ಸಕಾರಾತ್ಮಕ ಭಾವನೆಗಳಿಂದ ಪ್ರಗತಿ
ಜಾವಗಲ್: ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಲ್ಲೂ ಸಕಾರಾತ್ಮಕ ಭಾವನೆಗಳಿದ್ದಲ್ಲಿ ಪ್ರಗತಿ ಸಾಧ್ಯ ಎಂದು ಬೆಂಗಳೂರಿನ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅಭಿಪ್ರಾಯಪಟ್ಟರು.
ಜಾವಗಲ್ನಲ್ಲಿ ಜ್ಞಾನ ಸ್ಪಂದನ ಫೌಂಡೇಶನ್ ಸೇವಾ ಸಂಸ್ಥೆಯನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದ ಜತೆಗೆ ವಿನಯ, ನಾಗರೀಕತೆ, ಸಂಸ್ಕಾರ ಬೆಳೆಸಿಕೊಳ್ಳಬೇಕು. ದೇಶದ ಜನಸಂಖ್ಯೆ 120 ಕೋಟಿ ಇದ್ದರೂ ಮನುಷ್ಯರ ಸಂಖ್ಯೆ ಕೇವಲ 40 ಕೋಟಿ ಮಾತ್ರ. ಜನರಿಗೂ- ಮನುಷ್ಯರಿಗೂ ವ್ಯತ್ಯಾಸವಿದೆ ಎಂದರು.
ಹಿಂದೆ ಸೌಹಾರ್ಧತೆಯಿತ್ತು: ಇತ್ತೀಚೆಗೆ ವಿದ್ಯಾವಂತರ ಸಂಖ್ಯೆ ಹೆಚ್ಚಾಗುತ್ತಿದ್ದು, ಜ್ಞಾನಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಹಿಂದಿನ ಕಾಲದ ಜನರಲ್ಲಿ ಸಾಮಾನ್ಯ ಜ್ಞಾನ ಅಧಿಕವಾಗಿತ್ತು. ಆದರೆ ಇಂದು ಅದು ಮಾಯವಾಗುತ್ತಿದೆ. ಈ ಜ್ಞಾನವು ಗ್ರಾಮದ ಒಳಿತು, ಸೌಹಾರ್ಧತೆಯ ಸಂಕೇತವಾಗಿದ್ದು, ಹಿಂದೆ ಪ್ರತಿಯೊಂದು ಮನೆಯೇ ಸಮುದಾಯ ಭವನವಾಗಿತ್ತು ಎಂದರು.
ನೀರು ಚಿನ್ನವಾಗಲಿದೆ: ಶಿಕ್ಷಣದ ಜತೆಗೆ ಉತ್ತಮ ನಾಗರಿಕತೆ ಬೆಳೆಸುವುದು ಮುಖ್ಯ. ನಕಾರಾತ್ಮಕ ಭಾವನೆಯು ಭಯೋತ್ಪಾದನೆಗಿಂತಲೂ ಹೆಚ್ಚು ಮಾರಕ. ಸೈನಿಕ ಮತ್ತು ಶಿಕ್ಷಕರಿಬ್ಬರೂ ದೇಶದ ನೈಜವಾದ ಆಧಾರ ಸ್ತಂಭಗಳಾಗಿದ್ದು, ಆಧುನಿಕ ತಾಂತ್ರಿಕತೆ ಹೆಚ್ಚಾದಂತೆ ಹೊಸ ಹೊಸ ಕಾಯಿಲೆಗಳು ಹೆಚ್ಚಾಗುತ್ತಿವೆ. ಮನುಷ್ಯನ ಆರೋಗ್ಯವು ಭೂಮಿಯ ಆರೋಗ್ಯ ವನ್ನು ಅವಲಂಬಿಸಿದ್ದು, ನೀರು ಮುಂದಿನ ದಿನಗಳಲ್ಲಿ ಬಿಳಿಯ ಚಿನ್ನವಾಗಲಿದೆ ಎಂದು ಹೇಳಿದರು.
ಉಚಿತ ಶಿಬಿರ: ಗ್ರಾಮೀಣ ಜನರು ಹೃದಯದ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬೇಕು ಎಂದ ಅವರು, ಮುಂದಿನ ದಿನಗಳಲ್ಲಿ ಜಾವಗಲ್ನಲ್ಲಿ ಉಚಿತ ಹೃದ್ರೋಗ ತಪಾಸಣಾ ಶಿಬಿರ ಆಯೋಜಿಸಲಾಗುವುದು ಎಂದರು.
ಹೃದ್ರೋಗ ನಿಯಂತ್ರಣ:ಸಕ್ಕರೆ ಕಾಯಿಲೆ ನಿಯಂತ್ರಣ, ಬಿ.ಪಿ. ನಿಯಂತ್ರಣ, ತೂಕ ಮತ್ತು ಸುತ್ತ ಳತೆ ಕಡಿಮೆ ಮಾಡುವುದು, ಕೊಲೆಸ್ಟ್ರಾಲ್ ಕಡಿಮೆ ಮಾಡುವುದು, ಅತಿ ಆಸೆ ಕಡಿಮೆ ಮಾಡುವುದು... ಈ ಪಂಚಸೂತ್ರಗಳನ್ನು ಅಳವಡಿಸಿಕೊಂಡು ಹೃದ್ರೋಗ ನಿಯಂತ್ರಿಸಬಹುದು ಡಾ. ಮಂಜುನಾಥ್ ತಿಳಿಸಿದರು.
ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಡಿ.ಎಂ. ಜಲೇಂದ್ರ, ತಾಲೂಕು ಪಂಚಾಯ್ತಿ ಸದಸ್ಯೆ ಲಕ್ಷ್ಮೀ ರವಿಶಂಕರ್, ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಜೆ.ಎಸ್. ನರಸಿಂಹಸ್ವಾಮಿ, ಪ್ರಸನ್ನಕುಮಾರ್, ಸಂಸ್ಥೆಯ ಕಾರ್ಯದರ್ಶಿ ದಯಾನಂದ್ ಮಾತನಾಡಿದರು.
ಕೋಳಗುಂದ ಕೇದಿಗೆ ಮಠದ ಶ್ರೀ ಜಯಚಂದ್ರಶೇಖರ ಸ್ವಾಮೀಜಿ ಆಶೀರ್ವಚನ ನೀಡಿ, ಮಕ್ಕಳಲ್ಲಿ ಧಾರ್ಮಿಕ ಮತ್ತು ರಾಷ್ಟ್ರ ಪ್ರಜ್ಞೆ, ಆಧ್ಯಾತ್ಮಿಕ ಚಿಂತನೆ ಬೆಳೆಸಬೇಕು ಎಂದರು.
ಸಂಸ್ಥೆಯ ಅಧ್ಯಕ್ಷ ಸತ್ಯನಾರಾಯಣ ಮಾತನಾಡಿ, ಸ್ಮಶಾನ ಅಭಿವೃದ್ಧಿ ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯಗಳನ್ನು ನಡೆಸಲಾಗುವುದು ಎಂದರು.
ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳನ್ನು ನೀಡಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕವಿತಾ ಮಂಜುನಾಥ್, ವರ್ತಕ ಜೆ.ಎನ್. ಗಂಗಾಧರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

