ಹಾಸನ

ಸಹಕಾರ ಸಂಘ ಬೆಳೆಯಲು ಪ್ರಾಮಾಣಿಕ ಸೇವೆ ಸಲ್ಲಿಸಿ

Published On :

ಆಡಳಿತವರ್ಗ ಮತ್ತು ಸಿಬ್ಬಂದಿಗೆ ಆರ್.ಟಿ.ದ್ಯಾವೇಗೌಡ ಮನವಿ    ಸೌಲಭ್ಯಗಳು ರೈತರಿಗೆ ನೇರವಾಗಿ ದೊರೆಯಲಿ


ಕನ್ನಡಪ್ರಭ ವಾರ್ತೆ    ಹಾಸನ    ಆ.1
ಸಹಕಾರ ಸಂಘಗಳು ಉತ್ತಮ ಮಟ್ಟದಲ್ಲಿ  ಬೆಳೆಯಬೇಕಾದರೆ ಆ ಸಂಘಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಯದರ್ಶಿಗಳು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಆರ್.ಟಿ.ದ್ಯಾವೇಗೌಡ ಕರೆ ನೀಡಿದರು.
 ಜಿಲ್ಲಾ ಸಹಕಾರ ಒಕ್ಕೂಟ ಸಹಕಾರ ಭವನದಲ್ಲಿ  ಹಾಸನ ಜಿಲ್ಲಾ ಸಹಕಾರ ಒಕ್ಕೂಟ, ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಸಹಕಾರ ಇಲಾಖೆಯ ಆಶ್ರಯದಲ್ಲಿ  ಸಕಲೇಶಪುರ, ಆಲೂರು, ಬೇಲೂರು ಮತ್ತು ಅರಕಲಗೂಡು ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಇಫ್ಕೋ ರಸಗೊಬ್ಬರಗಳ ಮಾರಾಟ ಕುರಿತಂತೆ ಏರ್ಪಡಿಸಿದ್ದ  ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ರೈತರಿಗೆ ನೆರವಾಗಿ ತಲುಪಿಸಿ: ಸಹಕಾರ ಸಂಘಗಳ ಅಭಿವೃದ್ಧಿಗೆ ಆಡಳಿತ ಮಂಡಳಿಯವರು ಮತ್ತು  ಸಿಬ್ಬಂದಿ ವರ್ಗದವರ  ಪಾತ್ರ ಅತೀ ಮುಖ್ಯ  ಸಿಬ್ಬಂದಿಗಳು  ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು. ಇಫ್ಕೋ ಸಂಸ್ಥೆಯಿಂದ  ದೊರೆಯುವ  ರಸಗೊಬ್ಬರಗಳ ಸೌಲಭ್ಯಗಳು ನೇರವಾಗಿ ರೈತರಿಗೆ ದೊರಕುವಂತೆ ಮಾಡಬೇಕು ಎಂದರು.
 ಒಕ್ಕೂಟದ ಮಾಜಿ ಅಧ್ಯಕ್ಷ ಮತ್ತು ಹಾಲಿ ನಿರ್ದೇಶಕ ವಿ.ಎನ್. ರಾಜಣ್ಣ ಮಾತನಾಡಿ, ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಸಹಕಾರ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವುದರ ಮೂಲಕ ತಮ್ಮ ಕ್ಷೇತ್ರದಲ್ಲಿನ ಗ್ರಾಮೀಣ ಜನತೆಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು ಎಂದರು.
ನಕಲಿ ಬಗ್ಗೆ ಎಚ್ಚರ: ಎಚ್‌ಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆರ್.  ಲೋಕೇಶ್ ಮಾತನಾಡಿ, ರಸಗೊಬ್ಬರಗಳನ್ನು ಮಾರಾಟ ಮಾಡುವಲ್ಲಿ ನಕಲಿ ಅಸಲಿಗಳನ್ನು ನೋಡಿಕೊಂಡು ಮಾರಾಟ ಮಾಡಬೇಕು.
ಯಾವುದೇ ಅಹಿತಕರ ಘಟನೆಗಳು ನಡೆಯದ ರೀತಿಯಲ್ಲಿ  ರಸಗೊಬ್ಬರಗಳ ಮಾರಾಟ ಮಾಡಲಾಗುತ್ತಿದೆ ಎಂದು  ಹೇಳಿದರು.
 ಜಿಲ್ಲಾ ಜಂಟಿ ಕೃಷಿ ನಿರ್ದೇಶಕ  ಬಿ.ಶಿವರಾಜು, ಸಕಲೇಶಪುರ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ  ದಯಾನಂದ ಉಪನ್ಯಾಸ ನೀಡಿದರು. ಒಕ್ಕೂಟದ ಉಪಾಧ್ಯಕ್ಷ  ಪಿ.ಎಲ್. ನಿಂಗರಾಜು, ನಿರ್ದೇಶಕರಾದ ವಿ.ಎನ್.ರಾಜಣ್ಣ, ಕೆ.ಸತೀಶ್, ಶೇಷಾದ್ರಿ, ಪುಟ್ಟಸ್ವಾಮಿಗೌಡ, ಹಿರಿಯ ಕ್ಷೇತ್ರೀಯ  ವ್ಯವಸ್ಥಾಪಕ ಕ ಎಚ್.ಕೆ. ರಮಾನಂದ ಇತರರು ಇದ್ದರು. ವಾಣಿ ಪ್ರಾರ್ಥಿಸಿದರು.
ನಾರಾಯಣಸ್ವಾಮಿ ಸ್ವಾಗತಿಸಿದರು. ಕೇಶವಪ್ರಸಾದ್ ವಂದಿಸಿದರು. ಭಾರತಿ ನಿರೂಪಿಸಿದರು.

