13ರವರೆಗೆ ಕುಷ್ಠರೋಗ ಪಾಕ್ಷಿಕ ದಿನಾಚಾರಣೆ
ಹಾಸನ: ಕುಷ್ಠರೋಗ ಪಾಕ್ಷಿಕ ದಿನಾಚರಣೆಯನ್ನು ಫೆ. 13ರವರೆಗೆ ಆಚರಿಸಲಾಗುತ್ತಿದೆ. ತಾಲೂಕು ಮಟ್ಟದ ಕಾರ್ಯಕ್ರಮವನ್ನು ನಗರದ ವಾಣಿವಿಲಾಸ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಜಾಥಾ ಕಾರ್ಯಕ್ರಮ ಗುರುವಾರ ಏರ್ಪಡಿಸಲಾಗಿತ್ತು. ಸಾರ್ವಜನಿಕರಿಗೆ ಈ ರೋಗದ ಬಗ್ಗೆ ಅರಿವು ಮೂಡಿಸಲು ಜಾಥಾ ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಿ.ಎಲ್. ಶ್ಯಾಮಲಾದೇವಿ ಉದ್ಘಾಟಿಸಿದರು, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಎಂ.ಸಿ ಹೇಮಲತಾ ಇದ್ದರು. ಆರೋಗ್ಯ ಇಲಾಖೆಯ ಸಿಬ್ಬಂದಿವರ್ಗ ಜಾಥಾದಲ್ಲಿ ಭಾಗವಹಿಸಿ, ಹೆಚ್ಚಿನ ಅರಿವು ಮೂಡಿಸಲು ಪ್ರಯತ್ನಿಸಿದರು. ಮೆರವಣಿಗೆಯಲ್ಲಿ ಕರಪತ್ರ ಹಂಚಲಾಯಿತು. ಹೇಮಾವತಿ ಪ್ರತಿಮೆ ಮಾರ್ಗವಾಗಿ ಹಾದು ಹೋದ ಜಾಥಾ ಎನ್. ಆರ್. ಸರ್ಕಲ್ನಿಂದ ವಾಪಸ್ಸು ವಾಣಿವಿಲಾಸ ತಲುಪಿತು. ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಎಸ್. ಮಹೇಶ್ ನಿರೂಪಿಸಿದರು.
ಸೇವಾ ಮನೋಭಾವ ಬೆಳೆಸಿಕೊಳ್ಳಲು ಕರೆ
ಅರಕಲಗೂಡು: ಜನರು ಉಳಿತಾಯ ಮಾಡುವ ಪ್ರಕ್ರಿಯೆಯ ಜೊತೆಗೆ ಸೇವಾ ಮನೋಭಾವ ಬೆಳೆಸಿಕೊಂಡಲ್ಲಿ ಬದುಕು ಹಸನಾಗಲು ಸಾಧ್ಯ ಎಂದು ಇಲ್ಲಿನ ಕರ್ಣಾಟಕ ಬ್ಯಾಂಕ್ನ ವ್ಯವಸ್ಥಾಪಕ ಜಯಾನಂದ್ ದೇವಾಡಿಗ ತಿಳಿಸಿದ್ದಾರೆ. ಅವರು ಕಸಬಾ ಹೋಬಳಿ ಹೊನ್ನವಳ್ಳಿ ಗ್ರಾಮದ ಜೈ ಹನುಮಾನ್ ನವ ಸಾಕ್ಷರ ಪುರುಷ ಸ್ವಸಹಾಯ ಸಂಘದ 10ನೇ ವಾರ್ಷಿಕೋತ್ಸವ ಸಮಾರಂಭದಅಧ್ಯಕ್ಷತೆ ವಹಿಸಿ ಮಾತನಾದರು.
ಪ್ರಸ್ತುತ ಸ್ವ- ಸಹಾಯ ಸಂಘಗಳ ಮೂಲಕ ಗ್ರಾಮೀಣ ಭಾಗದ ಜನರು ಕ್ರಿಯಾಶೀಲರಾಗಿದ್ದು,ಉಳಿತಾಯ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದರ ಜೊತೆಗೆ, ಎಲ್ಲರಿಗಾಗಿ ನಾನು, ನನಗಾಗಿ ಎಲ್ಲರೂ ಎಂಬ ಧ್ಯೇಯದೊಂದಿಗೆ ಎಲ್ಲ ಸದಸ್ಯರಿಗೂ ಸಹಕಾರಿಯಾಗಿ ಇರುವುದು ಶ್ಲಾಘನೀಯ ಎಂದರು.
ಸದರಿ ಸಂಘ ಸುಮಾರು 10 ವರ್ಷಗಳಿಂದ ಸುಮಾರು 10 ವರ್ಷಗಳಿಂದ ದಾಖಲಾತಿಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಿಕೊಂಡು ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

