ದೇಗುಲಗಳಿಂದ ಅವಿವೇಕ ತೊಲಗಲಿ
ಅರಸೀಕೆರೆ: ದೇವಾಲಯಗಳು ಮನುಷ್ಯರಲ್ಲಿರುವ ದ್ವೇಷ, ಅಸೂಯೆ, ಮಾತ್ಸರ್ಯ, ಅವಿವೇಕತನವನ್ನು ಹೋಗಲಾಡಿಸಿ ಮನಪರಿವರ್ತನೆ ಮಾಡುವ ಧಾರ್ಮಿಕ ಕೇಂದ್ರಗಳಾಗಬೇಕೆಂದು ಹೊಸದುರ್ಗ ತಾಲೂಕಿನ ಕುಂಚಿಟಿಗ ಮಹಾಸಂಸ್ಥಾನ ಒಪ್ಪೊತ್ತಿನ ಮಠದ ಶ್ರೀ ಶಾಂತವೀರ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲೂಕಿನ ಭೈರಗೊಂಡನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ನೂತನ ಆಂಜನೇಯ ಸ್ವಾಮಿ ದೇವಾಲಯದ ಪ್ರವೇಶ ಮಹೋತ್ಸವ ಹಾಗೂ ವಿಗ್ರಹಗಳ ಪ್ರತಿಷ್ಠಾಪನಾ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು ವಿಶಾಲ ತಳಹದಿಯ ಮೇಲೆ ದೇವಾಲಯಗಳು ನಿರ್ಮಾಣವಾಗಬೇಕೇ ಹೊರತು ಜಾತಿ, ಉಪಜಾತಿಗೆ ಒಂದೊಂದು ದೇವಾಲಯ ನಿರ್ಮಾಣವಾಗಿ ಸಮಾಜದ ಒಡಕಿಗೆ ಕಾರಣವಾಗಬಾರದು ಎಂದ ಅವರು ಇದನ್ನೇ ಸದ್ಬಳಕೆ ಮಾಡಿಕೊಳ್ಳುವ ಕೆಲ ಕುಹಕಿಗಳು ಶಾಂತಿ ಸಾಮರಸ್ಯ ಕದಡುವ ಕಾರ್ಯಕ್ಕೆ ಮುಂದಾಗುತ್ತಾರೆ. ಇಂತಹ ಬೆಳವಣಿಗೆಗಳಿಗೆ ಆಸ್ಪದ ನೀಡಬಾರದೆಂದು ಎಚ್ಚರಿಕೆ ನೀಡಿದರು.
ಮೋಹದಿಂದ ಹೊರಬನ್ನಿ: ಪಾಶ್ಚಾತ್ಯ ಕುರುಡು ಸಂಸ್ಕತಿಯ ಪ್ರಭಾವದಿಂದಾಗಿ ಸಮಾಜದಲ್ಲಿ ಧಾರ್ಮಿಕ ಪ್ರಜ್ಞೆ ಇತ್ತೀಚಿನ ದಿನಗಳಲ್ಲಿ ಕ್ಷೀಣಿಸುತ್ತಿರುವುದು ವಿಷಾದಕರ. ಜಗತ್ತಿನ ಎಲ್ಲಾ ದೇಶಗಳಿಗೂ ಭಾರತೀಯ ಸಂಸ್ಕತಿಯೇ ಆದರ್ಶವಾಗಿದೆ. ರಾಮಾಯಣದ ಬಗ್ಗೆ ವಿವಾದಗಳಿದ್ದರೂ ಅಲ್ಲಿ ಬರುವ ಉತ್ತಮ ವಿಚಾರಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಗುರು ಹಿರಿಯರು ತಂದೆ ತಾಯಿಗಳ ಬಗ್ಗೆ ಸದ್ಭಾವನೆ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ಕೋಳಗುಂದ ಕೇದಿಗೆ ಮಠದ ಜಯಚಂದ್ರಶೇಖರ ಸ್ವಾಮೀಜಿ, ಯಳನಡು ಜಗದ್ಗುರು ಸಂಸ್ಥಾನದ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ, ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ. ಆಶೀರ್ವಚನ ನೀಡಿದರು. ಸಮಾರಂಭದಲ್ಲಿ ತಾಪಂ ಸದಸ್ಯರಾದ ಬಿ.ಆರ್. ಜಯಣ್ಣ, ಶಶಿಕಲಾ ಧರ್ಮಣ್ಣ, ಹಿರಿಯೂರು ಗ್ರಾ.ಪಂ.ಅಧ್ಯಕ್ಷೆ ವೀಣಾ ಬಸವರಾಜು, ಪುರಸಭಾ ಸದಸ್ಯ ಶೈಲೇಂದ್ರಕುಮಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬೋರೆಹಳ್ಳಿ ಸೋಮಶೇಖರ್, ತಾ.ಬಿ.ಜೆ.ಪಿ. ಅಧ್ಯಕ್ಷ ಹರಳಕಟ್ಟ ರಮೇಶ್, ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಆರ್. ನಿಂಗಪ್ಪ, ಉದ್ಯಮಿ ಕಾಟೀಕೆರೆ ಮೋಹನ್, ಗ್ರಾಮಸ್ಥರಾದ ಮಲ್ಲಿಕಾರ್ಜುನಪ್ಪ ಹಾಗೂ ಇನ್ನಿತರರು ಇದ್ದರು.
ಇದೇ ವೇಳೆ ಹರಗುರು ಚರಮೂರ್ತಿಗಳನ್ನು, ದೇವಾಲಯದ ನಿರ್ಮಾಣದಲ್ಲಿ ಶ್ರಮಿಸಿದ ಹಿರಿ- ಕಿರಿಯರನ್ನು ಸಮಾಜ ಸೇವಕ ಬಿ.ಎಲ್. ಬಸವರಾಜ್ ಸನ್ಮಾನಿಸಿದರು. ಶಂಕರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಮಲ್ಲಿಕಾರ್ಜುನ್ ನಿರೂಪಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

