ಜಿನಾಲಯ ಜೀರ್ಣೋದ್ಧಾರ, ಪಂಚಾಮೃತ ಮಹಾಪೂಜೆ
ಅರಸೀಕೆರೆ: ಪಟ್ಟಣದಲ್ಲಿ ಕ್ರಿಶ 13 ನೇ ಶತಮಾನದಲ್ಲಿ ಹೊಯ್ಸಳ ಅರಸರ ದಂಡನಾಯಕ ಶ್ರೀರೇಚಿಮಯ್ಯ ಮತ್ತು ಇವರ ಧರ್ಮಪತ್ನಿ ಗೌರಾದೇವಿರವರಿಂದ ನಿರ್ಮಿಸಲ್ಪಟ್ಟ ಸಹಸ್ರಕೂಟ ಜಿನಾಲಯವು ಜೀರ್ಣೋದ್ಧಾರಗೊಂಡಿದ್ದು, ಧಾಮಸಂಪ್ರೋಕ್ಷಣಾ, ಲಘು ಪಂಚಕಲ್ಯಾಣ ಪೂರ್ವಕ ಪ್ರತಿಷ್ಠಾಪನೆ ಗೊಂಡಿರುವ ಸಹಸ್ರಕೂಟ ಜಿನಬಿಂಬಕ್ಕೆ ಇತ್ತೀಚೆಗೆ 1008 ಕಲಶಗಳಿಂದ ಮಹಾಭಿಷೇಕ, ಪಂಚಾಮೃತ ಮಹಾ ಪೂಜೆ ಕಾರ್ಯಕ್ರಮಗಳು ನೆರವೇರಿತು.
ಬೆಳಿಗ್ಗೆ ಶ್ರೀಕ್ಷೇತ್ರ ಶ್ರವಣಬೆಳಗೊಳದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವನ್ನು ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ದೀಪಬೆಳಗುವ ಮೂಲಕ ಉದ್ಘಾಟಿಸಿದರು.
ನಾಡೋಜ ಹಂ.ಪ. ನಾಗರಾಜಯ್ಯ ಸಂಪಾದಿಸಿರುವ ಅರಸೀಕೆರೆ ಸಹಸ್ರಕೂಟ ಜಿನಾಲಯ ಪುಸ್ತಕ ಬಿಡುಗಡೆಯನ್ನು ಪ್ರಜಾವಾಣಿ ಮುಖ್ಯ ಸಂಪಾದಕ ಪದ್ಮರಾಜ ದಂಡಾವತೆ ನೆರವೇರಿಸಿದರು. ಜೈನ ಸಮಾಜದ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

