ಹೊಳೆನರಸೀಪುರದಲ್ಲಿ ನಮೋ ಟೀ ಸ್ಟಾಲ್
ಹೊಳೆನರಸೀಪುರ: ತಾಲೂಕು ಬಿಜೆಪಿ ಘಟಕದ ವತಿಯಿಂದ ಸೋಮವಾರ ಪಟ್ಟಣದ ಗಾಂಧಿ ವೃತ್ತದ ಬಳಿಯಲ್ಲಿ ನಮೋ ಟೀಸ್ಟಾಲ್ ಸ್ಥಾಪಿಸಿ ಸಾರ್ವಜನಿಕರಿಗೆ ಟೀ ಹಂಚುವ ಮೂಲಕ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಪರವಾಗಿ ಪ್ರಚಾರ ಕೈಗೊಂಡರು.
ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಎಂ.ಎನ್. ರಾಜು ನೇತೃತ್ವದಲ್ಲಿ ನಮೋ ಟೀ ಸ್ಟಾಲ್ ನಿರ್ಮಿಸಿದ ಬಿಜೆಪಿ ಕಾರ್ಯಕರ್ತರು ಸಾರ್ವಜನಿಕರಿಗೆ ಟೀ ಹಂಚುತ್ತಲೇ ಭಾರತದ ಭವಿಷ್ಯ ಬಿಜೆಪಿಯಿಂದ ಮಾತ್ರ ಸಾಧ್ಯವಿದ್ದು, ವ್ಯಾಪಕ ದುರಾಡಳಿತದಲ್ಲಿ ಮುಳುಗಿರುವ ಕಾಂಗ್ರೆಸನ್ನು ತೊಲಗಿಸಿ ಕಾಂಗ್ರೆಸ್ ಮುಕ್ತ ಭಾರತವನ್ನು ಕಟ್ಟೋಣ ಎಂಬ ಜನಜಾಗರಣಾ ಅಭಿಯಾನವನ್ನು ತಮ್ಮ ಪಕ್ಷದ ನಿರ್ದೇಶನದ ಮೇರೆಗೆ ಪಟ್ಟಣದಲ್ಲಿ ಕೈಗೊಂಡಿದ್ದರು.
ಅಭಿಯಾನ: ವಾರದ ಸಂತೆಯ ದಿನವಾದ ಸೋಮವಾರ ಪಟ್ಟಣದ ಹೃದಯ ಭಾಗದಲ್ಲಿನ ಗಾಂಧಿ ವೃತ್ತದ ಬಳಿಯಲ್ಲಿ ನಮೋ ಟೀಸ್ಟಾಲ್ ತೆರೆದ ಬಿಜೆಪಿ ಕಾರ್ಯಕರ್ತರು, ಸಾರ್ವಜನಿಕರನ್ನು ಕರೆದು ಟೀ ಹಂಚುವ ಮೂಲಕ ದೇಶದ ಭವಿಷ್ಯದ ಪ್ರಧಾನಿ ಎಂದು ಬಿಜೆಪಿ ಬಿಂಬಿಸಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪರವಾಗಿ ಪ್ರಚಾರ ಅಭಿಯಾನವನ್ನು ನಡೆಸಿದರು.
ಮೋದಿ ಬೆಂಬಲಿಸಲು ಕೋರಿಕೆ: ನಮೋ ಟೀಸ್ಟಾಲ್ನ ನೇತೃತ್ವ ವಹಿಸಿದ್ದ ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಎಂ.ಎನ್. ರಾಜು ಮಾತನಾಡಿ, ಸ್ವಾತಂತ್ರ್ಯದ ಹೋರಾಟದ ಹೆಸರಿನಲ್ಲಿ ಹುಟ್ಟಿಕೊಂಡ ಕಾಂಗ್ರೆಸ್, ಇಂದು ದೇಶದಲ್ಲಿ ಅರಾಜಕತೆ, ಭಯೋತ್ಪಾದನೆ, ನಕ್ಸಲ್ ಹಾವಳಿ, ಭಾರತೀಯ ಸೈನಿಕರ ಹತ್ಯೆಯಂತಹ ಹೇಯ ಕೃತ್ಯಗಳು ನಡೆಯುತ್ತಿದ್ದರೂ ತನ್ನ ಇಚ್ಛಾಶಕ್ತಿಯನ್ನು ಪ್ರದರ್ಶಿಸಿ ದೇಶವನ್ನು ಉಳಿಸುವಲ್ಲಿ ಅಸಮರ್ಥವಾಗಿದ್ದು, ದೇಶದಲ್ಲಿ ಮತ್ತೆ ಸ್ವಾತಂತ್ರ್ಯಪ್ರೇಮ, ಸ್ವಾಭಿಮಾನದ ದಿನಗಳು ಮರುಕಳಿಸಲು ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿಯವರನ್ನು ಬೆಂಬಲಿಸುವಂತೆ ನಾಗರಿಕರನ್ನು ಕೋರಿದರು.
ಈ ಸಂದರ್ಭದಲ್ಲಿ ಅರಕಲಗೂಡು ಕ್ಷೇತ್ರ ಬಿಜೆಪಿ ಕಾರ್ಯದರ್ಶಿ ಶಿವಣ್ಣ, ಜಿಲ್ಲಾ ಕಾರ್ಯದರ್ಶಿ ಮೈಲಾರಯ್ಯ, ತಾಲೂಕು ಪ್ರಧಾನ ಕಾರ್ಯದರ್ಶಿ ಟಿ.ಆರ್.ನಂದೀಶ, ದಿವಾಕರ್, ತಾಲೂಕು ಯುವ ಮೋರ್ಚಾ ಅಧ್ಯಕ್ಷ ದೀಪಕ್, ತಾಲೂಕು ಉಪಾಧ್ಯಕ್ಷರಾದ ನಾಗರಾಜ್, ತೀರ್ಥೇಶ್, ಪ್ರದೀಪ್, ಕಳಸಮ್ಮ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

