ಹಾಸನ

ಮುತ್ತುರಾಜ್ ಬಂಧನಕ್ಕೆ ಬಿಎಸ್ಪಿ ಆಗ್ರಹ

Published On :

ಬೇಲೂರು: ತಾಲ್ಲೂಕಿನ ಗಂಗೂರು ಗ್ರಾಮದ ಶಾಂತಿ ಭಂಗ ತಂದಿರುವ ಕಿರುತೆರೆ ಅಣಕು ಹಾಸ್ಯನಟ ಮುತ್ತುರಾಜ್ನನ್ನು ಪೊಲೀಸರು ತಕ್ಷಣ ಬಂಧಿಸಬೇಕುಎಂದು ತಾಲ್ಲೂಕು ಬಿಎಸ್ಪಿ ಕಾರ್ಯದರ್ಶಿ ತಿರುಮಲನಹಳ್ಳಿ ಶಿವಕುಮಾರ್ ಒತ್ತಾಯಿಸಿದ್ದಾರೆ
ಗಂಗೂರು ದೇವಾಲಯಕ್ಕೆ ದಲಿತರು ಪ್ರವೇಶ ಶಾಂತಿಯುತವಾಗಿ ನಡೆದು, ಗ್ರಾಮದಲ್ಲಿ ಯಾವುದೆ ಅಹಿತರಕರ ಘಟನೆ ನೆಡೆಯದೆ ದಲಿತರು ಸವರ್ಣಿಯುರು ಸೌಹರ್ಧತೆಯಲ್ಲಿದ್ದರು. ಅದರೆ ಮುತ್ತುರಾಜಜ್ಗಂಗೂರು ಗ್ರಾಮಕ್ಕೆ ಬಂದು ಮಕ್ಕಳ ಹಾಗೂ ಗ್ರಾಮದ ಕೆಲವರನ್ನು ಕ್ಷೌರ ಮಾಡಿ ಆಶಾಂತಿಗೆ ಕಾರಣನಾಗಿದ್ದು ಈ ಬಗ್ಗೆ ಸಮಗ್ರ ತನಿಖೆ ನೆಡೆಸಿ ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಟೀಕೆ: ಭಾಗ್ಯ ಎಂಬ ಮಹಿಳೆ ಈ ಪ್ರಕರಣಕ್ಕೆ ಕಾರಣವಾಗಿಲ್ಲ. ಉನ್ನತ ಅಧಿಕಾರಿಗಳ ಒತ್ತಡಕ್ಕೆ ಮಣಿದು ನಿಜಾಂಶ ತಿಳಿಯದೆ ರಂಗಸ್ವಾಮಿ, ಮಲ್ಲೇಶ್, ಬಾಗ್ಯ, ಮಹೇಶ್, ರವಿ, ತಿಮ್ಮಕ್ಕ, ವಿಜಯ್, ಆನಂದ್, ಪರಮೇಶ್, ಶಿವಕುಮಾರ್, ಲತಾ, ಶೈಲಾ, ಅಕ್ಕಮ್ಮ, ಲಲಿತ, ದೇವಾರಾಜಯ್ಯ, ಭೈರೇಶ್, ದೇವರಾಜು ಹಾಗು ಇನ್ನಿತರೆ 20 ಜನರ ಮೇಲೆ ಕೇಸು ದಾಖಲೆ ಮಾಡಲಾಗಿದೆ ಎಂದು ಟೀಕಿಸಿದರು.  ಈ ಎಲ್ಲ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನೆಡೆಸಿದಾಗ ಮಾತ್ರ ಸತ್ಯ ಹೊರಬೀಳಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಮಲ್ಲೇಶ್, ಪ್ರದೀಪ್, ಮಹೇಶ್ ಹಾಗೂ ಇತರರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.