ಹಾಸನ

ಹಾರಿ ಹೋಯ್ತು ಮನೆಯ ಮಾಳಿಗೆ!

Published On :

ಅರಸೀಕೆರೆ: ಇತ್ತೀಚೆಗೆ ಗುಡುಗು, ಮಿಂಚು, ಸಿಡಿಲು ಆರ್ಭಟದೊಂದಿಗೆ ಬೀಸಿದ ಬಿರುಗಾಳಿ ಸಹಿತ ಸುರಿದ ಮಳೆಗೆ ತಾಲೂಕಿನ ಕಣಕಟ್ಟೆ ಹೋಬಳಿ ಸುತ್ತಮುತ್ತ ವಿದ್ಯುತ್ ಕಂಬಗಳು, ಮನೆಗಳ ಮೇಲ್ಛಾವಣಿ ಜಖಂಗೊಂಡರೆ, ಮನೆಯ ಹೆಂಚುಗಳು ಹಾಗೂ ಶೀಟ್‌ಗಳು ಹಾರಿಹೋಗಿದ್ದು, ಫಲಭರಿತ ಬಾಳೆಯ ತೋಟ ನಾಶಗೊಂಡು ಲಕ್ಷಾಂತರ ರೂಗಳ ನಷ್ಟ ಸಂಭವಿಸಿದೆ.
ಅರಸೀಕೆರೆ ತಾಲೂಕಿನ ಕಣಕಟ್ಟೆ ಹೋಬಳಿಯ ಮಾಡಾಳು, ಮೇಟಿಕುರ್ಕೆ, ದಿಬ್ಬೂರು, ಜೆ.ಸಿ.ಪುರ, ನರಸೀಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಸಂಜೆ ಆರಂಭವಾದ ಮಳೆ ಗಾಳಿ ತನ್ನ ರುದ್ರನರ್ತನ ಪ್ರದರ್ಶಿಸಿದೆ. ಇದರಿಂದಾಗಿ ಮಾಡಾಳು ಗ್ರಾಮದ ದಲಿತ ಕಾಲೋನಿಯ ಶಿವಣ್ಣ, ಮೂಡ್ಲಪ್ಪ, ಜಯಪ್ಪ ಅವರ ಮನೆಯ ಶೀಟ್‌ಗಳನ್ನು ಹಾಗೂ ನಾಗರಾಜ್ ಮತ್ತು ಎಂ.ಜಿ. ಮಲ್ಲಿಕಾರ್ಜುನ್ ಅವರ ಅಂಗಡಿಯ ಶೀಟ್‌ಗಳನ್ನು ಹಾರಿಹೋಗಿದ್ದು ಅಪಾರ ನಷ್ಟ ಉಂಟಾಗಿದೆ.
ಮಾಡಾಳು ಗೊಲ್ಲರಹಟ್ಟಿ ಬಳಿಯಿರುವ ಕೇರಳದ ಉದ್ಯಮಿಯೊಬ್ಬರ ತೆಂಗಿನ ನಾರಿನ ಘಟಕದ ಸಂಪೂರ್ಣ ಮೇಲ್ಛಾವಣಿಯನ್ನು ಕಿತ್ತೆಸೆದಿದೆ. ಅಲ್ಲದೇ, ಪಕ್ಕದಲ್ಲಿಯೇ ವಿದ್ಯುತ್ ಪರಿವರ್ತಕ ಇದ್ದ ವಿದ್ಯುತ್ ಕಂಬಗಳು ಅರ್ಧಕ್ಕೆ ತುಂಡಾಗಿ ಬಿದ್ದಿವೆ. ಅಲ್ಲದೆ ಬೇವಿನ ಹಾಗೂ ಮಾವಿನ ಮರಗಳ ಕೊಂಬೆಗಳು ಗಾಳಿಯ ರುದ್ರ ನರ್ತನಕ್ಕೆ ಸಿಲುಕಿ ತುಂಡಾಗಿ ಬಿದ್ದಿವೆ.
ರಂಗನಾಥ್ ಎಂಬುವರ ಎರೆಹುಳು ಗೊಬ್ಬರದ ಶೆಡ್‌ನ ನೂರಾರು ಹೆಂಚುಗಳು ಕೆಲಗೆ ಬಿದ್ದು ಪುಡಿ ಪುಡಿಯಾಗಿವೆ. ತಿಮ್ಮಯ್ಯ ಎಂಬುವರಿಗೆ ಸೇರಿದ ಫಲಭರಿತ ಬಾಳೆ ತೋಟ ನೆಲಕ್ಕೊರಗಿ ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.