ಆಸ್ಪತ್ರೆಗಳಿಗೆ ಸುಣ್ಣ, ಬಣ್ಣ ಹೊಡೆಸಿ: ಶಿವಲಿಂಗೇಗೌಡ
ವಿಧಾನಸಭೆ: ಸರ್ಕಾರಿ ಆಸ್ಪತ್ರೆಗಳಿಗೆ ಏನು ಮಾಡದಿದ್ದರೂ ಮೊದಲು ಸುಣ್ಣ- ಬಣ್ಣ ಹೊಡೆಸಿ. ಆಗ ಮೂಗುಮುಚ್ಚಿಕೊಂಡು ಹೋಗುವಂತಹ ಪರಿಸ್ಥಿತಿ ಬದಲಾಗಬಹುದೇನೋ...
ವಿಧಾನಸಭೆಯಲ್ಲಿ ಶಿವಲಿಂಗೇಗೌಡ ಸರ್ಕಾರಕ್ಕೆ ನೀಡಿದ ಸಲಹೆ ಇದು. ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಗು ಹಿಡಿದುಕೊಂಡು ಹೋಗಬೇಕಾದ ಪರಿಸ್ಥಿತಿ. ಅವುಗಳನ್ನು ಮೊದಲು ಸ್ವಚ್ಛಗೊಳಿಸಿ. ವೈದ್ಯರು ಅಲ್ಲಿ ಇರುವುದೇ ಇಲ್ಲ. ಅವರ ನರ್ಸಿಂಗ್ ಹೋಂಗಳಲ್ಲಿ ಜನರನ್ನು ಕರೆಯಿಸಿಕೊಂಡು ಸರ್ಕಾರದ ಔಷಧ, ಮಾತ್ರೆಗಳನ್ನು ನೀಡುತ್ತಾರೆ. ಇದಕ್ಕೆಲ್ಲ ಇತಿಶ್ರೀ ಹಾಡಿ ಸ್ವಾಮಿ ಎಂದು ಕೇಳಿಕೊಂಡರು. ಕುರಿ- ಕೋಳಿಗೆ ಬಹಳಷ್ಟು ಹಣ ನೀಡುತ್ತೀರಿ. ಆದರೆ ನಮ್ಮ ಭಾಗದ ಜನರಿಗೆ ಕುಡಿಯಲು ನೀರು ಕೊಡಲ್ಲ. ಬಯಲುಸೀಮೆ ಜನರು ಏನು ಪಾಪ, ಏನು ಕರ್ಮ ಮಾಡಿದ್ದಾರೆ ಸ್ವಾಮಿ. ನಮಗೆ ಏತ ನೀರಾವರಿ ಯೋಜನೆಯಲ್ಲಿ ನೀರೇ ಕೊಡುತ್ತಿಲ್ಲ. ಹಾಸನ ಭಾಗದ ಜನರಿಗೆ ಅದರಲ್ಲೂ ಅರಸೀಕೆರೆಯ ಜನರಿಗೆ ಹೇಮಾವತಿ ನೀರಿನ ದರ್ಶನವನ್ನಾದರೂ ಮಾಡಿಸಿ ಸ್ವಾಮಿ ಎಂದು ಮನವಿ ಮಾಡಿಕೊಂಡರು.
ವಚನ ಸಾಹಿತ್ಯ ಉಪನ್ಯಾಸ
ಬೇಲೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿಶ್ವ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ಕಾಲೇಜಿನಲ್ಲಿ ರಸಗ್ರಹಣ ಕಾರ್ಯಕ್ರಮದ ಅಂಗವಾಗಿ ವಚನ ಸಾಹಿತ್ಯ ಉಪನ್ಯಾಸ, ವಚನ ವಾಚನ ಮತ್ತು ವಾಚನ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ನಾಟಕಕಾರ ಬೇಲೂರು ಕೃಷ್ಣಮೂರ್ತಿ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲ ಬಿ.ಎನ್. ಜಯಕುಮಾರ್ ಮಾತನಾಡಿ, ಸಾಹಿತ್ಯವೆಂಬುದು ಜನಸಾಮಾನ್ಯರಿಗೆ ಸಿಗದ ಸಂದರ್ಭದಲ್ಲಿ ಸಮಾಜದ ಸರ್ವೋತ್ತಮ ಕ್ರಾಂತಿ ನಡೆದಿದ್ದು 12ನೇ ಶತಮಾನದಲ್ಲಿ ಎಂದರು.
ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಹೀನಾ ಕೌಸರ್ ಸ್ವಾಗತಿಸಿದರು. ಅರ್ಥಶಾಸ್ತ್ರ ಉಪನ್ಯಾಸಕ ಆದರ್ಶ ನಿರೂಪಿಸಿದರು. ಸಮಾಜಶಾಸ್ತ್ರ ಉಪನ್ಯಾಸಕ ಮೋಹನ್ ವಂದಿಸಿದರು. ರಾಮಶಂಕರಬಾಬು ವಚನಗಳನ್ನು ಹಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

