಾಕ್ತೀವಿ
ಕ.ಪ್ರ. ವಾರ್ತೆ ಟಿ ಹಾಸನ ಟಿ ಏ. 29
ನಗರದ ಕಸವನ್ನು ಮೇ. 10ರೊಳಗೆ ಬೇರೆಡೆಗೆ ವಿಲೇವಾರಿ ಮಾಡದಿದ್ದರೆ ನಗರಸಭೆ ಕಚೇರಿಗೆ ಬೀಗ ಜಡಿದು ಪಕ್ಷಾತೀತವಾಗಿ ಪ್ರತಿಭಟನೆ ಮಾಡುವುದಾಗಿ ಹಾಸನ ನಗರ ನಾಗರೀಕ ಹಿತಕ್ಷಣಾ ವೇದಿಕೆ ಸಂಚಾಲಕ ಅಗಿಲೆ ಯೋಗೀಶ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸ ವಿಲೇವಾರಿಯ ಬಗ್ಗೆ ನಗರಸಭೆಗೆ ತಿಳಿದಿದ್ದರೂ ಸಹ ಸ್ವಂತ ಇಚ್ಛಾಶಕ್ತಿಯಿಂದ ಸಭೆ ಒಳಗೆ ಕಿತ್ತಾಟ ಮಾಡಿಕೊಂಡು ಕಾಲಹರಣ ಮಾಡುತ್ತಿದ್ದಾರೆ ಎಂದು ದೂರಿದರು.
ನಗರಸಭೆಯಿಂದ ಅಗಿಲೆ ಬೋರೆಯ ಮೇಲೆ 22 ಎಕರೆ ಭೂಮಿಯನ್ನು ಕಸ ವಿಲೇವಾರಿ ಮತ್ತು ಕಸ ವಿಂಗಡಣೆಗೆ ಖರೀದಿಸಲಾಗಿದೆ. ಈ ಸ್ಥಳಕ್ಕೆ ಕಸ ವಿಲೇವಾರಿ ಮಾಡದೇ, ಲಕ್ಷಾಂತರ ರು. ಖರ್ಚು ಮಾಡಿ ವ್ಯರ್ಥ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತ್ಯಾಜ್ಯ ವಿಲೇವಾರಿ ಸ್ಥಳಾಂತರಿಸಿ: ಜಿಲ್ಲಾ ಬಂದೀಖಾನೆ ಹಿಂಭಾಗ ನಗರದ ತ್ಯಾಜ್ಯ ಸುರಿಯುತ್ತಿರುವುದರಿಂದ ಶ್ರೀನಗರ ಬಡಾವಣೆಯ ಜನತೆ ವಾಸಿಸಲು ಕಷ್ಟಕರವಾಗಿದೆ. ನಾನಾ ರೋಗಗಳಿಂದ ನರಳುತ್ತಿದ್ದಾರೆ. ಗೊರೂರು ರಸ್ತೆ ಬಳಿ ಇರುವ ಅಂಗಡಿ ಮಾಲೀಕರು, ವ್ಯಾಪಾರಸ್ತರು ಮತ್ತು ಸುತ್ತಮುತ್ತಲ ಜನತೆ ಓಡಾಡಲು ಆಗದೇ ಕಸದ ಕೆಟ್ಟ ವಾಸನೆಯಿಂದ ಮೂಗು ಮುಚ್ಚಿಕೊಂಡು ಸಂಚರಿಸಬೇಕಾಗಿದೆ ಎಂದು ದೂರಿದರು.
ಬರೀ ಕಿತ್ತಾಟ: ಇಂತಹ ಸಮಸ್ಯೆಯನ್ನು ನಗರಸಭೆ ಸರಿಪಡಿಸದೆ ಸದಸ್ಯರು ಕೇವಲ ಕಿತ್ತಾಟ ನಡೆಸುವ ಮೂಲಕ ಕಾಲ ಕಳೆಯುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಮೇ 10ರೊಳಗೆ ಈ ಸಮಸ್ಯೆಯನ್ನು ಬಗೆ ಹರಿಸದಿದ್ದರೆ ನಾಗರೀಕ ವೇದಿಕೆಯಿಂದ ತೀವ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ನಗರಸಭೆ ಮಾಜಿ ಸದಸ್ಯೆ ಆಶಾ, ಸುರೇಶ್, ಕೃಷ್ಣಮೂರ್ತಿ ಹಾಗೂ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