6 ಲಕ್ಷ ಷೇರು ಬಂಡವಾಳ


ಬೆಂಗಳೂರು ಇಫ್ಕೋ ರಾಜ್ಯ ಮಾರಾಟ ವ್ಯವಸ್ಥಾಪಕ ಸಿ.ಎಸ್. ಪಾಟೀಲ್ ಮಾತನಾಡಿ, ಇಫ್ಕೋ ಸಂಸ್ಥೆಯು 1967ರಲ್ಲಿ ಕೇವಲ  57 ಸಹಕಾರ ಸಂಘಗಳ ಸದಸ್ಯತ್ವದಿಂದ 6 ಲಕ್ಷ ರು. ಷೇರು ಬಂಡವಾಳದೊಂದಿಗೆ  ಪ್ರಾರಂಭಗೊಂಡ ಸಂಸ್ಥೆ ಈಗ 40 ಸಾವಿರ  ಸಹಕಾರ ಸಂಘಗಳ ಸದಸ್ಯತ್ವದಿಂದ  423  ಕೋಟಿ ರು. ಷೇರು ಬಂಡವಾಳ ಹೊಂದಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಒಕ್ಕೂಟದ  ಅಧ್ಯಕ್ಷ  ದೊಡ್ಡಬೀಕನಹಳ್ಳಿ ನಾಗರಾಜು ಮಾತನಾಡಿ,  ರೈತರು ನಂಬಿಕೆ ಇಡುವ ರೀತಿಯಲ್ಲಿ ಸಿಬ್ಬಂದಿ ಸೇವೆ ಸಲ್ಲಿಸಿದ್ದಲ್ಲಿ ಸಂಘದ ಆದಾಯವು  ಹೆಚ್ಚುತ್ತದೆ. ಜನರಲ್ಲಿ ಸಹಕಾರ ಸಂಘದ ಬಗ್ಗೆ ನಂಬಿಕೆ ಬರುತ್ತದೆ. ಹಾಗಾಗಿ ಸದಸ್ಯರೊಂದಿಗೆ ಉತ್ತಮ  ಬಾಂಧವ್ಯ ಹೊಂದಬೇಕು ಎಂದು  ಹೇಳಿದರು.




Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.