ಹಾಸನ

ತಿಪಟೂರು- ಗಂಡಸಿ ರೇಲ್ವೆ ಯೋಜನೆಗೆ ಅಸ್ತು: ಮಾಜಿ ಸಚಿವ ಶಿವರಾಂ

Published On :

ಹಾಸನ: ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ತಿಪಟೂರು- ಗಂಡಸಿ ರೇಲ್ವೆ ಯೋಜನೆಗೆ ಬಜೆಟ್‌ನಲ್ಲಿ ಅನುಮೋದನೆಯನ್ನು ರೇಲ್ವೆ ಸಚಿವರು ನೀಡಿರುವುದು ಸಂತೋಷಕರ ಸಂಗತಿ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ. ಶಿವರಾಂ ಹರ್ಷ ವ್ಯಕ್ತಪಡಿಸಿದ್ದಾರೆ.
ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಸಕ್ತ ಸಾಲಿನ ರೇಲ್ವೆ ಬಜೆಟ್ ನಲ್ಲಿ  ತಿಪಟೂರು- ಗಂಡಸಿ ರೇಲ್ವೆ ಯೋಜನೆಯು ಕಡಿಮೆ ವೆಚ್ಚದ 20 ಕಿ.ಮೀ. ದೂರದ ರೈಲ್ವೆ ಕಾಮಗಾರಿ  ಒಪ್ಪಿಗೆ ನೀಡಿದ್ದಾರೆ. ಕೆಲವರ ದ್ವೇಷದ ರಾಜಕಾರಣದಿಂದ ಯೋಜನೆ ಆಗಿರಲಿಲ್ಲ. ಕೇಂದ್ರ ಸರ್ಕಾರ ಮತ್ತೆ ಮರುಜೀವ ನೀಡುವ ಮೂಲಕ ಸರಕು ಸಾಗಣಿಕೆ ಸಾಗಿಸಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಹಣ ನೀಡಲು ಒತ್ತಾಯ: ಎತ್ತಿನಹೊಳೆ ಯೋಜನೆಯು ಆಡಳಿತಾತ್ಮಕ ಮಂಜುರಾತಿಗೆ ಅನುಮೋದನೆ ನೀಡಲಾಗಿದೆ. ಹಂತ- ಹಂತವಾಗಿ ಹಣ ಬಿಡುಗಡೆ ಮಾಡಲಾಗುತ್ತಿದೆ. ಹಾಸನ ನಗರದ ಹೈಟೆಕ್ ಬಸ್ ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲಿ ರೇಲ್ವೆ ಹಳಿ ಮೇಲ್ಸೇತುವೆಗೆ ರಾಜ್ಯದಿಂದ ಶೇ. 50 ಭಾಗ ಹಣ ನೀಡಿದ ನಂತರ ಕೇಂದ್ರದ ಅನುಮೋದನೆ ದೊರೆಯಲಿದೆ. ಬಜೆಟ್‌ನಲ್ಲಿ ಹಣ ನೀಡಲು ಒತ್ತಾಯ ಮಾಡಲಾಗಿದೆ ಎಂದು ಹೇಳಿದರು.
ಏಕೆ ನೆನೆಗುದಿಗೆ ಬಿದ್ದಿದೆ: ಹಾಸನ- ಬೆಂಗಳೂರು ರೇಲ್ವೆ ಯೋಜನೆಗೆ ಹಣದ ಸಮಸ್ಯೆ ಇಲ್ಲ. ಭೂಸ್ವಾಧೀನದ ದ ಬಗ್ಗೆ  ತೊಂದರೆ ಇದೆ. ಹಿಂದಿನ ಇತರೆ ರಾಜಕೀಯ ಪಕ್ಷಗಳ ಆಡಳಿತದಲ್ಲಿ ಎಷ್ಟು ನೀರಾವರಿ ಸಾಧನೆಯಾಗಿದೆ. ಇಷ್ಟು ವರ್ಷ ಆದರೂ ಏಕೆ ನೆನೆಗುದಿಗೆ ಬಿದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನಾರಾಯಣಗೌಡ, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಸನ್ನಿ ಆಂಡ್ರಾಸ್, ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಪಟೇಲ್ ಶಿವಪ್ಪ, ಮಲ್ಲೇಶ್, ಅಮೀರ್ ಜಾನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.