ಹಾಸನ

ಸಕಲೇಶಪುರ ತಾಲೂಕಲ್ಲಿ ಅತಿವೃಷ್ಟಿ: ರು. 9 ಕೋಟಿ ಹಾನಿ- ಜಿಲ್ಲಾಧಿಕಾರಿ

Published On :

ಸಕಲೇಶಪುರ: ಅತಿವೃಷ್ಟಿಯಿಂದಾಗಿ ತಾಲೂಕಿನಲ್ಲಿ 9 ಕೋಟಿ ಹಾನಿ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ಹೇಳಿದ್ದಾರೆ.
ಶುಕ್ರವಾರ ಪಟ್ಟಣದ ಉಪವಿಭಾಗಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 90 ಕಿ.ಮಿ ಜಿ.ಪಂ ಹಾಗೂ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಗಳು ದುಸ್ಥಿತಿಗೆ ಈಡಾಗಿದ್ದರೆ, ಯಸಳೂರು ಹೋಬಳಿಯ ಚಂಗಡಹಳ್ಳಿ,ಉಚ್ಚಂಗಿ,ಮಣಜೂರು  ಸಮೀಪ ಭೂಕುಸಿತವಾಗುವ ಮುನ್ಸೋಚನೆ ಇದ್ದು ಭೂಕುಸಿತ ಸಂಭವಿಸಲಿರುವ  ಮಠದಕೆರೆ ನೀಲಯ್ಯನವರ ಮನೆಯನ್ನು ಮಳೆಗಾಲ ಮುಗಿಯುವ ವರೆಗೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು ಬೆಳೆಹಾನಿಯ ವರದಿ ನಮ್ಮ ಕೈಸೇರಿಲ್ಲ ಎಂದರು.
ಪರಿಹಾರ: ಪಟ್ಟಣದಲ್ಲಿ 9 ಮನೆಗಳು ಭೂಕುಸಿತದಿಂದ ಹಾನಿಗೀಡಾಗಿದ್ದು ಇದರಲ್ಲಿ 5 ಮನೆಗಳಿಗೆ ಪರಿಹಾರ ನೀಡಲಾಗಿದೆ. ಉಳಿದ ಮನೆಗಳಿಗೆ ಇನ್ನೇರಡು ದಿನಗಳಲ್ಲಿ ಪರಿಹಾರ ನೀಡಲಾಗುವುದು ಎಂದರು. ಅತಿಯಾದ ಮಳೆಯಿಂದ ತಾಲೂಕಿನಲ್ಲಿ 14 ಜಾನುವಾರುಗಳು. 6 ಕುರಿಗಳು ಸಾವಿಗಿಡಾಗಿವೆ ಎಂದರು.
ಶಾಲೆ, ಕಾಲೇಜುಗಳಿಗೆ ರಜೆ: ಅಧಿಕ ಮಳೆಯಿಂದಾಗಿ ಶನಿವಾರ  ಮತ್ತೆ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.