ಸಾಹಿತಿ ಅನಂತರಾಜುಗೆ ನೇಕಾರ ರತ್ನ ಪ್ರಶಸ್ತಿ
ಹಾಸನ: ಸಾಹಿತಿ ಗೊರೂರು ಅನಂತರಾಜು ಅವರು ರಾಜ್ಯಮಟ್ಟದ 2014ರ ನೇಕಾರ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ರಾಜ್ಯಾದ್ಯಂತ ನಾನಾ ಕ್ಷೇತ್ರಗಳ 35 ಸಾಧಕರನ್ನು ನೇಕಾರರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ, ನೇಕಾರರ ರಾಷ್ಟ್ರೀಯ ಸೇವಾ ಟ್ರಸ್ಟ್ ಮತ್ತು ನೇಕಾರ ವಾಣಿ ಮಾಸ ಪತ್ರಿಕೆ ಇವರ ಸಂಯುಕ್ತಾಶ್ರಯದಲ್ಲಿ ಬೆಂಗಳೂರಿನ ಟೌನ್ ಹಾಲ್ನಲ್ಲಿ ಫೆ. 22ರಂದು ಹಮ್ಮಿಕೊಳ್ಳಲಾಗಿರುವ ಸಮಾರಂಭದಲ್ಲಿ ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ಶ್ರೀ ಬಸವರಾಜ ಪಟ್ಟದಾರ್ಯ ಸ್ವಾಮೀಜಿಯವರ ದಿವ್ಯಸಾನಿಧ್ಯದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದ್ದು, ಲೇಖಕ ಗೊರೂರು ಅನಂತರಾಜು ಅವರನ್ನು ಸಾಹಿತ್ಯ ಕ್ಷೇತ್ರದಿಂದ ಆಯ್ಕೆ ಮಾಡಲಾಗಿದೆ ಎಂದು ನೇಕಾರರ ರಾಷ್ಟೀಯ ಸೇವಾ ಟ್ರಸ್ಟ್ನ ಅಧ್ಯಕ್ಷ ರಘು ಎನ್. ಶೆಟ್ಟಿಗಾರ್ ಮತ್ತು ನೇಕಾರ ವಾಣಿ ಪತ್ರಿಕೆ ಸಂಪಾದಕ ಲಿಂಗರಾಜು ಡಿ. ನೊಣವಿನಕೆರೆ ತಿಳಿಸಿದ್ದಾರೆ. ಸಾಹಿತ್ಯ ಜೊತೆಗೊ ಸಾಂಸ್ಸೃತಿಕ ಕ್ಷೇತ್ರದಲ್ಲೂ ಗುರುತಿಸಿಕೊಂಡಿರುವ ಇವರು ರಂಗಭೂಮಿ ನಟರಾಗಿ ನಿರ್ದೇಶಕರಾಗಿ ಹಲವಾರು ಯುವ ಕಲಾವಿದರನ್ನು ಬೆಳಕಿಗೆ ತಂದಿದ್ದಾರೆ ಎಂದರು.
ನೇಕಾರ ರತ್ನ ಪ್ರಶಸ್ತಿಗೆ ಭಾಜನರಾಗಿರುವ ಗೊರೂರು ಅನಂತರಾಜು ಅವರನ್ನು ನಾಟಕಕಾರರು ಗ್ರಾಮ ಸಂಸ್ಕೃತಿ ಅಧ್ಯಯನ ಕೇಂದ್ರದ ಕಾರ್ಯದರ್ಶಿ ಹಾಗೂ ನಿಕಟಪೂರ್ವ ಕನ್ನಡ ಸಾಹಿತ್ಯ ಪರಿಷತ್ತಿನ ಹಾಸನ ತಾಲ್ಲೂಕು ಅಧ್ಯಕ್ಷರಾದ ಶಾಂತಿಗ್ರಾಮ ರಾಜಶೇಖರ್, ಹಾಸನ ಜಿಲ್ಲಾ ದೇವಾಂಗ ನೌಕರರ ಸಂಘದ ಕಾರ್ಯದರ್ಶಿ ಶ್ರೀರಾಮಚಂದ್ರ, ಕವಿ ಎನ್. ಗಂಗಾಧರ್, ಹಾಸನದ ಶ್ರೀ ರಮ್ಯಕಲಾರಂಗದ ಸ್ಥಾಪಕ ಅಧ್ಯಕ್ಷರು, ರಂಗಭೂಮಿಯ ಹಿರಿಯ ನಟರು ಅಭಿನಂದಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

