ಪ್ರಾಣಿ ದಯೆಯಿಂದ ಬಲಿಷ್ಠ ಸಮಾಜ
ಕ.ಪ್ರ. ವಾರ್ತೆ | ಹಾಸನ | ಏ. 30
ಪ್ರಾಣಿಗಳು ದೇಶದ ಅಮೂಲ್ಯ ಸಂಪತ್ತು. ಅವುಗಳ ರಕ್ಷಣೆ ಮತ್ತು ಅವುಗಳ ಮೇಲೆ ನಾವು ತೋರುವ ದಯೆಯ ಆಧಾರದ ಮೇಲೆ ಬಲಿಷ್ಠ ಸಮಾಜ ನಿರ್ಮಿಸಲು ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ಡಾ. ಎಚ್. ಎನ್. ಗೋಪಾಲಕೃಷ್ಣ ತಿಳಿಸಿದರು.
ಇತ್ತೀಚೆಗೆ ಪಶುವೈದ್ಯಕೀಯ ಮಹಾವಿದ್ಯಾಲಯ, ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ, ಹಾಸನ ಹಾಲು ಒಕ್ಕೂಟ ಮತ್ತು ಪಶುವೈದ್ಯಕೀಯ ಸಂಘದ ಆಶ್ರಯದಲ್ಲಿ ನಡೆದ 14ನೇ ವಿಶ್ವ ಪಶುವೈದ್ಯ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಾಸನ ಲೋಕಾಯುಕ್ತ ಎಸ್ಪಿ ಡಾ. ಸಿ.ಬಿ. ವೇದಮೂರ್ತಿ ಮಾತನಾಡಿ, ಸಮಾಜದಲ್ಲಿ ಪಶುವೈದ್ಯರ ಪಾತ್ರ ಅಮೂಲ್ಯವಾದ್ದು. ಇತ್ತೀಚಿನ ದಿನಗಳಲ್ಲಿ ಅವರು ಆಡಳಿತ ಕ್ಷೇತ್ರವನ್ನು ಒಳಗೊಂಡು ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮ ಕೊಡುಗೆಯನ್ನು ನೀಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಪಿ.ಶ್ರೀನಿವಾಸ್ ಮಾತನಾಡಿ, ಪ್ರಾಣಿ ಮತ್ತು ಮನುಷ್ಯನ ಸಂಬಂಧಗಳನ್ನು ಮತ್ತಷ್ಟು ಗಟ್ಟಿ ಮಾಡುವ ವಿಶಿಷ್ಟ ಕಾರ್ಯ ಪಶು ವೈದ್ಯನದ್ದಾಗಿದೆ ಎಂದರು.
ನಂತರ ಡಾ. ಸುಧೀಶ್ ನಾಯರ್ ಪ್ರಾಣಿ ದಯೆ ಕುರಿತು ವಿಚಾರ ಮಂಡಿಸಿದರು. ಡಾ. ಬಸವರಾಜಜ್ಬೆಣ್ಣೆ, ಪಶುವೈದ್ಯ ವೃತ್ತಿಯಲ್ಲಿ ಎದುರಾಗುವ ಹಾಸ್ಯ ಪ್ರಸಂಗಳ ಬಗ್ಗೆ ಮಾತನಾಡಿದರು.
ಹಾಸನ ಜಿಲ್ಲೆಯ ಸುಮಾರು 120 ಪಶುವೈದ್ಯರು ಮತ್ತು ಪಶುವೈದ್ಯಕೀಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದಕ್ಕೂ ಮುನ್ನ ರೇಬಿಸ್ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 40 ಮಿಗಿಲಾಗಿ ಶ್ವಾನ ಮಾಲೀಕರು ಇದರ ಪ್ರಯೋಜನ ಪಡೆದರು.
ವಿದ್ಯಾರಾಣಿ ಪ್ರಾರ್ಥಿಸಿದರು. ಡಾ.ಎಂ. ನಾರಾಯಣ ಭಟ್ ಸ್ವಾಗತಿಸಿದರು. ಡಾ. ಜಯರಾಮ್ ವಂದಿಸಿದರು. ಡಾ. ಸುಶಾಂತ್ ಮತ್ತು ಡಾ. ಮಮತ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

