ಹಾಸನ

'ಮಕ್ಕಳಲ್ಲಿ ಧಾರ್ಮಿಕ ಆಚಾರಗಳ ಅರಿವು ಮೂಡಿಸಿ'

Published On :

ಜಾವಗಲ್: ಮಹಿಳೆಯರು ಸಂಸ್ಕಾರವಂತರಾಗಿ ತಮ್ಮ ಮಕ್ಕಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಧಾರ್ಮಿಕ ಆಚಾರ-ವಿಚಾರಗಳ ಬಗ್ಗೆ ಅರಿವು ಮೂಡಿಸಬೇಕೆಂದು ಹುಲಿಕೆರೆ ದೊಡ್ಡಮಠದ ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಜಾವಗಲ್ ಹೋಬಳಿ ದೊಟ್ಟಘಟ್ಟ ಗ್ರಾಮದಲ್ಲಿ ಇತ್ತೀಚೆಗೆ ಶ್ರೀ ಬೀರಲಿಂಗೇಶ್ವರ ಸ್ವಾಮಿ ದೇವಾಲಯ ಪುನರ್ ಪ್ರತಿಷ್ಠಾಪನೆ, ಏಳುಕೋಟೆ ಮೈಲಾರ್ ಲಿಂಗೇಶ್ವರ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಹಾಗೂ ಕರಿಯಮ್ಮದೇವಿ ನೂತನ ದೇವಾಲಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಪ್ರತಿಯೊಬ್ಬರೂ ಭಾಗವಹಿಸಬೇಕು: ಹಳ್ಳಿಗಳಲ್ಲಿ ಸಂಸ್ಕೃತಿ ದಿನೇ ದಿನೇ ನಶಿಸಿ ಹೋಗುತ್ತಿದ್ದು, ಯುವಕರು ನಗರ ಜೀವನಕ್ಕೆ ಮಾರುಹೋಗುತ್ತಿದ್ದಾರೆ. ಇದನ್ನು ತಗ್ಗಿಸುವ ನಿಟ್ಟಿನಲ್ಲಿ ಪುರುಷರಿಗಿಂತ ಮಹಿಳೆಯರು ಜಾಗೃತರಾಗಿರ ಬೇಕಾಗಿದೆ. ಮಕ್ಕಳು ತಮ್ಮ ಸಂಸ್ಕೃತಿ, ಪರಂಪರೆ, ಅಧ್ಯಾತ್ಮಿಕ ವಿಚಾರಗಳ ಬಗ್ಗೆ ಆಸಕ್ತಿ ಮೂಡಿಸಬೇಕಾಗಿದೆ ಎಂದರು. ದೇವಾಲಯಗಳನ್ನು ಕಟ್ಟಿದರೆ ಸಾಲದು ದೇವಾಲಯಗಳಲ್ಲಿ ಪ್ರತಿನಿತ್ಯ ಪ್ರಜೆ ನಡೆಯಬೇಕು ಮತ್ತು ಪ್ರತಿಯೊಬ್ಬರೂ ಭಾಗವಹಿಸಬೇಕೆಂದರು.
ಕಾಮಗಾರಿಗಾಗಿ ಒತ್ತಾಯ: ಗ್ರಾಪಂ ಸದಸ್ಯ ಲಕ್ಷ್ಮೇಗೌಡ ಮಾತನಾಡಿ, ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆವಗವಾಗಿದ್ದು ಹೇಮಾವತಿ ಕುಡಿಯುವ ನೀರು ಯೋಜನೆಯಡಿ ನೀರಿನ ವ್ಯವಸ್ಥೆ ಕಲ್ಪಿಸುವ ಯೋಜನೆ ಮಂಜೂರಾಗಿದ್ದು ಶೀಘ್ರವೇ ಕಾಮಗಾರಿ ಪ್ರಾರಂಭಿಸಿ ನೀರಿನ ಬವನೆ ನಿವಾರಿಸುವಂತೆ ಸುವರ್ಣಗ್ರಾಮ ಯೋಜನೆಗೆ ದೊಡ್ಡಘಟ್ಟ ಗ್ರಾಮವೂ ಸೇರಿಸಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವಂತೆ ಒತ್ತಾಯಪಡಿಸಿದರು. ಪಿಡಿಓ ವಿರೂಪಾಕ್ಷ ಮಾತನಾಡಿ,  ಗ್ರಾಮದಲ್ಲಿನ ತೆರಿಗೆ ವಸೂಲಾತಿ ಕೊಂಠಿತವಾಗಿದ್ದು ಮನೆ ಮತ್ತು ನಲ್ಲಿ ತೆರಿಗೆಯನ್ನು ಪರಿಷ್ಕರಿಸುವ ಅಗತ್ಯವಿದ್ದು, ಸಕಾಲಕ್ಕೆ ತೆರಿಗೆ ಪಾವತಿಮಾಡಿ ಅಭಿವೃದ್ಧಿಗೆ ಶ್ರಮಿಸಬೇಕೆಂದರು.
ಡಿ. ಕೃಷ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಕವಿತಾ ಮಂಜುನಾಥ್, ತಾಪಂ ಸದಸ್ಯೆ ಲಕ್ಷ್ಮೀ ರವಿಶಂಕರ್, ಜಿಪಂ ಮಾಜಿ  ಸದಸ್ಯ  ವೈ.ಎನ್. ಕೃಷ್ಣೇಗೌಡ, ಗ್ರಾಮದ ಮುಖಂಡರಾದ ಮೂರ್ತೇಗೌಡ, ಸದಾನಂದಗೌಡ, ಮಲ್ಲೇಶಪ್ಪ, ಸಣ್ಣಚಿಕ್ಕೇಗೌಡ , ದಾಸೇಗೌಡ, ಗ್ರಾಪಂ ಮಾಜಿ ಸದಸ್ಯರಾದ ಗೋವಿಂದೇಗೌಡ, ಹೊನ್ನೇಗೌಡ, ಡಿ.ಆರ್. ವಿಜಯಕುಮಾರ್, ದೊಡ್ಡೇಗೌಡ, ಧರ್ಮೇಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.