ಬಹರ್ಹುಕುಂ ಸಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಾಳೆ
ಹಾಸನ: ದಲಿತರ ಹಾಗೂ ಇತರೆ ಬಡ ರೈತರು ಉಳುಮೆ ಮಾಡುತ್ತಿರುವ ಜಮೀನನ್ನು ಮಂಜೂರು ಮಾಡುವಂತೆ ಒತ್ತಾಯಿಸಿ ಆ.7ರಂದು ಪ್ರತಿಭಟನಾ ಮೆರವಣಿಗೆ ಹಾಗೂ ಧರಣಿ ನಡೆಸುವುದಾಗಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕುಪ್ಪೆ ಉಮೇಶ್ ತಿಳಿಸಿದ್ದಾರೆ.
ಬಗರ್ಹುಕುಂ ಸಕ್ರಮಕ್ಕೆ ಆಗ್ರಹ: ನಗರದಲ್ಲಿ ಮಂಗಳವಾರ ಸುದ್ದಿ
ಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇಲೂರು ತಾಲೂಕಿನ ಮಾದಿಹಳ್ಳಿ ಹೋಬಳಿ, ಹಾಡ್ಲಗೆರೆ ಗ್ರಾಮ ಹಾಗೂ ಹಳೇಬೀಡು ಹೋಬಳಿ, ಗೋಣಿಸೋಮನಹಳ್ಳಿ ಗ್ರಾಮದ ದಲಿತರು ಮತ್ತು ಇತರೆ ವರ್ಗದವರು ಅರಕಲಗೂಡು ತಾಲೂಕಿನ ಮುಸತ್ತೂರು ಗ್ರಾಮದ ದಲಿತರು ಸೇರಿದಂತೆ ಇತರೆ ವರ್ಗದವರು ಉಳುಮೆ ಮಾಡುತ್ತಿರುವ ಗೋಮಾಳ ಭೂಮಿಯನ್ನು ರೈತರಿಗೆ ಮಂಜೂರು ಮಾಡಬೇಕು ಮತ್ತು ಹೊಳೇನರಸೀಪುರ ತಾಲೂಕಿನ ಕಸಬಾ ಹೋಬಳಿ ಶ್ರೀ ಮಠದ ಕಾವಲಿನ 12 ಜನ ದಲಿತರಿಗೆ ಮಂಜೂರು ಮಾಡಿರುವ ಜಮೀನಿನಲ್ಲಿ ಅರಣ್ಯ ಇಲಾಖೆಯಿಂದ ಗಿಡಗಳನ್ನು ನೆಡಲಾಗಿದ್ದು, ತಕ್ಷಣ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು. ದಲಿತರು ಹಾಗೂ ಇತರೆ ವರ್ಗಗಳಿಗೆ ಬಗರ್ಹುಕುಂ ಸಾಗುವಳಿಯನ್ನು ಸಕ್ರಮಗೊಳಿಸಿ ಈ ಭೂಮಿಯ ಹಕ್ಕುದಾರರನ್ನಾಗಿ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿ ಆ.7ರಂದು ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿ ಆವರಣದವರೆಗೂ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ದಸಂಸ ಸಂಚಾಲಕ ಅಬ್ದುಲ್ ಸಮದ್, ಡಿ.ಎ.ಗಣೇಶ್ ವೇಲಾಪುರಿ, ಸಿದ್ದ, ಮಂಜು ಹಾಗೂ ಇತರರು ಇದ್ದರು.
'ವಿದೇಶಿ ನೇರ ಬಂಡವಾಳ: ಗ್ರಾಹಕರು ವರ್ತಕರು ಅತಂತ್ರ'
ಹೊಳೇನರಸೀಪುರ: ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆದಾರರು ಆಗಮಿಸುತ್ತಿರುವುದರಿಂದ ಗ್ರಾಹಕರು ಮತ್ತು ವರ್ತಕರು ಅತಂತ್ರ ಸ್ಥಿತಿಗೆ ತಲುಪುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬೆಂಗಳೂರಿನ ರಾಜ್ಯ ಎಫ್ಕೆಸಿಸಿಐ ಅಧ್ಯಕ್ಷ ಎಸ್. ಸಂಪತ್ರಾಮನ್ ಆತಂಕ ವ್ಯಕ್ತಪಡಿಸಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಇಲ್ಲಿನ ವರ್ತಕರ ಸಂಘವು ನೂತನವಾಗಿ ನಿರ್ಮಿಸಿರುವ ವರ್ತಕರ ಭವನದ ಉದ್ಘಾಟಿಸಿ ಮಾತನಾಡಿ, ವರ್ತಕರು ಮತ್ತು ರೈತರುಗಳು ಒಂದೇನಾಣ್ಯದ ಎರಡು ಮುಖಗಳು ಅವರುಗಳ ಶ್ರೇಯಸ್ಸು ನಮ್ಮಲ್ಲೆರ ಹೊಣೆ ಎಂದರು.
ವರ್ತಕ ಭವನವನ್ನು ಶಾಸಕ ಎಚ್.ಡಿ.ರೇವಣ್ಣ ಉದ್ಘಾಟಿಸಿದರು. ಸಮಾರಂಭದಲ್ಲಿ ವರ್ತಕ ಸಂಘದ ಅಧ್ಯಕ್ಷ ಕೆ.ಶ್ರೀಧರ್ ವಹಿಸಿದ್ದರು. ಸಮಾರಂಭದಲ್ಲಿ ಉಪಾಧ್ಯಕ್ಷ ಆರ್.ರಮೇಶ್, ತಹಸೀಲ್ದಾರ್ ನಾಗರಾಜು, ಕೃಷಿ ಮಾರುಕಟ್ಟೆ ಅಧ್ಯಕ್ಷ ಎಚ್.ಎಸ್.ಸುದರ್ಶನ್, ಕಾರ್ಯದರ್ಶಿ ಮಹೇಶ್, ಹಿರಿಯ ವರ್ತಕ ಸಿ.ಎನ್.ನಾಗರಾಜಶೆಟ್ಟಿ ವೇದಿಕೆಯಲ್ಲಿ ಇದ್ದರು.
ವರ್ತಕ ಸಂಘದ ಕಾರ್ಯದರ್ಷಿ ಕೆ.ಎಸ್.ಭರತ್ಕುಮಾರ್, ಎಚ್.ಎಸ್.ಮಂಜುನಾಥಗುಪ್ತ, ಸುಮಾಭರತ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

